ಕ್ರೀಡೆ

ಈ ನಾಲ್ವರು ಭಾರತೀಯ ಆಟಗಾರರಿಗೆ 15 ಕೋಟಿ ರೂ. ಫಿಕ್ಸ್​! ಹರಾಜಿನಲ್ಲಿ ಬಿಡ್​ಗೆ ಪೈಪೋಟಿ | IPL Auction

ನವದೆಹಲಿ: ನವೆಂಬರ್ 24 ಹಾಗೂ 25ರಂದು ನಡೆಯಲಿರುವ ಐಪಿಎಲ್​ ಹರಾಜಿನತ್ತ ಎಲ್ಲರ ಚಿತ್ತ ಮೂಡಿದ್ದು, ಯಾವ ಸ್ಟಾರ್​ ಆಟಗಾರರನ್ನು ಆಯಾ ಫ್ರಾಂಚೈಸಿ ಖರೀದಿ ಮಾಡಲಿದೆ? ಎಷ್ಟು ಕೋಟಿ ಹಣಕ್ಕಾಗಿ ಬಿಡ್​ ಮಾಡಲಿದೆ ಎಂಬ ಲೆಕ್ಕಾಚಾರಗಳು ಸದ್ಯ ಬಿರುಸಿನಿಂದ ಸಾಗಿದೆ. ಒಂದೆಡೆ ಲೆಕ್ಕಾಚಾರಗಳೆನೋ ಜೋರಾಗಿದ್ದರೂ, ಟಾರ್ಗೆಟ್​ ಮಾಡಿಕೊಂಡಿರುವ ಆಟಗಾರರನ್ನು ಖರೀದಿ ( IPL Auction) ಮಾಡೋದು ತಂಡಗಳಿಗೆ ದೊಡ್ಡ ಸವಾಲಾಗಿದೆ. ಇನ್ನು ಈ ಮಧ್ಯೆ ಭಾರತೀಯ ಆಟಗಾರರಿಗೂ ಬೇಡಿಕೆ ಹೆಚ್ಚಿದ್ದು, ಕ್ರಿಕೆಟ್ ಪ್ರಿಯರ ಮೆಚ್ಚುಗೆ ಗಳಿಸಿದವರನ್ನೇ ತಂಡಕ್ಕೆ ಖರೀದಿ ಮಾಡಲು ಫ್ರಾಂಚೈಸಿಗಳು ಚಿಂತನೆ ನಡೆಸಿವೆ.

ಸ್ಟಾರ್​ ವೇಗಿಗಳು, ಸ್ಪಿನ್ನರ್​ ಮತ್ತು ಬ್ಯಾಟರ್​ಗಳ ಖರೀದಿಗೆ ಎದುರುನೋಡುತ್ತಿರುವ ಫ್ರಾಂಚೈಸಿಗಳು, ರಿಟೇನ್ ಆಗದ ಆಟಗಾರರು ಮತ್ತು ಹರಾಜಿಗೆ ಬಂದಿರುವ ಆಲ್​ರೌಂಡ್​ ಪ್ಲೇಯರ್​ಗಳನ್ನು ಆಯ್ಕೆ ಮಾಡಿಕೊಳ್ಳುವುದರ ಬಗ್ಗೆ ಮ್ಯಾನೇಜ್​ಮೆಂಟ್​ ಜತೆಗೆ ಚರ್ಚಿಸುತ್ತಿದೆ. ಎರಡು ದಿನಗಳ ಕಾಲ ನಡೆಯಲಿರುವ ಆಕ್ಷನ್​ನಲ್ಲಿ ದುಬಾರಿ ಮೊತ್ತಕ್ಕೆ ಬಲಿಷ್ಠ ತಂಡಗಳನ್ನು ಸೇರುವ ಪಟ್ಟಿಗೆ ಒಂದಷ್ಟು ವಿದೇಶಿ ಆಟಗಾರರು ಸೇರಿಕೊಂಡಿದ್ದರೆ, 15 ಕೋಟಿ ರೂ. ಪಡೆಯುವ ಸಾಲಿಗೆ ಭಾರತೀಯ ಸ್ಟಾರ್​ ಕ್ರಿಕೆಟಿಗರು ಸೇರಿದ್ದಾರೆ. ಇದು ಹಲವರ ಕುತೂಹಲ ಹೆಚ್ಚಿಸಿದೆ. ಯಾರು ಆ ನಾಲ್ವರು ಆಟಗಾರರು? ಎಂಬುದರ ವಿವರ ಹೀಗಿದೆ.

ಹರಾಜಿಗೂ ಮುನ್ನ ನಡೆದ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ನಿಂದ ರಿಷಭ್ ಪಂತ್, ಲಖನೌ ಸೂಪರ್ ಜೈಂಟ್ಸ್​ನಿಂದ ಕೆ.ಎಲ್. ರಾಹುಲ್​, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಿಂದ ಫಾಫ್ ಡು ಪ್ಲೆಸಿಸ್​, ಗ್ಲೆನ್​ ಮ್ಯಾಕ್ಸ್​ವೆಲ್​, ಕೋಲ್ಕತ ನೈಟ್​ ರೈಡರ್ಸ್​ನಿಂದ ಶ್ರೇಯಸ್​ ಅಯ್ಯರ್​, ಮಿಚೆಲ್ ಸ್ಟಾರ್ಕ್​ ಸೇರಿದಂತೆ ಮುಂತಾದವರು ತಮ್ಮ ತಂಡದಲ್ಲಿ ಉಳಿಯದೆ, ಇದೀಗ ಹರಾಜಿನತ್ತ ಮುಖ ಮಾಡಿದ್ದಾರೆ. ಈ ಸ್ಟಾರ್ ಆಟಗಾರರ ಪೈಕಿ ರಿಷಭ್, ಅರ್ಷದೀಪ್​ ಸಿಂಗ್, ಶ್ರೇಯಸ್​ ಮತ್ತು ಕೆ.ಎಲ್. ರಾಹುಲ್​ಗೆ ಆಯಾ ಫ್ರಾಂಚೈಸಿಗಳು 15 ಕೋಟಿ ರೂ. ಮೊತ್ತಕ್ಕೆ ಖರೀದಿ ಮಾಡಲು ಮುಂದಾಗಲಿದೆ ಎಂದು ವರದಿಯೊಂದು ಉಲ್ಲೇಖಿಸಿದೆ. ಇದು ನಿಜವೇ? ಅಸಲಿಗೆ ಯಾರಿಗೆ ಎಷ್ಟು ಕೋಟಿ ರೂ. ಸಿಗಬಹದು ಎಂಬುದನ್ನು ನಾಳೆ ನಡೆಯಲಿರುವ ಹರಾಜಿನಲ್ಲಿ ಕಾದುನೋಡಬೇಕಿದೆ,(ಏಜೆನ್ಸೀಸ್).