ಅಗ್ರ ಶ್ರೇಯಾಂಕಿತ ಕೀಗನ್ಗೆ ಮನೀಷ್ ಶಾಕ್
ಬೆಂಗಳೂರು: ಭಾರತದ ವೈಲ್ಡ್ಕಾರ್ಡ್ ಆಟಗಾರ ಮನೀಷ್ ಸುರೇಶ್ಕುಮಾರ್, ಕಳೆದ ವಾರವಷ್ಟೇ ಕರ್ನಾಟಕ ಓಪನ್ ಗೆದ್ದಿದ್ದ ಅಗ್ರ ಶ್ರೇಯಾಂಕಿತ ಅಮೆರಿಕದ ಕೀಗನ್ ಸ್ಮಿತ್ಗೆ ಆಘಾತ ನೀಡುವ ಮೂಲಕ ಎಸ್.ಎಂ.ಕೃಷ್ಣ ಸ್ಮಾರಕ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ (SM Krishna Memorial Open) ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದಾರೆ.
ಕನ್ನಡಿಗ ಕ್ರಿಷ್ ತ್ಯಾಗಿ, ಮುಕುಂದ್ ಶಶಿಕುಮಾರ್ 2ನೇ ಸುತ್ತಿಗೇರಿದ ಇನ್ನಿಬ್ಬರು ಭಾರತೀಯರು. ಬೆಂಗಳೂರಿನ ಆರಾಧ್ಯ ತಿಜ್, ದಿಗ್ವಿಜಯ್ ಪ್ರತಾಪ್ ಸಿಂಗ್, ಕರಣ್ ಸಿಂಗ್, ಪ್ರಜ್ವಲ್ ದೇವ್, ಆದಿತ್ಯ ವಿಶಾಲ್, ಸಿದ್ಧಾರ್ಥ್ ರಾವತ್, ನಿತಿನ್ ಕುಮಾರ್ ಸಿನ್ಹಾ ಮೊದಲ ಸುತ್ತಿನಲ್ಲೇ ಹೊರಬಿದ್ದರು.
ವಿಶ್ವ ನಂ. 737 ಮನೀಷ್ ಸುರೇಶ್ ಕುಮಾರ್ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 6-4, 2-6, 6-2ರಿಂದ ವಿಶ್ವ ನಂ. 245 ಮತ್ತು ೇವರಿಟ್ ಕೀಗನ್ ಸ್ಮಿತ್ಗೆ ಸೋಲುಣಿಸಿದರು. ಬೆಂಗಳೂರಿನ ಕ್ರಿಷ್ ತ್ಯಾಗಿ 7-6, 7-6ರಿಂದ ಚೀನಾ ತೈಪೆಯ ಕೌನ್ ಯಿ ಲೀ ವಿರುದ್ಧ ಗೆಲುವು ಸಾಧಿಸಿದರು.