ಫೆಬ್ರವರಿ 15ರಿಂದ ಬೆಂಗಳೂರಿನಲ್ಲಿ ಮಹಿಳಾ ಐಟಿಎಫ್ ಟೆನಿಸ್ ಟೂರ್ನಿ
ಬೆಂಗಳೂರು: ಡೇವಿಸ್ ಕಪ್ ಕ್ವಾಲಿಫೈಯರ್ ಬಳಿಕ ಉದ್ಯಾನನಗರಿ ಇನ್ನೊಂದು ಪ್ರತಿಷ್ಠಿತ ಟೆನಿಸ್ (Tennis) ಟೂರ್ನಿಯ ಆತಿಥ್ಯಕ್ಕೆ ಸಜ್ಜಾಗಿದೆ. 4ನೇ ಆವೃತ್ತಿಯ ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್ ಡಬ್ಲ್ಯು100 ಟೂರ್ನಿ (ITF Women’s Open W100 Bengaluru 2026) ಫೆಬ್ರವರಿ 15ರಿಂದ 22ರವರೆಗೆ ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದು ಭಾರತದಲ್ಲಿ ನಡೆಯಲಿರುವ ಅತಿದೊಡ್ಡ ಐಟಿಎಫ್ ಟೂರ್ನಿ ಎನಿಸಿದೆ.
ಐಟಿಎಫ್ ಡಬ್ಲ್ಯು100 ಕೆಟಗರಿಯ ಈ ಟೂರ್ನಿಯಲ್ಲಿ ಅಮೂಲ್ಯ ಡಬ್ಲ್ಯುಟಿಎ ರ್ಯಾಂಕಿಂಗ್ ಅಂಕಗಳು ಪಣಕ್ಕಿವೆ. ಸಿಂಗಲ್ಸ್ ಪ್ರಧಾನ ಸುತ್ತಿನಲ್ಲಿ 32 ಆಟಗಾರ್ತಿಯರು ಕಣಕ್ಕಿಳಿಯಲಿದ್ದಾರೆ. ಫೆಬ್ರವರಿ 17ರಿಂದ ನಡೆಯಲಿರುವ ಡಬಲ್ಸ್ ವಿಭಾಗದಲ್ಲಿ 16 ಜೋಡಿಗಳು ಕಣಕ್ಕಿಳಿಯಲಿವೆ.
ಭಾರತದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಸಹಜಾ ಯಮಲಪಲ್ಲಿ, ಅಗ್ರ ಶ್ರೇಯಾಂಕಿತ ಜೂನಿಯರ್ ಆಟಗಾರ್ತಿ ಮಾಯಾ ರಾಜೇಶ್ವರನ್ ರೇವತಿ, ಶ್ರೀವಲ್ಲಿ ಬಾಮಿಡಿಪಟಿ, ವೈಷ್ಣವಿ ಅಡ್ಕರ್ ವೈಲ್ಡ್ಕಾರ್ಡ್ ಮೂಲಕ ಪ್ರಧಾನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಆಸ್ಟ್ರಿಯಾದ ಜೂಲಿಯಾ ಗ್ರೇಬರ್ (ವಿಶ್ವ ನಂ. 79), ಆಸ್ಟ್ರೆಲಿಯಾದ ತಾಲಿಯಾ ಗಿಬ್ಸನ್ (ವಿಶ್ವ ನಂ. 112), ್ರಾನ್ಸ್ನ ಲಿಯೋಲಿಯಾ ಜೀನ್ಜೀನ್ (ವಿಶ್ವ ನಂ. 117) ಕಣದಲ್ಲಿರುವ ಪ್ರಮುಖ ವಿದೇಶಿ ಆಟಗಾರ್ತಿಯರಾಗಿದ್ದಾರೆ.