ಕ್ರೀಡೆ

ಕಿರಿಯರ ಕೈತಪ್ಪಿದ ಏಷ್ಯಾಕಪ್: ಫೈನಲ್‌ನಲ್ಲಿ ಬಾಂಗ್ಲಾದೇಶ ಎದುರು ಪರಾಭವ

ದುಬೈ: ಬ್ಯಾಟರ್‌ಗಳ ವೈಫಲ್ಯದಿಂದಾಗಿ ಭಾರತ ತಂಡ 19 ವಯೋಮಿತಿಯ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಬಾಂಗ್ಲಾದೇಶ ಎದುರು 59 ರನ್‌ಗಳಿಂದ ಪರಾಭವಗೊಂಡಿದೆ. ಈ ಮೂಲಕ ಭಾರತ 9ನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿ ರನ್ನರ್ ಅಪ್‌ಗೆ ಸಮಾಧಾನ ಕಂಡರೆ, ಬಾಂಗ್ಲಾ ಸತತ 2ನೇ ಬಾರಿ ಚಾಂಪಿಯನ್ ಪಟ್ಟವೇರಿತು.

ದುಬೈ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾ ಕನ್ನಡಿಗ ಹಾರ್ದಿಕ್ ರಾಜ್ (42ಕ್ಕೆ 2) ಸಹಿತ ಇತರ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ 49.1 ಓವರ್‌ಗಳಲ್ಲಿ 198 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಭಾರತ ನಿರಂತರ ವಿಕೆಟ್ ಕಳೆದುಕೊಂಡಿತು. ನಾಯಕ ಮೊಹಮದ್ ಅಮಾನ್ (26) ಹಾಗೂ ಕನ್ನಡಿಗರಾದ ಕೆಪಿ ಕಾರ್ತಿಕೇಯ (21), ಹಾರ್ದಿಕ್ ರಾಜ್ (24) ಹೋರಾಟದ ನಡುವೆಯೂ ಭಾರತ 35.2 ಓವರ್‌ಗಳಲ್ಲಿ 139 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಟೂರ್ನಿಯ ೈನಲ್‌ನಲ್ಲಿ ಮೊದಲ ಬಾರಿಗೆ ಸೋಲು ಅನುಭವಿಸಿತು.

ಬಾಂಗ್ಲಾದೇಶ: 49.1 ಓವರ್‌ಗಳಲ್ಲಿ 198 (ಅಬ್ರಾರ್ 20, ಹಕೀಮ್ 16, ಶಿಹಾಬ್ 40, ರಿಜಾನ್ 47, ರೀದ್ 39, ಮರ್ೂ 11*, ಯುದಜೀತ್ 29ಕ್ಕೆ 2, ಹಾರ್ದಿಕ್ 41ಕ್ಕೆ 2). ಭಾರತ: 35.2 ಓವರ್‌ಗಳಲ್ಲಿ 139 (ವೈಭವ್ 9, ಆಂಡ್ರೆ ಸಿದ್ದಾಥ್ 20, ಕಾರ್ತಿಕೇಯ 21, ಅಮಾನ್ 26, ಹಾರ್ದಿಕ್ 24, ಚೇತನ್ 10, ಹಕೀಮ್ 8ಕ್ಕೆ 3, ಇಕ್ಬಾಲ್ 24ಕ್ಕೆ 3). ಪಂದ್ಯಶ್ರೇಷ್ಠ: ಇಕ್ಬಾಲ್ ಹೊಸೈನ್ ಎಮಾನ್.

2.ಬಾಂಗ್ಲಾದೇಶ 19 ವಯೋಮಿತಿ ಏಷ್ಯಾಕಪ್ ಟೂರ್ನಿ ಒಂದಕ್ಕಿಂತ ಹೆಚ್ಚು ಬಾರಿ ಜಯಿಸಿದ 2ನೇ ತಂಡ. ಭಾರತ (8 ಬಾರಿ) ಅಗ್ರಸ್ಥಾನದಲ್ಲಿದೆ.