ಬೆಂಗಳೂರು: ಸರ್ವಾಂಗೀಣ ನಿರ್ವಹಣೆ ತೋರಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ದಿನದ 2ನೇ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಎದುರು 2 ರನ್‌ಗಳ ರೋಚಕ ಗೆಲುವು ದಾಖಲಿಸಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸೆಣಸಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ 61 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು 100ರ ಗಡಿ ದಾಟುವುದು ದುಸ್ತರ ಎನಿಸಿತು. ಆಗ ಮಧ್ಯಮ ಕ್ರಮಾಂಕದಲ್ಲಿ ಸೂರಜ್ ಆಹುಜಾ (35 ರನ್, 23 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಜಿ.ನವೀನ್ (29 ರನ್, 21 ಎಸೆತ, 3 ಬೌಂಡರಿ, 1 ಸಿಕ್ಸರ್) ಉಪಯುಕ್ತ ಕೊಡುಗೆಯಿಂದ ಅಂತಿಮವಾಗಿ 9 ವಿಕೆಟ್‌ಗೆ 153 ರನ್ ಕಲೆಹಾಕಿತು. ಪ್ರತಿಯಾಗಿ ಉತ್ತಮ ಆರಂಭ ಪಡೆದ ನಡುವೆಯೂ ಮಧ್ಯ ಕ್ರಮಾಂಕ ಬ್ಯಾಟರ್‌ಗಳ ವೈಲ್ಯದಿಂದ ಗುಲ್ಬರ್ಗಾ ಮಿಸ್ಟಿಕ್ಸ್, 5 ವಿಕೆಟ್‌ಗೆ 151 ರನ್‌ಗಳಿಸಲಷ್ಟೇ ಶಕ್ತಗೊಂಡಿತು.
ಬೆಂಗಳೂರು ಬ್ಲಾಸ್ಟರ್ಸ್: 9 ವಿಕೆಟ್‌ಗೆ 153 (ಎಲ್ ಆರ್ ಚೇತನ್ 7, ಮಯಾಂಕ್ 20, ಸೂರಜ್ 35, ಜಿ.ನವೀನ್ 29, ಕ್ರಾಂತಿ ಕುಮಾರ್ 16, ಅಭಿಷೇಕ್ ಪ್ರಭಾಕರ್ 24ಕ್ಕೆ 3, ವೈಶಾಕ್ 32ಕ್ಕೆ 3).
ಗುಲ್ಬರ್ಗಾ ಮಿಸ್ಟಿಕ್ಸ್: 5 ವಿಕೆಟ್‌ಗೆ 151 (ಲವನೀತ್ 56, ಪಡಿಕ್ಕಲ್ 40, ಆರ್.ಸ್ಮರಣ್ 15, ರಿತೇಶ್ 20, ಪೃಥ್ವಿ 12, ಶುಭಾಂಗ್ 39ಕ್ಕೆ 2, ಜಿ.ನವೀನ್ 19ಕ್ಕೆ1). ಪಂದ್ಯಶ್ರೇಷ್ಠ: ಜಿ.ನವೀನ್.