ಕ್ರೀಡೆ

ಚೆಪಾಕ್‌ನಲ್ಲಿ ಇಂದು ‘ಕಿಂಗ್ಸ್’ ಮುಖಾಮುಖಿ: ಸಿಎಸ್‌ಕೆಗಿದೆ ಪ್ಲೇಆಫ್ ಅವಕಾಶ!

ಚೆನ್ನೈ: ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್ 18ನೇ ಆವೃತ್ತಿಯ ಪ್ಲೇಆ್ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದು, ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ತಪ್ಪಿಸಲು ಹೋರಾಡಬೇಕಿದೆ. ಬುಧವಾರ ಚೆಪಾಕ್‌ನಲ್ಲಿ ಪಂಜಾಬ್ ಕಿಂಗ್ಸ್ ಸವಾಲು ಎದುರಿಸಲಿರುವ ಸಿಎಸ್‌ಕೆ, ತವರಿನಲ್ಲಿ ಗೆಲುವಿ ಹಳಿಗೆ ಮರಳುವ ನಿರೀಕ್ಷೆಯಲ್ಲಿದೆ. ಸೋತರೆ ಸಿಎಸ್‌ಕೆ ಪ್ಲೇಆ್ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಶ್ರೇಯಸ್ ಅಯ್ಯರ್ ಬಳಗ ಅಂಕಪಟ್ಟಿಯ ಅಗ್ರ 2ರಲ್ಲಿ ಸ್ಥಾನದ ಅವಕಾಶ ವೃದ್ಧಿಸಿಕೊಳ್ಳುವ ಹಂಬಲದಲ್ಲಿದೆ.

ಸಿಎಸ್‌ಕೆ ಪಾಲಿಗೆ ನಿರಾಶಾದಾಯಕ ಆವೃತ್ತಿ ಇದಾಗಿದ್ದು, ತವರಿನ ಅಂಗಣದಲ್ಲಿ 4 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಎಂಎಸ್ ಧೋನಿ ಪಡೆ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 2 ಗೆಲುವು, 7 ಸೋಲಿನೊಂದಿಗೆ 4 ಅಂಕ ಮಾತ್ರ ಹೊಂದಿದೆ. ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದ್ದರಿಂದ 1 ಅಂಕಕ್ಕೆ ತೃಪ್ತಿಪಟ್ಟಿರುವ ಪಂಜಾಬ್ ಕಿಂಗ್ಸ್ ಪೂರ್ಣ ಅಂಕ ಪಡೆಯುವ ಹಂಬಲದಲ್ಲಿದೆ. ಇದುವರೆಗೆ ಆಡಿರುವ 9 ಪಂದ್ಯಗಳ ಪೈಕಿ 5 ಜಯ, 3 ಸೋಲು ಕಂಡು 11 ಅಂಕಗಳೊಂದಿಗೆ ಅಂಕಪಟ್ಟಿಯ 5ನೇ ಸ್ಥಾನದಲ್ಲಿದೆ. ಅಗ್ರ 2ರಲ್ಲಿ ಸ್ಥಾನ ಪಡೆದು, ಪ್ಲೇಆಫ್ಗೇರುವ ಅವಕಾಶ ವೃದ್ಧಿಸಿಕೊಳ್ಳಲು ಶ್ರೇಯಸ್ ಪಡೆಗೆ ಮಹತ್ವದ ಪಂದ್ಯ ಇದಾಗಿದೆ. ಪಂಜಾಬ್ ಕಿಂಗ್ಸ್ ತಂಡವೇ ೇವರಿಟ್ ಆಗಿ ಕಣಕ್ಕಿಳಿಯಲಿದೆ.

ಗೆಲುವಿನ ಹನ್ನೊಂದರ ಬಳಗದ ಆಟಗಾರರ ಆಯ್ಕೆ ಮಾಡುವಲ್ಲಿ ಸಿಎಸ್‌ಕೆ ತಂಡ ಪರದಾಡುತ್ತಿದೆ. ಋತುರಾಜ್ ಗಾಯಕ್ವಾಡ್ ಅಲಭ್ಯತೆಯ ಬಳಿಕ ಅನುಭವಿ ಧೋನಿ ನಾಯಕತ್ವ ವಹಿಸಿಕೊಂಡರೂ ತಂಡದ ಸ್ಥಿತಿ ಸುಧಾರಿಸಿಲ್ಲ. ಬದಲಿ ಆಟಗಾರರಾಗಿ ಸೇರಿಕೊಂಡಿರುವ ಆಯುಷ್ ಮಹಾತ್ರೆ ಹಾಗೂ ಡಿವಾಲ್ಡ್ ಬ್ರೆವಿಸ್ ಆಕ್ರಮಣಕಾರಿ ಬ್ಯಾಟಿಂಗ್‌ನೊಂದಿಗೆ ಭರವಸೆ ಮೂಡಿಸಿದ್ದಾರೆ. ಆರ್‌ಸಿಬಿ ಎದುರಿನ ತನ್ನ ಮುಂದಿನ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ಸವಾಲು ಹೊಂದಿದೆ.

ಸಿಎಸ್‌ಕೆಗಿದೆ ಪ್ಲೇಆಫ್ ಅವಕಾಶ!

ಸಿಎಸ್‌ಕೆ ಉಳಿದಿರುವ ಐದು ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದರೆ ಒಟ್ಟು 14 ಅಂಕ ಕಲೆಹಾಕುವ ಅವಕಾಶ ಹೊಂದಿದೆ. ಜತೆಗೆ ಇತರ ಪಂದ್ಯಗಳ ಲಿತಾಂಶ ಪರವಾಗಿ ಸಾಗಿದರೆ, ಪ್ಲೇಆ್ ಆಸೆ ಜೀವಂತವಿರಿಸುವ ಸಣ್ಣ ಅವಕಾಶವೂ ಹೊಂದಿದೆ. ಸಿಎಸ್‌ಕೆ ಅಗ್ರ 4ರಲ್ಲಿ ಸ್ಥಾನ ಪಡೆಯಬೇಕಾದರೆ, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕನಿಷ್ಠ 4 ಪಂದ್ಯ ಸೋಲ ಬೇಕು. ಜತೆಗೆ ಲಖನೌ, ಕೆಕೆಆರ್ ತಂಡಗಳು ಕನಿಷ್ಠ 2 ಸೋಲು ಕಾಣಬೇಕು, ಇದಕ್ಕೂ ಮುನ್ನ ಸಿಎಸ್‌ಕೆ ಉಳಿದಿರುವ ತನ್ನ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕು. ಸತತ ಐದು ಗೆಲುವು ಸಾಧಿಸಿ, ಇತರ ಲಿತಾಂಶಗಳೂ ವರವಾದರೆ ರನ್‌ರೇಟ್‌ನಲ್ಲಿ ಪ್ಲೇಆ್ ಸ್ಥಾನ ನಿರ್ಧರಿತವಾಗಲಿದೆ.

ಭಾರತೀಯರ ಬಲ

ಪಂಜಾಬ್ ಕಿಂಗ್ಸ್ ಭಾರತೀಯ ಆಟಗಾರರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದು, ಉತ್ತಮ ಲಯದಲ್ಲಿದೆ. ಆರ್‌ಸಿಬಿ ಎದುರು ತವರಿನ ಸೋಲಿನಂದ ಪಂಜಾಬ್ ಪುಟಿದೇಳುವ ವಿಶ್ವಾಸದಲ್ಲಿದೆ. ಪ್ರಿಯಾಂಶ್ ಆರ್ಯ (323), ಪ್ರಭ್‌ಸಿಮ್ರನ್ ಸಿಂಗ್(292), ಶ್ರೇಯಸ್ ಅಯ್ಯರ್ (288) ಬ್ಯಾಟಿಂಗ್ ವಿಭಾಗದ ಆಧಾರ ಎನಿಸಿದ್ದು, ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್ (11 ವಿಕೆಟ್), ಯಜುವೇಂದ್ರ ಚಾಹಲ್ (9) ಬಲ ತುಂಬಲಿದ್ದಾರೆ. ಆಲ್ರೌಂಡರ್ ಮಾರ್ಕೋ ಜಾನ್ಸೆನ್ (8) ಆಟ ತಂಡಕ್ಕೆ ಪ್ಲಸ್ ಪಾಯಿಂಟ್. ಸಿಎಸ್‌ಕೆ ಬ್ಯಾಟರ್‌ಗಳಿಗೆ ಸವಾಲೊಡ್ಡಲಿದ್ದಾರೆ. ಹಿಂದಿನ ಮುಖಾಮುಖಿಯಲ್ಲಿ ಸಿಎಸ್‌ಕೆ ಎದುರಿನ ಗೆಲುವು ಪಂಜಾಬ್ ಮೇಲುಗೈ ಒದಗಿಸಿದೆ.

ಮುಖಾಮುಖಿ: 31

ಸಿಎಸ್‌ಕೆ:16

ಪಂಜಾಬ್: 15

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್