ಕ್ರೀಡೆ

ಧೂಮಪಾನ ಮಾಡಿ ಪ್ಯಾರಿಸ್​​ ಒಲಿಂಪಿಕ್ಸ್​ನಿಂದ ಹೊರಬಿದ್ದ ಜಿಮ್ನಾಸ್ಟ್​!

ಟೋಕಿಯೊ: ಜಪಾನ್​ನ ಆರ್ಟಿಸ್ಟಿಕ್​ ಜಿಮ್ನಾಸ್ಟಿಕ್ಸ್​ ತಂಡದ ನಾಯಕಿ ಶೋಕೊ ಮಿಯಾಟ ಧೂಮಪಾನ ಮಾಡುವ ಮೂಲಕ ತಂಡದ ನೀತಿಸಂಹಿತೆ ಉಲ್ಲಂಘಿಸಿದ ತಪ್ಪಿಗಾಗಿ ಪ್ಯಾರಿಸ್​ ಒಲಿಂಪಿಕ್ಸ್​ನಿಂದ ಹೊರಬಿದ್ದಿದ್ದಾರೆ.

1964ರ ಟೋಕಿಯೊ ಒಲಿಂಪಿಕ್ಸ್​ ಬಳಿಕ ಮೊದಲ ಬಾರಿ ಪದಕ ಗೆಲ್ಲುವ ಹಂಬಲದಲ್ಲಿರುವ ಜಪಾನ್​ ಮಹಿಳಾ ಜಿಮ್ನಾಸ್ಟಿಕ್ಸ್​ ತಂಡ ಮೊನಾಕೊದಲ್ಲಿ ತರಬೇತಿ ಶಿಬಿರದಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿಕೊಂಡಿತ್ತು. ಈ ವೇಳೆ 19 ವರ್ಷದ ಮಿಯಾಟ ಧೂಮಪಾನ ಮಾಡಿರುವುದಕ್ಕಾಗಿ ತವರಿಗೆ ಮರಳಿದ್ದು, ವಿಚಾರಣೆ ಎದುರಿಸಲಿದ್ದಾರೆ ಎಂದು ಜಪಾನ್​ ಜಿಮ್ನಾಸ್ಟಿಕ್ಸ್​ ಸಂಸ್ಥೆ ತಿಳಿಸಿದೆ.