ಭಾರತ ಬಾಸ್ಕೆಟ್ಬಾಲ್ ತಂಡದ ಮಾಜಿ ನಾಯಕಿ ಜೆನ್ನಿಫರ್ ಇನ್ನಿಲ್ಲ
ಕೋಲ್ಕತ: ಭಾರತೀಯ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ (Leander Paes) ಅವರ ತಾಯಿ, ಭಾರತೀಯ ಬಾಸ್ಕೆಟ್ಬಾಲ್ ತಂಡದ ಮಾಜಿ ನಾಯಕಿ ಮತ್ತು ಒಲಿಂಪಿಯನ್ (Jennifer Paes) ಜೆನ್ನಿಫರ್ ಪೇಸ್ (72 ವರ್ಷ) ಕ್ಯಾನ್ಸರ್ನಿಂದ ಭಾನುವಾರ ನಿಧನರಾದರು. ಜೆನ್ನಿಫರ್ ದತ್ತನ್ ಎಂದೂ ಜನಪ್ರಿಯರಾಗಿದ್ದ ಅವರು, ಜನಪ್ರಿಯ ಬಂಗಾಳಿ ಕವಿ ಮತ್ತು ನಾಟಕಕಾರ ಮೈಕೆಲ್ ಮಧುಸೂದನ್ ದತ್ ಅವರ ಮರಿಮೊಮ್ಮಗಳೂ ಆಗಿದ್ದಾರೆ.
ಜೆನ್ನಿಫರ್ 1972ರ ಮ್ಯೂನಿಚ್ ಒಲಿಂಪಿಕ್ಸ್ನಲ್ಲಿ ಭಾರತ ಬಾಸ್ಕೆಟ್ಬಾಲ್ ತಂಡದ ಪರ ಆಡಿದ್ದರು. ಇದೇ ಒಲಿಂಪಿಕ್ಸ್ನಲ್ಲಿ ಅವರ ಪತಿ ಡಾ. ವೇಸ್ ಪೇಸ್ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಆಟಗಾರರಾಗಿದ್ದರು. ಅವರ ಪುತ್ರ ಲಿಯಾಂಡರ್ ಕೂಡ 1996ರ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು, ಕ್ರೀಡಾ ಕುಟುಂಬದ ಸಾಧನೆ ಮುಂದುವರಿಸಿದ್ದರು.
ಭಾರತೀಯ ಮಹಿಳಾ ಬಾಸ್ಕೆಟ್ಬಾಲ್ನಲ್ಲಿ ಪ್ರಮುಖ ತಾರೆಯಾಗಿದ್ದ ಜೆನ್ನಿಫರ್ ರಾಷ್ಟ್ರೀಯ ತಂಡದ ನಾಯಕಿಯೂ ಆಗಿದ್ದರು.