ಕರ್ನಾಟಕ ರಾಜ್ಯ ಪಿಕಲ್ ಬಾಲ್ ಅಸೋಸಿಯೇಷನ್ ಅಧಿಕೃತವಾಗಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಮಾನ್ಯತೆ ಪ್ರಮಾಣಪತ್ರ ಸ್ವೀಕರಿಸಿದೆ.
ಬೆಂಗಳೂರು: ರಾಜ್ಯದಲ್ಲಿ ಪಿಕಲ್‌ಬಾಲ್ ಕ್ರೀಡೆಗೆ ನಾಂದಿ ಹಾಡಿದ ಕರ್ನಾಟಕ ರಾಜ್ಯ ಪಿಕಲ್‌ಬಾಲ್ (pickleball) ಅಸೋಸಿಯೇಷನ್‌ಗೆ (KSPA) ಕೊನೆಗೂ ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ (KOA) ಮನ್ನಣೆ ಸಿಕ್ಕಿದೆ. ಈ ಮೂಲಕ 2016ರಿಂದ ರಾಜ್ಯದಲ್ಲಿ ಪಿಕಲ್‌ಬಾಲ್ ಕ್ರೀಡೆಯನ್ನು ಪೋಷಿಸಿದ ಶ್ರಮಕ್ಕೆ ಗೆಲುವು ಸಿಕ್ಕಂತಾಗಿದೆ.
ಶನಿವಾರ ಕರ್ನಾಟಕ ರಾಜ್ಯ ಪಿಕಲ್ ಬಾಲ್ ಅಸೋಸಿಯೇಷನ್ ಅಧಿಕೃತವಾಗಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಮಾನ್ಯತೆ ಪ್ರಮಾಣಪತ್ರ ಸ್ವೀಕರಿಸಿದ್ದು, ರಾಜ್ಯದಲ್ಲಿ ಪಿಕಲ್ ಬಾಲ್ ಕ್ರೀಡೆಗೆ ಏಕೈಕ ಅಧಿಕೃತ ರಾಜ್ಯ ಸಂಸ್ಥೆ ಯಾಗಿ ಗುರುತಿಸಿಕೊಂಡಿದೆ.
ಕರ್ನಾಟಕ ರಾಜ್ಯ ಪಿಕಲ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಎ.ಜಿ. ಶಿವಕುಮಾರ್ ಹಾಗೂ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ರಜತ್ ಕಂಕರ್ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಹಾಗೂ ಕಾರ್ಯದರ್ಶಿ ಅನಂತರಾಜುಗೆ ಧನ್ಯವಾದ ತಿಳಿಸಿದ್ದಾರೆ.
2016ರಿಂದಲೂ ಕರ್ನಾಟಕ ರಾಜ್ಯ ಪಿಕಲ್ ಬಾಲ್ ಅಸೋಸಿಯೇಷನ್ ಹಲವು ಜಿಲ್ಲಾ, ರಾಜ್ಯ ಮಟ್ಟದ ಟೂರ್ನಿಗಳನ್ನು ಆಯೋಜಿಸಿದ್ದು, ನವೆಂಬರ್ 21ರಿಂದ 24ರವರೆಗೆ ವಿಶ್ವ ಮಟ್ಟದ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ ನಡೆಸಿ ಯಶಸ್ವಿಯಾಗಿತ್ತು.