ಕ್ರೀಡೆ

12 ವರ್ಷಗಳ ಬಳಿಕ ಜಾಗತಿಕ ಟಿ20 ಟೂರ್ನಿ ಪುನರಾರಂಭಕ್ಕೆ ಐಸಿಸಿ ಸಮ್ಮತಿ: ಟೆಸ್ಟ್​ ಕ್ರಿಕೆಟ್​ ಭವಿಷ್ಯ ವರ್ಷಾಂತ್ಯದೊಳಗೆ ತೀರ್ಮಾನ

ಸಿಂಗಾಪುರ: ಚಾಂಪಿಯನ್ಸ್​ ಲೀಗ್​ ಟಿ20 ಟೂರ್ನಿ ಬರೋಬ್ಬರಿ 12 ವರ್ಷಗಳ ಬಳಿಕ ಮುಂದಿನ ವರ್ಷ ಸೆಪ್ಟೆಂಬರ್​ನಲ್ಲಿ ಪುನರಾರಂಭಗೊಳ್ಳುವುದು ಬಹುತೇಕ ಖಚಿತಗೊಂಡಿದೆ. ಸಿಂಗಾಪುರದಲ್ಲಿ ನಡೆದ ಐಸಿಸಿ ವಾರ್ಷಿಕ ಮಹಾಸಭೆಯಲ್ಲಿ ಟೂರ್ನಿ ಮರು ಆಯೋಜಿಸಲು ಪ್ರಮುಖ ಸದಸ್ಯ ದೇಶಗಳು ಒಲವು ತೋರಿವೆ.

ವಿವಿಧ ದೇಶಗಳ ಫ್ರಾಂಚೈಸಿ ಲೀಗ್​ಗಳ ವಿಜೇತ ಮತ್ತು ಕೆಲ ರನ್ನರ್​ಅಪ್​ ತಂಡಗಳು ಆಡುವ ಟೂರ್ನಿ ಚಾಂಪಿಯನ್ಸ್​ ಲೀಗ್​ ಆಗಿದ್ದು, 2008ರಲ್ಲಿ ಇದರ ಮೊದಲ ಆವೃತ್ತಿ ನಡೆದಿತ್ತು. ಟೂರ್ನಿಯ 6ನೇ ಹಾಗೂ ಕೊನೇ ಆವೃತ್ತಿ 2014ರಲ್ಲಿ ನಡೆದಿತ್ತು. ನಂತರದಲ್ಲಿ ಪ್ರಾಯೋಜಕರ ಕೊರತೆ ಮತ್ತು ಟಿವಿ ನೇರಪ್ರಸಾರದಲ್ಲಿ ಆರ್ಥಿಕ ನಷ್ಟ ಆಗಿದ್ದರಿಂದ ಟೂರ್ನಿ ಸ್ಥಗಿತಗೊಂಡಿತ್ತು.

ಚಾಂಪಿಯನ್ಸ್​ ಲೀಗ್​ನಲ್ಲಿ ಈ ಹಿಂದೆ ಕ್ರಿಕೆಟ್​ ಆಸ್ಟ್ರೆಲಿಯಾ, ಬಿಸಿಸಿಐ ಮತ್ತು ಕ್ರಿಕೆಟ್​ ದಣ ಆಫ್ರಿಕಾ ಪ್ರಮುಖ ಪಾಲುದಾರ ಮತ್ತು ಸಂಟಕ ಆಗಿತ್ತು. ಇತ್ತೀಚೆಗೆ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಯೂ, ಫಿಫಾ ಕ್ಲಬ್​ ವಿಶ್ವಕಪ್​ನಿಂದ ಸ್ಫೂರ್ತಿ ಪಡೆದು ಚಾಂಪಿಯನ್ಸ್​ ಲೀಗ್​ ಪುನರಾರಂಭದ ಆಸಕ್ತಿ ತೋರಿತ್ತು. ಇದೀಗ ಫ್ರಾಂಚೈಸಿ ಟಿ20 ಲೀಗ್​ ವಿಶ್ವದೆಲ್ಲೆಡೆ ನಡೆಯುತ್ತಿದ್ದು, ಚಾಂಪಿಯನ್ಸ್​ ಲೀಗ್​ನಲ್ಲಿ ಆಡಲು ಹೆಚ್ಚಿನ ತಂಡಗಳು ಆಸಕ್ತಿ ತೋರಬಹುದು. ವಿಶ್ವದ ಕೆಲ ಪ್ರಮುಖ ಟಿ20 ಆಟಗಾರರು, ವಿವಿಧ ದೇಶಗಳ ಟಿ20 ಲೀಗ್​ಗಳಲ್ಲಿ ಆಡುತ್ತಿದ್ದು, 4-5 ತಂಡಗಳ ಸದಸ್ಯರೂ ಆಗಿದ್ದಾರೆ. ಹೀಗಾಗಿ ಅವರು ಚಾಂಪಿಯನ್ಸ್​ ಲೀಗ್​ನಲ್ಲಿ ಆಡಲು ಯಾವುದಾದರು ಒಂದು ತಂಡವನ್ನು ಆಯ್ದುಕೊಳ್ಳುವ ಆಯ್ಕೆಯನ್ನು ನೀಡಬಹುದು. ಹೊಸ ಚಾಂಪಿಯನ್ಸ್​ ಲೀಗ್​ನ ಸ್ವರೂಪ ಮತ್ತು ಆದಾಯ ಹಂಚಿಕೆಯ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ವರದಿಯಾಗಿದೆ.

ಟೆಸ್ಟ್​ ಕ್ರಿಕೆಟ್​ ಭವಿಷ್ಯ ವರ್ಷಾಂತ್ಯದೊಳಗೆ ತೀರ್ಮಾನ

ಟೆಸ್ಟ್​ ಕ್ರಿಕೆಟ್​ ಅನ್ನು ಎರಡು ಹಂತಗಳಲ್ಲಿ ವಿಭಜಿಸುವ ಬಗ್ಗೆ ನಿರ್ಧರಿಸುವ ಹೊಣೆಯನ್ನು ಐಸಿಸಿ ಈಗಾಗಲೆ ಕಾರ್ಯಪಡೆಗೆ ವಹಿಸಿದ್ದು, ವರ್ಷಾಂತ್ಯದೊಳಗೆ ಈ ಬಗ್ಗೆ ತೀರ್ಮಾನ ಹೊರಬೀಳುವ ನಿರೀೆ ಇದೆ. 2027ರಿಂದ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಈ ಹೊಸ ಸ್ವರೂಪ ಜಾರಿಗೆ ಬರಲಿದೆ. ಎಂಟು ಸದಸ್ಯರ ಕಾರ್ಯಪಡೆ ಹಾಲಿ ವರ್ಷಾಂತ್ಯಕ್ಕೆ ತನ್ನ ಶಿಾರಸುಗಳನ್ನು ಐಸಿಸಿ ಚೇರ್ಮನ್​ ಜಯ್​ ಷಾಗೆ ಸಲ್ಲಿಸಲಿದೆ ಎನ್ನಲಾಗಿದೆ.

ನೇಪಾಳ, ಅಮೆರಿಕ, ಭೂತಾನ್​ಗೆ

ಐಸಿಸಿ ಡೆವಲಪ್​ಮೆಂಟ್​ ಪ್ರಶಸ್ತಿ

ದಣ ಏಷ್ಯಾದ ದೇಶಗಳಾದ ನೇಪಾಳ, ಭೂತಾನ್​ ಜತೆಗೆ ಅಮೆರಿಕ ಸಹಿತ 8 ದೇಶಗಳು ಐಸಿಸಿಯ ಡೆವಲಪ್​ಮೆಂಟ್​ ಪ್ರಶಸ್ತಿಗೆ ಭಾಜನವಾಗಿವೆ. ಐಸಿಸಿ ವಾರ್ಷಿಕ ಮಹಾಸಭೆಯಲ್ಲಿ ಈ ಗೌರವವನ್ನು ನೀಡಲಾಗಿದೆ. ಕಳೆದ ವರ್ಷದ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡಿ ಸೂಪರ್​&8 ಪ್ರವೇಶಿಸಿದ ಸಾಧನೆಗಾಗಿ ಅಮೆರಿಕಕ್ಕೆ ವರ್ಷದ ಅತ್ಯುತ್ತಮ ನಿರ್ವಹಣೆಯ ಪ್ರಶಸ್ತಿ ನೀಡಲಾಗಿದೆ. ನೇಪಾಳದ ಕ್ರಿಕೆಟ್​ ಪ್ರೇಮಿಗಳು ಡಿಜಿಟಲ್​ನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮತ್ತು ಭೂತಾನ್​ನಲ್ಲಿ ಶಾಲಾ ಬಾಲಕಿಯರ ಕ್ರಿಕೆಟ್​ ಟೂರ್ನಿ ಆರಂಭಿಸುವ ಮೂಲಕ ಮಹಿಳಾ ಕ್ರಿಕೆಟ್​ಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಕ್ಕಾಗಿ ಪ್ರಶಸ್ತಿ ವಿತರಿಸಲಾಗಿದೆ. ಇಂಡೋನೇಷ್ಯಾ, ನಮೀಬಿಯಾ, ಸ್ಕಾಟ್ಲೆಂಡ್​, ತಂಜಾನಿಯಾ ಮತ್ತು ವನೌತು ಐಸಿಸಿ ಡೆವಲಪ್​ಮೆಂಟ್​ ಪ್ರಶಸ್ತಿ ಪಡೆದಿರುವ ಇತರ ದೇಶಗಳಾಗಿವೆ.