Wimbledon: ಕ್ರಿಸ್ಟಿನಾ-ಗುವೋಗೆ ಮಹಿಳಾ ಡಬಲ್ಸ್​ ಪ್ರಶಸ್ತಿ 
ಟೆನಿಸ್

Wimbledon: ಕ್ರಿಸ್ಟಿನಾ-ಗುವೋಗೆ ಮಹಿಳಾ ಡಬಲ್ಸ್​ ಪ್ರಶಸ್ತಿ

ಲಂಡನ್​: ಫ್ರಾನ್ಸ್​ನ ಕ್ರಿಸ್ಟಿನಾ ಮ್ಲಾಡೆನೋವಿಕ್​ ಮತ್ತು ಚೀನಾದ ಹಾನ್ಯು ಗುವೋ ಜೋಡಿ ವಿಂಬಲ್ಡನ್ (Wimbledon)​ ಮಹಿಳಾ ಡಬಲ್ಸ್​ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಇವರಿಬ್ಬರು ಜತೆಯಾಗಿ ಜಯಿಸಿದ ಮೊದಲ ಗ್ರಾಂಡ್​ ಸ್ಲಾಂ ಪ್ರಶಸ್ತಿ ಇದಾಗಿದೆ.
ಭಾನುವಾರ ಪುರುಷರ ಸಿಂಗಲ್ಸ್​ ಫೈನಲ್​ಗೆ ಮುನ್ನ ನಡೆದ ಮಹಿಳಾ ಡಬಲ್ಸ್​ ಪ್ರಶಸ್ತಿ ಕಾದಾಟದಲ್ಲಿ 10ನೇ ಶ್ರೇಯಾಂಕಿತ ಕ್ರಿಸ್ಟಿನಾ-ಗುವೋ ಜೋಡಿ 6-3, 7-5ರಿಂದ 2ನೇ ಶ್ರೇಯಾಂಕಿತ ಕೆನಡಾದ ಗ್ಯಾಬ್ರಿಯೆಲಾ ಡಬ್ರೋವ್​ಸ್ಕಿ ಮತ್ತು ಬ್ರೆಜಿಲ್​ನ ಲೂಯಿಸಾ ಸ್ಟೆಾನಿ ಜೋಡಿಗೆ ಆಘಾತಕಾರಿ ಸೋಲುಣಿಸಿತು. ಪಂದ್ಯದ ಆರಂಭದಿಂದಲೇ ಸಂಪೂರ್ಣ ನಿಯಂತ್ರಣ ಸಾಧಿಸಿದ ಕ್ರಿಸ್ಟಿನಾ-ಗುವೋ ಜೋಡಿ, ಒಂದು ಗಂಟೆ, 32 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡಿತು.
ಈಗಾಗಲೆ ಮಹಿಳಾ ಡಬಲ್ಸ್​ ವಿಭಾಗದಲ್ಲಿ 6 ಗ್ರಾಂಡ್​ ಸ್ಲಾಂ ಪ್ರಶಸ್ತಿ ಜಯಿಸಿದ್ದ 33 ವರ್ಷದ ಕ್ರಿಸ್ಟಿನಾಗೆ ಇದು ವಿಂಬಲ್ಡನ್​ನಲ್ಲಿ ಮೊದಲ ಕಿರೀಟವಾಗಿದೆ. ಗುವೋಗೆ ಇದು ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿಯಾಗಿದೆ.