ಕ್ರೀಡೆ

ಹರಿಯಾಣ ಆಲ್‌ರೌಂಡ್‌ ಆಟಕ್ಕೆ ಮಂಕಾದ ಡೆಲ್ಲಿ: ದಬಾಂಗ್‌ ಡೆಲ್ಲಿ ವಿರುದ್ಧ ಸ್ಟೀಲರ್ಸ್‌ಗೆ ಜಯ

ಹೈದರಾಬಾದ್‌: ಐದಕ್ಕೂ ಹೆಚ್ಚು ಬಾರಿ ಲಭಿಸಿದ ಸೂಪರ್‌ ಟ್ಯಾಕಲ್‌ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಹರಿಯಾಣ ಸ್ಟೀಲರ್ಸ್‌, ತನ್ನ ಆಲ್‌ರೌಂಡ್‌ ಪ್ರದರ್ಶನದ ಬಲದಿಂದ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ 21ನೇ ಪಂದ್ಯದಲ್ಲಿದಬಾಂಗ್‌ ಡೆಲ್ಲಿತಂಡವನ್ನು 7 ಅಂಕಗಳಿಂದ ಮಣಿಸಿತು.

ಇದರೊಂದಿಗೆ ಹಾಲಿ ಟೂರ್ನಿಯಲ್ಲಿಸತತ 2ನೇ ಜಯ ದಾಖಲಿಸಿದ ಹರಿಯಾಣ ಸ್ಟೀಲರ್ಸ್‌, ಹತ್ತು ಅಂಕಗಳನ್ನು ಕಲೆಹಾಕಿತು. ಅತ್ತ ರೇಡರ್‌ ಅಶು ಮಲಿಕ್‌ ಏಕಾಂಗಿ ಹೋರಾಟದ ಹೊರತಾಗಿಯೂ ದಬಾಂಗ್‌ ಡೆಲ್ಲಿ2ನೇ ಸೋಲಿಗೆ ಗುರಿಯಾಯಿತು.

ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿಸೋಮವಾರ ನಡೆದ ಮೊದಲ ಹಣಾಹಣಿಯಲ್ಲಿ41-34 ಅಂಕಗಳ ಅಂತರದಿಂದ ಡೆಲ್ಲಿತಂಡಕ್ಕೆ ಆಘಾತ ನೀಡಿತು. ಇಡೀ ಪಂದ್ಯದಲ್ಲಿಒಮ್ಮೆಯೂ ಮುನ್ನಡೆ ಬಿಟ್ಟುಕೊಡದೆ ಗೆಲುವು ಸಾಧಿಸಿದ ಹರಿಯಾಣ ಸ್ಟೀಲರ್ಸ್‌ ಪರ ಶಿವಂ ಪತರೆ(8 ಅಂಕ), ಮೊಹಮ್ಮದ್‌ದ್ರಜಾ(10 ಅಂಕ), ಜೈದೀಪ್‌ (5ಅಂಕ) , ಸಂಜಯ್‌(4 ಅಂಕ), ಮತ್ತು ನವೀನ್‌(4 ಅಂಕ) ಮಿಂಚಿದರೆ, ದಬಾಂಗ್‌ ಡೆಲ್ಲಿಪರ ಅಶು ಮಲಿಕ್‌(13) ಏಕಾಂಗಿ ಹೋರಾಟ ನಡೆಸಿದರು.

ಪಂದ್ಯ ಮುಕ್ತಾಯಕ್ಕೆ 5 ನಿಮಿಷಗಳು ಬಾಕಿ ಇರುವಾಗ 8( 37-29) ಅಂಕಗಳ ಮುನ್ನಡೆ ಕಾಯ್ದುಕೊಂಡ ಹರಿಯಾಣ, ಅಂತಿಮ ಹಂತದಲ್ಲಿಎಚ್ಚರಿಕೆ ಆಟಕ್ಕೆ ಒತ್ತು ನೀಡಿತು. ಇದರ ನಡುವೆಯೂ ದಿಲ್ಲಿಆಟಗಾರರು ರೇಡಿಂಗ್‌ನಲ್ಲಿನಿಯಮಿತವಾಗಿ ಅಂಕ ಗಳಿಸಿ ಪಂದ್ಯವನ್ನು ರೋಚಕ ಘಟ್ಟದತ್ತ ಮುನ್ನಡೆಯುವಂತೆ ನೋಡಿಕೊಳ್ಳಲು ಯತ್ನಿಸಿದರು. ಈ ಮಧ್ಯೆ, ಆಲ್‌ರೌಂಡರ್‌ ಮೊಹಮ್ಮದ್ರಜಾ ಎದುರಾಳಿ ರೇಡರ್‌ಗಳನ್ನು ಪದೇ ಪದೇ ತಮ್ಮ ಆ್ಯಂಕಲ್‌ ಹೋಲ್ಡ್‌ನಲ್ಲಿಬಂಧಿಯಾಗಿಸಿ ಗಮನ ಸೆಳೆದರು.

11 ಅಂಕಗಳ ಭಾರಿ ಹಿನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ದಬಾಂಗ್‌ ದಿಲ್ಲಿ, ನಾಯಕ ನವೀನ್‌ ಕುಮಾರ್‌ ಫಾರ್ಮ್‌ ಕಂಡುಕೊಳ್ಳುವುದರೊಂದಿಗೆ ಹಿನ್ನಡೆಯನ್ನು ತಗ್ಗಿಸುವ ಪ್ರಯತ್ನ ನಡೆಸಿತು. ಆದರೆ ಸೂಪರ್‌ ಟ್ಯಾಕಲ್‌ನಲ್ಲಿಹರಿಯಾಣ ಸ್ಟೀಲರ್ಸ್‌ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡ ಕಾರಣ ದಿಲ್ಲಿಹೋರಾಟ ಆಗಾಗ್ಗೆ ಹೊಳಪು ಕಳೆದುಕೊಳ್ಳುತ್ತಿತ್ತು. ಆಲ್‌ರೌಂಡರ್‌ ಮೊಹಮ್ಮದ್‌ದ್ರಜಾ, ಸಂಜ್‌ ಸೇರಿದಂತೆ ಸಂಘಟಿತ ಹೋರಾಟ ನೀಡಿದ ಹರಿಯಾಣ 30ನೇ ನಿಮಿಷದ ವೇಳೆಗೆ ತಂಡದ ಮುನ್ನಡೆಯನ್ನು 33-23ರಲ್ಲಿಕಾಯ್ದುಕೊಂಡು ಗೆಲುವಿನತ್ತ ಹೆಜ್ಜೆ ಹಾಕಿತು.

ಇದಕ್ಕೂ ಮುನ್ನ ಆಲ್‌ರೌಂಡ್‌ ಪ್ರದರ್ಶನ ನೀಡಿದ ಹರಿಯಾಣ ಸ್ಟೀಲರ್ಸ್‌ ತಂಡ ಪಂದ್ಯದ ಪ್ರಥಮಾರ್ಧಕ್ಕೆ 24-13 ಅಂಕಗಳಿಂದ ದಬಾಂಗ್‌ ದಿಲ್ಲಿತಂಡದ ವಿರುದ್ಧ ಪ್ರಭುತ್ವ ಸಾಧಿಸಿತು. 18ನೇ ನಿಮಿಷದಲ್ಲಿದಿಲ್ಲಿತಂಡವನ್ನು ಮೊದಲ ಬಾರಿ ಆಲೌಟ್‌ ಮಾಡುವ ಜತೆಗೆ ಟ್ಯಾಕಲ್‌ನಲ್ಲಿ9 ಅಂಕ ಹಾಗೂ ರೇಡಿಂಗ್‌ನಲ್ಲಿ13 ಅಂಕಗಳನ್ನು ಕಲೆಹಾಕಿದ ಹರಿಯಾಣ ತಂಡ ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು.

ಪಂದ್ಯ ಆರಂಭದಿಂದಲೇ ಮುನ್ನಡೆ ಕಂಡುಕೊಂಡ ಹರಿಯಾಣ ಆಟಗಾರರು, ಮೊದಲ 5 ನಿಮಿಷಗಳ ಆಟದಲ್ಲಿ7-2ರಲ್ಲಿಅಂತರ ಕಾಯ್ದುಕೊಂಡಿತು. ನಂತರ ಜೈದೀಪ್‌, ಶಿವಂ ಮತ್ತು ಡಿಫೆಂಡರ್‌ ಪಜ್ಹಲ್‌ ಅತ್ರಾಚಲಿ ಅವರ ಮಿಂಚಿನ ಆಟದ ಬಲದಿಂದ ಮುನ್ನಡೆಯನ್ನು ಹಿಗ್ಗಿಸುತ್ತಾ ಸಾಗಿತು. 15ನೇ ನಿಮಿಷದ ವೇಳೆಗೆ 16-6ರಲ್ಲಿಅಂತರ ಕಾಯ್ದುಕೊಂಡ ಹರಿಯಾಣ, ಎದುರಾಳಿ ತಂಡಕ್ಕೆ ದೊಡ್ಡ ಸವಾಲಿಗಿ ಪರಿಣಮಿಸಿತು. ಅಶು ಮಲಿಕ್‌ ರೇಡಿಂಗ್‌ನಲ್ಲಿಮಿಂಚಿದರೂ ಇತರ ಆಟಗಾರರು ಸಾಥ್‌ ನೀಡದ ಕಾರಣ ದಿಲ್ಲಿದಬಾಂಗ್‌ ಹಿನ್ನಡೆಗೆ ಗುರಿಯಾಯಿತು.

ಅಕ್ಟೋಬರ್‌ 29ರಂದು ಬೆಂಗಾಲ್‌ ವಾರಿಯರ್ಸ್‌ ಮತ್ತು ಪುಣೇರಿ ಪಲ್ಟನ್‌ ಹಾಗೂ ಬೆಂಗಳೂರು ಬುಲ್ಸ್‌ ಮತ್ತು ದಬಾಂಗ್‌ ದಿಲ್ಲಿತಂಡಗಳು ಪೈಪೋಟಿ ನಡೆಸಲಿವೆ.