ಚೊಚ್ಚಲ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್‌ನ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ನಟ ಶ್ರೀಮುರಳಿ, (ಎಡಭಾಗದಿಂದ) ಕೆಎಸ್‌ಪಿಎ ಉಪಾಧ್ಯಕ್ಷ ಶ್ರೀನಿವಾಸ್, ಅಧ್ಯಕ್ಷ ಶಿವಕುಮಾರ್, ಎಂಟ್ರೋಪಿ ಸ್ಪೋರ್ಟ್ಸ್ ಅಧ್ಯಕ್ಷ ಅನಿಲ್ ಕುಮಾರ್, ಕೆಎಸ್‌ಪಿಎ ಪ್ರಧಾನ ಕಾರ್ಯದರ್ಶಿ ರಜತ್ ಕಾಂಕರ್ ಹಾಗೂ ಆಯೋಜಕರಾದ ಆಶೀಶ್ ಸ್ವರ್ಣಾಂಕರ್.
ಬೆಂಗಳೂರು: ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಸಂಸ್ಥೆ (ಕೆಎಸ್‍ಪಿಎ) ಹಾಗೂ ಎಂಟ್ರೋಪಿ ಸ್ಪೋರ್ಟ್ಸ್ ಆಂಡ್ ಈವೆಂಟ್ಸ್ ಸಹಯೋಗದಲ್ಲಿ ರಾಜ್ಯದ ಚೊಚ್ಚಲ (karnataka pickleball premier league) 'ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್' (ಕೆಪಿಪಿಎಲ್) ತಂಡಗಳನ್ನು ಸೋಮವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಯಿತು.
ಈ ಕೂಟಕ್ಕೆ ನಟ ಶ್ರೀಮುರಳಿ ಅವರನ್ನು ಪ್ರಚಾರ ರಾಯಭಾರಿಯಾಗಿ ಘೋಷಿಸಲಾಗಿದ್ದು, ಲೀಗ್‌ನ ಮೊದಲ ಆವೃತ್ತಿಯು ಅಕ್ಟೋಬರ್ 9 ರಿಂದ 11 ರವರೆಗೆ ನಡೆಯಲಿದೆ.
ಲೀಗ್‌ನಲ್ಲಿ ಸೆಣಸಲಿರುವ 7 ತಂಡಗಳು:
* ಶಿವಮೊಗ್ಗ ಮಾಸ್ಟರ್ ಬ್ಲಿಸ್
ರಾಜ್ಯದಲ್ಲಿ ಪಿಕಲ್‌ಬಾಲ್ ಕ್ರೀಡೆಯನ್ನು ತಳಮಟ್ಟದಿಂದ ಬೆಳೆಸಲು ಮತ್ತು ಕ್ರೀಡಾಪಟುಗಳಿಗೆ ವೃತ್ತಿಪರ ವೇದಿಕೆ ಕಲ್ಪಿಸಲು ಈ ಲೀಗ್ ನೆರವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.