ಗ್ರಾಸ್ ಐಲೆಟ್: ಇಲ್ಲಿನ ಡೆರೆನ್ ಸ್ಯಾಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನ ಸೂಪರ್ 08 ಪಂದ್ಯದಲ್ಲಿ ರೋಹಿತ್ ಪಡೆಯು ಮಾಜಿ ಚಾಂಪಿಯನ್ನರಿಗೆ ಶಾಕ್ ನೀಡಿದ್ದು, ಆಸ್ಟ್ರೇಲಿಯಾವನ್ನು ಮಣಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದು, ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಇನ್ನೂ ಪಂದ್ಯದ ಬಳಿಕ ಈ ಕುರಿತು ಮಾತನಾಡಿರುವ ಹಲವು ವಿಚಾರಗಳನ್ನು ಹಂಚಿಕೊಂಡಿದ್ದು. ಆಸ್ಟ್ರೇಲಿಯಾದವರು ಹಾಕಿದ ಮಂತ್ರವನ್ನೇ ಅಸ್ತ್ರವನ್ನಾಗಿಸಿಕೊಂಡ ಬಗ್ಗೆ ಹೇಳಿದ್ದಾರೆ.
ಟಾಸ್ ಸೊತು ಮೊದಲು ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (92 ರನ್, 41 ಎಸೆತ, 7 ಬೌಂಡರಿ, 8 ಸಿಕ್ಸರ್) ಶತಕವಂಚಿತ ಆಟದ ಫಲವಾಗಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ಬೃಹತ್ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ (76 ರನ್, 43 ಎಸೆತ, 9 ಬೌಂಡರಿ, 4 ಸಿಕ್ಸರ್) ಫಲವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ಗಳಿಸಿ ಸೋಲೊಪ್ಪಿಕೊಂಡಿತ್ತು. ಇನ್ನೂ ತಂಡದ ಅಮೋಘ ಪ್ರದರ್ಶನದ ಕುರಿತು ಮಾತನಾಡಿರುವ ರೋಹಿತ್ ಶರ್ಮಾ ಆಟಗಾರರನ್ನು ಹಾಡಿ ಹೊಗಳಿದ್ದಾರೆ.
ಅವರು ಮೊದಲಿಗೆ ಆಡುವಾಗ ಮೊದಲು ಹಾಕಿಕೊಂಡಿದ್ದ ಯೋಜನೆಯನ್ನು ಬದಕಲಾಯಿಸಿದರು. ಹೀಗಾಗಿ ನಾವು ಆಟದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕಾಯಿತು. ನನ್ನ ಪ್ರಕಾರ 200 ರನ್ಗಳು ಉತ್ತಮ್ಮ ಮೊತ್ತವಾಗಿದ್ದು, ಈ ರೀತಿಯ ಮೈದಾನದಲ್ಲಿ ಆಡುತ್ತಿರುವಾಗ ಏನು ಬೇಕಾದರೂ ಸಾಧ್ಯವಾಗಿಸುವುದಕ್ಕೆ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಳ್ಳಬೇಕಿದೆ.
ನಾವು ಯಾವುದಾದರು ತಂಡದ ವಿರುದ್ಧ ಆಡಬೇಕಾದರೆ ಹೆಚ್ಚು ರನ್ ಗಳಿಸಬೇಕಿದೆ ಮತ್ತು ಬೌಲರ್ಗಳ ಮೂಲಕ ಅದನ್ನು ಹೇಗೆ ನಿಯಂತ್ರಿಸಬೇಕು ಎಂದು ಯೋಚಿಸುತ್ತೇವೆ. ನಾವು ಅದನ್ನು ಕಾರ್ಯಗತಗೊಳಿಸಿದ್ದೇವೆ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.