ಸಾನಿಯಾ ಮಿರ್ಜಾ instagram ನಿಂದ ಪಡೆದುಕೊಳ್ಳಲಾಗಿದೆ 
ಟೆನಿಸ್

ಆ ಒಂದು ಕ್ಷಣ ಅತ್ಯಂತ ದುಃಖಕರವಾಗಿತ್ತು, ಆಗ ಭರವಸೆ ನೀಡಿದ್ದೇ ನೀವು: ಸಾನಿಯಾ ಮಿರ್ಜಾ Sania Mirza

ಪ್ರಮುಖ ಮುಖ್ಯಾಂಶಗಳು

  • ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ವಿಚ್ಚೇಧನ ಪಡೆದ ಬಳಿಕ ಆತಂಕದಲ್ಲಿದ್ದರು
  • ಸರ್ವಿಂಗ್ ಇಟ್ ಅಪ್ ವಿತ್ ಸಾನಿಯಾ' ಎಂಬ ಯೂಟ್ಯೂಬ್ ಟಾಕ್ ಶೋನ ಮೊದಲ ಅತಿಥಿಯಾಗಿ ಫರಾಹ್​ ಕಾಣಿಸಿಕೊಂಡಿದ್ದಾರೆ
  • ನಾವು ಲೈವ್​ ಶೋಗೆ ಹೋಗಬೇಕಾದ ಒಂದು ಕ್ಷಣ ಅತ್ಯಂತ ದುಃಖಕರವಾಗಿತ್ತು
  • ನೀವೇನಾದರೂ ಅಲ್ಲಿಗೆ ಬರದಿದ್ದರೆ, ನಾನು ಆ ಶೋವನ್ನು ಮಾಡುತ್ತಿರಲಿಲ್ಲ
ಹೈದರಬಾದ್​: ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪತಿ, ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಚೇಧನ ಪಡೆದ ಬಳಿಕ ಆತಂಕದಲ್ಲಿದ್ದಾಗ ಬಾಲಿವುಡ್ ನಿರ್ದೇಶಕಿ ಫರಾ ಖಾನ್ ಧೈರ್ಯ ತುಂಬಿದ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಸಾನಿಯಾ ಹೊಸದಾಗಿ ಆರಂಭಿಸಿದ 'ಸರ್ವಿಂಗ್ ಇಟ್ ಅಪ್ ವಿತ್ ಸಾನಿಯಾ' ಎಂಬ ಯೂಟ್ಯೂಬ್ ಟಾಕ್ ಶೋನ ಮೊದಲ ಅತಿಥಿಯಾಗಿ ಫರಾಹ್​ ಕಾಣಿಸಿಕೊಂಡಿದ್ದರು. ತಮ್ಮ ಸಂಭಾಷಣೆಯ ಸಮಯದಲ್ಲಿ ತನ್ನ ಅತ್ಯಂತ ಕಷ್ಟದ ದಿನಗಳಲ್ಲಿ ಲೈವ್​ ಶೋಗೆ ತಮ್ಮ ಆತ್ಮೀಯ ಸ್ನೇಹಿತೆಯ ಬೆಂಬಲವು ತಾವು ಒಟ್ಟಿಗೆ ಕಾಣಿಸಿಕೊಳ್ಳಲು ಸಹಾಯ ಮಾಡಿತು ಎಂಬುದನ್ನು ವಿವರಿಸಿದ್ದಾರೆ.
ಸಂಭಾಷಣೆಯ ಸಮಯದಲ್ಲಿ ನಾನು ಅದನ್ನು ಕ್ಯಾಮೆರಾದಲ್ಲಿ ಹೇಳಲು ಬಯಸುವುದಿಲ್ಲ, ಆದರೆ ನೀವು ನನ್ನ ಸೆಟ್‌ಗೆ ಬಂದಾಗ, "ನಾವು ಲೈವ್​ ಶೋಗೆ ಹೋಗಬೇಕಾದ ಒಂದು ಕ್ಷಣ ಅತ್ಯಂತ ದುಃಖಕರವಾಗಿತ್ತು" ಎಂದು ಸಾನಿಯಾ ಹೇಳಿದರು. ನೀವೇನಾದರೂ ಅಲ್ಲಿಗೆ ಬರದಿದ್ದರೆ, ನಾನು ಆ ಶೋವನ್ನು ಮಾಡುತ್ತಿರಲಿಲ್ಲ. ಆ ಸಮಯದಲ್ಲಿ ನೀವು ಏನೇ ಇರಲಿ, ಶೋ ಮಾಡುತ್ತೀರ ಎಂದು ಭರವಸೆ ನೀಡಿದ್ದೀರಿ ಎಂದರು.
ಆ ದಿನವನ್ನು ನೆನೆಸಿಕೊಂಡ ಫರಾ, ಸಾನಿಯಾ ಸಂಕಷ್ಟದಲ್ಲಿ ಇರುವುದನ್ನು ನೋಡಿ ನಾನು ಗಾಬರಿಗೊಂಡಿದ್ದೆ. ನಾನು ಶೂಟಿಂಗ್​ನಲ್ಲಿದ್ದೆ, ಈಕೆಯನ್ನು ನೋಡಿ ನನಗೆ ತುಂಬಾ ಭಯವಾಯಿತು. ಹಾಗಾಗಿ ನನ್ನ ಪೈಜಾಮ ಮತ್ತು ಚಪ್ಪಲಿಯಲ್ಲಿಯೇ ನಾನು ಶೋಗೆ ಬಂದೆ ಎಂದರು. ಇದು ಎಂತಹ ಕಷ್ಟದಲ್ಲಿಯೂ ತನ್ನ ಸ್ನೇಹಿತೆ ಜೊತೆ ನಿಲ್ಲುತ್ತೇನೆ ಎಂಬ ಮನೋಭಾವವನ್ನು ತೋರಿಸುತ್ತದೆ.
ಈ ಸಂಭಾಷಣೆ ಸಮಯದಲ್ಲಿ ಒಂಟಿ ಪೋಷಕರ ಸ್ಥಾನವನ್ನು ಧೈರ್ಯ ಮತ್ತು ಶಕ್ತಿಯಿಂದ ನಿರ್ವಹಿಸಿದ್ದಕ್ಕಾಗಿ ಸಾನಿಯಾ ಅವರನ್ನು ಫರಾ ಶ್ಲಾಘಿಸಿದ್ದಾರೆ. ನೀವು ಒಬ್ಬಂಟಿಯಾಗಿ ಮಗನನ್ನು ಬೆಳೆಸಬೇಕು, ಅವನಿಗೆ ಸಮಯ ನೀಡಬೇಕು. ಅದರ ಜೊತೆಗೆ ಕೆಲಸವನ್ನು ಮಾಡಬೇಕು. ಇದೆಲ್ಲವನ್ನೂ ಚೆನ್ನಾಗಿ ನಿರ್ವಹಿಸುತ್ತಿದ್ದೀರಿ ಎಂದು ಹೇಳಿದ್ದಾರೆ.
ಸಾನಿಯಾ ಏಪ್ರಿಲ್ 2010 ರಲ್ಲಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಮದುವೆಯಾದರು. ಈ ದಂಪತಿ 2018 ರಲ್ಲಿ ತಮ್ಮ ಮಗ ಇಜಾನ್ ಮಿರ್ಜಾ ಮಲಿಕ್ ಅವರಿಗೆ ಜನ್ಮ ನೀಡಿದರು. ಜನವರಿ 2024 ರಲ್ಲಿ ಶೋಯೆಬ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಮದುವೆಯಾಗುವುದಾಗಿ ತಿಳಿಸಿದ ಕೆಲವೇ ದಿನಗಳಲ್ಲಿ ದಂತಪಿ ಬೇರ್ಪಡುವುದಾಗಿ ಸುದ್ಧಿ ಹೊರಬಿದ್ದಿತು. ಹಾಗೆಯೇ ಅವರ ಸಹೋದರಿ ಅನಮ್ ಮಿರ್ಜಾ, ಸಾನಿಯಾ ತಿಂಗಳುಗಳ ಹಿಂದೆ ಬೇರ್ಪಟ್ಟಿದ್ದರು. ಈ ಸೂಕ್ಷ್ಮ ಅವಧಿಯಲ್ಲಿ ತಮಗಾಗಿ ಗೌಪ್ಯತೆಯನ್ನು ಕೋರಿರುವುದಾಗಿ ಮೂಲಗಳು ವರದಿ ಮಾಡಿದ್ದವು. (ಏಜೆನ್ಸೀಸ್​).