ಕ್ವಾರ್ಟರ್ಫೈನಲ್ಗೇರಿದ ಜ್ವೆರೆವ್, ಕಲಿನ್‌ಸ್ಕಯಾ: ಹೊರಬಿದ್ದ ಪೊಟಪೋವಾ, ಕ್ಯಾಸ್ಪರ್ ರುಡ್, ರುಬ್ಲೆವ್
ಪ್ಯಾರಿಸ್: ಪ್ರಶಸ್ತಿ ಫೇವರಿಟ್ ಎರಡನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ ಜತೆಗೆ ಜೆಕ್ ಗಣರಾಜ್ಯದ ಜಾಕೋಬ್ ಮೆನ್ಸಿಕ್, ಜೋವೊ ಫೋನ್ಸೆಕಾ, ಇಟಲಿಯ ಫ್ಲಾವಿಯೊ ಕೊಬೊಲಿ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ರಷ್ಯಾದ ಅನ್ನಾ ಕಲಿನ್‌ಸ್ಕಯಾ, ಪೋಲೆಂಡ್‌ನ ಮಜ ಚ್ವಾಲಿನ್ಸ್ಕಾ, ರಷ್ಯಾದ ಡಯಾನಾ ಶ್ನೈಡರ್ ಸಹ ಎಂಟರ ಘಟ್ಟಕ್ಕೇರಿದ್ದು, 19ನೇ ಶ್ರೇಯಾಂಕಿತೆ ಮ್ಯಾಡಿಸನ್ ಕೀಸ್, ಅನಸ್ತಾಸಿಯಾ ಪೊಟಪೋವಾ ಮೂರನೇ ಸುತ್ತಿನಲ್ಲಿ ನಿರ್ಗಮನ ಕಂಡರು. ನಾರ್ವೆಯ ಕ್ಯಾಸ್ಪರ್ ರುಡ್, ರಷ್ಯಾದ ಆಂಡ್ರೆ ರುಬ್ಲೆವ್ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದ ಪ್ರಮುಖರು.
ಸೋಮವಾರ ನಡೆದ ಮಹಿಳಾ ಸಿಂಗಲ್ಸ್ 4ನೇ ಸುತ್ತಿನಲ್ಲಿ 22ನೇ ಶ್ರೇಯಾಂಕಿತೆ ಅನ್ನಾ ಕಲಿನ್‌ಸ್ಕಯಾ 6-4, 2-6, 7-6 ರಿಂದ 2 ಗಂಟೆ 49 ನಿಮಿಷಗಳ ಹೋರಾಟದಲ್ಲಿ 28ನೇ ಶ್ರೇಯಾಂಕಿತೆ ಪೊಟಪೋವಾರನ್ನು ಮಣಿಸಿದರು. ಇದರೊಂದಿಗೆ ಕ್ವಾರ್ಟರ್‌ೈನಲ್‌ಗೇರಿದ ಮೊದಲ ಆಟಗಾರ್ತಿ ಎನಿಸಿದರೆ, ಮೂರನೇ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಕೋಕೋ ಗ್ೌಗೆ ಶಾಕ್ ನೀಡಿದ್ದ ಪೊಟಪೋವಾ ನಿರಾಸೆ ಕಂಡರು.
ಅಮೆರಿಕದ ಮ್ಯಾಡೀಸನ್ ಕೀಸ್ 3-6, 6-3, 0-6 ರಿಂದ ಡಯಾನಾ ಶ್ನೈಡರ್ ವಿರುದ್ಧ ಮುಗ್ಗರಿಸಿದರು. ಈ ಮೂಲಕ ಶ್ನೈಡರ್ ಮೊದಲ ಬಾರಿಗೆ ಗ್ರಾಂಡ್ ಸ್ಲಾಂನಲ್ಲಿ 8ರ ಘಟ್ಟಕ್ಕೇರಿದ ಸಾಧನೆ ಮಾಡಿದರು.
ಪುರುಷರ ವಿಭಾಗದಲ್ಲಿ ವಿಶ್ವ ನಂ.1 ಸಿನ್ನರ್, ಜೋಕೊವಿಕ್ ಹೊರಬಿದ್ದ ನಂತರ ಪ್ರಶಸ್ತ ೇವರಿಟ್ ಆಗಿರುವ ಜರ್ಮನಿ ಜ್ವೆರೆವ್ 7-6, 6-4, 6-1ನೇರ ಸೆಟ್‌ಗಳಿಂದ ನೆದರ್ಲೆಂಡ್‌ನ ಜಸ್ಪರ್ ಡಿ ಜಾಮಗ್ ಎದುರು ಸುಲಭ ಗೆಲುವಿನೊಂದಿಗೆ ಎಂಟರ ಘಟ್ಟಕ್ಕೇರಿದರು. 26ನೇ ಶ್ರೇಯಾಂಕಿತ ಜಾಕೋಬ್ 6-3, 7-6, 4-6, 2-6, 6-3 ಐದು ಸೆಟ್‌ಗಳ 3 ಗಂಟೆ 45 ನಿಮಿಷಗಳ ಕಾದಾಟದಲ್ಲಿ 11ನೇ ಶ್ರೇಯಾಂಕಿತ ಅಂಡ್ರೆ ರುಬ್ಲೆವ್‌ಗೆ ಸೋಲುಣಿಸಿದರು. 24 ಗ್ರಾಂಡ್ ಸ್ಲಾಂ ವಿಜೇತ ಜೋಕೊವಿಕ್ ಶಾಕ್ ನೀಡಿದ್ದ ಬ್ರೆಜಿಲ್‌ನ ಫೋನ್ಸೆಕಾ 7-5, 7-6, 5-7, 6-2 ರಿಂದ 15ನೇ ಶ್ರೇಯಾಂಕಿತ ಕ್ಯಾಸ್ಪರ್ ರುಡ್ ಎದುರು ಕನಸಿನ ಓಟವನ್ನು ವಿಸ್ತರಿಸಿದರು.
ಪುರುಷರ ಡಬಲ್ಸ್‌ನಲ್ಲಿ ಭಾರತದ ಶ್ರೀರಾಮ್ ಬಾಲಾಜಿ ಹಾಗೂ ಬ್ರೆಜಿಲ್‌ನ ಮಾರ್ಸೆಲೊ ಡೆಮೊಲೈನರ್ ಕ್ವಾರ್ಟರ್ಫೈನಲ್ ಪ್ರವೇಶಿಸಿದರು. ಸೋಮವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಇಂಡೋ-ಬ್ರೆಜಿಲ್ ಜೋಡಿ 7-5, 6-4 ನೇರ ಸೆಟ್‌ಗಳಿಂದ ಆರನೇ ಶ್ರೇಯಾಂಕಿತ, ಜರ್ಮನಿಯ ಕೆವಿನ್ ಕ್ವಾವಿಟ್ಜ್-ಟಿಮ್ ಪುಯೆಟ್ಜ್ ಜೋಡಿಯನ್ನು ಪರಾಭವಗೊಳಿಸಿತು. ಮಿಶ್ರ ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ ಜೋಡಿ ನಿರ್ಗಮನ ಬಳಿಕ ಶ್ರೀರಾಮ್ ಬಾಲಾಜಿ ಟೂರ್ನಿಯಲ್ಲಿ ಸವಾಲು ಉಳಿಸಿಕೊಂಡಿರುವ ಏಕೈಕ ಭಾರತೀಯ ಎನಿಸಿದ್ದಾರೆ.