| ಗುರುರಾಜ್ ಬಿ.ಎಸ್. ಬೆಂಗಳೂರು
ಆರ್ಸಿಬಿ ಮಹಿಳಾ ತಂಡದ ನಾಯಕ ಸ್ಮೃತಿ ಮಂದನಾ ಮುಂಬೈನವರಾಗಿದ್ದರೂ, ಕರ್ನಾಟಕದ ಜತೆಗಿನ ಸಂಬಂಧದ ಬಗ್ಗೆ ವಿಜಯವಾಣಿಗೆ ಭಾನುವಾರ ನೀಡಿದ ಕಿರುಸಂದರ್ಶನದಲ್ಲಿ ಹೇಳಿಕೊಂಡರು.
'ನನ್ನ ಹೆಸರಿನಲ್ಲಿರುವ ಮಂದನಾವನ್ನು ಗಮನಿಸಿ ನಾನು ಕರ್ನಾಟಕದವಳು ಎಂದು ಜನ ಭಾವಿಸುತ್ತಾರೆ. ನಾನು ಕರ್ನಾಟದವಳು ಅಲ್ಲ. ಆದರೆ, ಬೆಂಗಳೂರಿಗೆ ಆಗಮಿಸುವುದು ಖುಷಿ ನೀಡುತ್ತದೆ. ಆರ್ಸಿಬಿ ತಂಡ ಸೇರುವ ಮೊದಲು ರಾಷ್ಟ್ರೀಯ ಕ್ರಿಕೆಟ್ಅಕಾಡೆಮಿಗೆ (ಎನ್ಸಿಎ) ಹಲವು ಬಾರಿ ಆಗಮಿಸಿದ್ದೇನೆ. ಇಲ್ಲಿಯ ವಾತಾವರಣ ಹೆಚ್ಚಿನ ಖುಷಿ ನೀಡುತ್ತದೆ. ಆರ್ಸಿಬಿ ತಂಡ ಸೇರಿದ ಬಳಿಕ ಬೆಂಗಳೂರು ಮತ್ತಷ್ಟು ಹತ್ತಿರ ಎನಿಸಿದೆ' ಎಂದು ನಾಯಕಿ ಸ್ಮತಿ ಮಂದನಾ ತಿಳಿಸಿದರು.
ಪುರುಷರಿಗಿಂತ ಮೊದಲು ಆರ್ಸಿಬಿ ಮಹಿಳಾ ತಂಡ ಮೊದಲು ಪ್ರಶಸ್ತಿ ಜಯಿಸಲಿದೆ ಎಂಬ ರೀತಿಯಲ್ಲಿ ಐಪಿಎಲ್ ತಂಡದೊಂದಿಗೆ ಹೋಲಿಕೆ ಮಾಡುವುದು ನನಗೆ ಇಷ್ಟವಿಲ್ಲ. ಹಲವು ವರ್ಷಗಳಿಂದ ಆರ್ಸಿಬಿ ತಂಡ ಉತ್ತಮ ಪ್ರದರ್ಶನ ನೀಡುತ್ತ ಬಂದಿದೆ. ನಾವೂ ಈ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿದ್ದು, ಮುಂದಿನ ಪಂದ್ಯಗಳ ಮೇಲೆ ಗಮನಹರಿಸುತ್ತೇವೆ ಎಂದು ಸ್ಮೃತಿ ಹೇಳಿದರು.