ಕ್ರೀಡೆ

ಸಿಂಥೆಟಿಕ್ ಷಟಲ್​ಕಾಕ್ ಬಳಕೆ ಸದ್ಯಕ್ಕಿಲ್ಲ?

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ (ಬಿಡಬ್ಲ್ಯುಎಫ್) ಮುಂದಿನ ವರ್ಷದಿಂದ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸಿಂಥೆಟಿಕ್ ಷಟಲ್​ಕಾಕ್ ಬಳಕೆಗೆ ಕಳೆದ ಜನವರಿಯಲ್ಲೇ ನಿರ್ಧರಿಸಿತ್ತು. ಆದರೆ, ಕರೊನಾ ಭೀತಿಯಿಂದಾಗಿ ಈಗ ಬ್ಯಾಡ್ಮಿಂಟನ್ ಚಟುವಟಿಕೆಗಳೇ ನಿಂತಿರುವುದರಿಂದಾಗಿ ಸಿಂಥೆಟಿಕ್ ಷಟಲ್​ಕಾಕ್ ಜತೆಗೆ ಅಭ್ಯಾಸ ನಡೆಸಿ ಅದಕ್ಕೆ ಒಗ್ಗಿ ಕೊಳ್ಳಲು ಸಮಯದ ಅಭಾವ ಇದೆ.

ಹೀಗಾಗಿ ಅದರ ಬಳಕೆ ವಿಳಂಬವಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಈಗಿರುವ ಬಾತುಕೋಳಿ ಗರಿಗಳ ಷಟಲ್ ಬಳಕೆ ಮುಂದುವರಿಯಲಿದೆ. ಗರಿಗಳ ಷಟಲ್​ಗಿಂತ ಅಗ್ಗಮತ್ತು ದೀರ್ಘಬಾಳಿಕೆ ಸಿಂಥೆಟಿಕ್ ಬಳಕೆಯತ್ತ ಒಲವು ತೋರಲು ಕಾರಣವಾಗಿದೆ.