ಮುಂಬೈ: ಆತಿಥೇಯ ಮುಂಬೈ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ 89ನೇ ಆವೃತ್ತಿಯಲ್ಲಿ ದಾಖಲೆಯ 42ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ದೇಶೀಯ ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ಮುಕ್ತ್ತಾಯಗೊಂಡ ೈನಲ್ ಪಂದ್ಯದಲ್ಲಿ ನಾಯಕ ಅಕ್ಷಯ್ ವಾಡ್ಕರ್ (102 ರನ್, 199 ಎಸೆತ, 9 ಬೌಂಡರಿ, 1 ಸಿಕ್ಸರ್) ಶತಕದ ಹೋರಾಟದ ನಡುವೆಯೂ ಪ್ರವಾಸಿ ವಿದರ್ಭ ತಂಡ 169 ರನ್‌ಗಳಿಂದ ಮುಂಬೈ ತಂಡಕ್ಕೆ ಶರಣಾಯಿತು. ಇದರೊಂದಿಗೆ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಸಾರಥ್ಯದ ಮುಂಬೈ ತಂಡ 8 ವರ್ಷಗಳ ಬಳಿಕ ಅಂದರೆ 2015-16ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಎತ್ತಿ ಹಿಡಿಯಿತು. ಈ ಮೂಲಕ 2023-24ರ ದೇಶೀಯ ಕ್ರಿಕೆಟ್ ಋತುವಿಗೆ ತೆರೆ ಬಿದ್ದಿದ್ದು, ಇನ್ನು ಎಲ್ಲರ ಗಮನ ಐಪಿಎಲ್ ಟಿ20 ಹಬ್ಬದತ್ತ ಹರಿಯಲಿದೆ.
₹10 ಕೋಟಿ ಬಹುಮಾನ: ಪ್ರಶಸ್ತಿ ಜಯದೊಂದಿಗೆ ಮುಂಬೈ ತಂಡ ಒಟ್ಟು 10 ಕೋಟಿ ರೂ. ಬಹುಮಾನ ಗಳಿಸಿತು. ಮಿರುಗುವ ರಣಜಿ ಟ್ರೋಫಿಯೊಂದಿಗೆ ಬಿಸಿಸಿಐ 5 ಕೋಟಿ ರೂ. ಮೊತ್ತದ ಚೆಕ್ ನೀಡಿದರೆ, ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ತನ್ನ ಕಡೆಯಿಂದ ತಂಡಕ್ಕೆ 5 ಕೋಟಿ ರೂ. ಬಹುಮಾನ ೋಷಿಸಿತು. ರನ್ನರ್ ಅಪ್ ವಿದರ್ಭ ತಂಡ 3 ಕೋಟಿ ರೂ. ಗಳಿಸಿತು.
1. ಮುಶೀರ್ ಖಾನ್ (19 ವರ್ಷ,16 ದಿನ) ರಣಜಿ ಟ್ರೋಫಿ ೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕಿರಿಯ ಆಟಗಾರ ಎನಿಸಿದರು. ಶ್ರೇಯಸ್ ಅಯ್ಯರ್ (21 ವರ್ಷ, 83 ದಿನ) ಹಿಂದಿನ ಸಾಧಕ. ಕೆಎಲ್ ರಾಹುಲ್ (21 ವರ್ಷ, 291 ದಿನ) ನಂತರದ ಸ್ಥಾನದಲ್ಲಿದ್ದಾರೆ.
26: ಅಜಿಂಕ್ಯ ರಹಾನೆ ಮುಂಬೈಗೆ ರಣಜಿ ಟ್ರೋಫಿ ಗೆದ್ದುಕೊಟ್ಟ 26ನೇ ನಾಯಕ ಎನಿಸಿದರು. ಅಜಿತ್ ವಾಡೇಕರ್ ಸಾರಥ್ಯದಲ್ಲಿ ಮುಂಬೈ ಗರಿಷ್ಠ 4 ಬಾರಿ ಪ್ರಶಸ್ತಿ ಜಯಿಸಿದೆ.
10: ಬಾಂಬೆ ಆಗಿದ್ದಾಗ 32 ಬಾರಿ ರಣಜಿ ಟ್ರೋಫಿ ಗೆದ್ದಿದ್ದರೆ, ಮುಂಬೈ ಆಗಿ ಹೆಸರು ಬದಲಾದ ಬಳಿಕ ಇದು 10ನೇ ಪ್ರಶಸ್ತಿ ಗೆಲುವಾಗಿದೆ. ಒಟ್ಟಾರೆ ತವರು ನೆಲದಲ್ಲೇ ಗೆದ್ದ 26ನೇ ರಣಜಿ ಕಿರೀಟವಾಗಿದೆ. ವಾಂಖೆಡೆಯಲ್ಲಿ ಇದು 11ನೇ ರಣಜಿ ಗೆಲುವಾಗಿದೆ.
ಧವಳ್ ಕುಲಕರ್ಣಿಗೆ ಗೆಲುವಿನ ವಿದಾಯ: ಮುಂಬೈ ತಂಡದ ಅನುಭವಿ ವೇಗಿ ಧವಳ್ ಕುಲಕರ್ಣಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಗೆಲುವಿನ ವಿದಾಯ ಹೇಳಿದ್ದಾರೆ. 35 ವರ್ಷದ ಧವಳ್ ಹಾಲಿ ರಣಜಿ ಋತುವಿನಲ್ಲಿ ಮುಂಬೈ ತಂಡದ ಅಂತಿಮ ಲೀಗ್ ಪಂದ್ಯಕ್ಕೂ ಮುನ್ನವೇ ಕ್ರಿಕೆಟ್‌ಗೆ ನಿವೃತ್ತಿ ಹೇಳುವುದಾಗಿ ತಿಳಿಸಿದರು. ಆದರೆ ನಾಕೌಟ್ ಪಂದ್ಯಗಳ ಬಳಿಕ ನಿರ್ಧಾರ ಪ್ರಕಟಿಸುವಂತೆ ಮುಂಬೈ ಕ್ರಿಕೆಟ್ ಸಂಸ್ಥೆಯ ಮನವಿ ಮಾಡಿತು. ರಣಜಿ ೈನಲ್‌ನಲ್ಲಿ ವಿದರ್ಭ ತಂಡ ಮೊದಲ ವಿಕೆಟ್ ಹಾಗೂ ಕೊನೆಯ ವಿಕೆಟ್ ಪಡೆಯುವ ಮೂಲಕ ಧವಳ್ ಕುಲಕರ್ಣಿ ತನ್ನ ಅಂತಿಮ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡರು. ಭಾರತದ ಪರ 12 ಏಕದಿನ, 2 ಟಿ20 ಆಡಿರುವ ಧವಳ್ ಕುಲಕರ್ಣಿ, 5ನೆ ಬಾರಿಗೆ ರಣಜಿ ಚಾಂಪಿಯನ್ ಮುಂಬೈ ತಂಡದ ಭಾಗವಾಗಿದ್ದಾರೆ.