ಚಟ್ಟೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಇಶಾನ್ ಕಿಶನ್ ಭರ್ಜರಿ ದ್ವಿಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ.
ಇಶಾನ್ ಕಿಶನ್ 24ನೇ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಸಿಡಿಸುವುದರೊಂದಿಗೆ ತಮ್ಮ ಮೊದಲ ಶತಕವನ್ನು ಪೂರೈಸಿದ್ದರು. 85 ಎಸೆತಗಳಲ್ಲಿ 100 ರನ್ ಪೂರೈಸಿದರು. ಇದೀಗ 128 ಎಸೆತಗಳಲ್ಲಿ 200 ರನ್ ಗಳಿಸುವೊದರೊಂದಿಗೆ ದ್ವಿಶತಕ ದಾಖಲಿಸಿದರು.
ಇಶಾನ್ ಕಿಶನ್ ತಮ್ಮ ದ್ವಿಶತಕದ ಇನ್ನಿಂಗ್ಸ್ನಲ್ಲಿ 131 ಬಾಲ್ಗಳನ್ನು ಆಡಿ, 210 ರನ್ ಗಳಿಸಿ ಟಸ್ಕಿನ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. 10ವ ಭರ್ಜರಿ ಸಿಕ್ಸ್ ಮತ್ತು 24 ಫೋರ್ ಬಾರಿಸಿ ಮಿಂಚಿದರು.