ಕ್ರೀಡೆ

ಇಂಗ್ಲೆಂಡ್ ವಿರುದ್ಧದ T20 ಸರಣಿಗೆ ಭಾರತ ತಂಡ ಪ್ರಕಟ! ಇಬ್ಬರೂ ಸ್ಟಾರ್​ ಆಟಗಾರರಿಗಿಲ್ಲ ಸ್ಥಾನ | INDvsENG

Team India Squad: ಜನವರಿ 22ರಿಂದ ಕೋಲ್ಕತದಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಐದು ಪಂದ್ಯಗಳ ಟಿ20 (T20) ಸರಣಿಗೆ ಬಿಸಿಸಿಐ ಟೀಮ್ ಇಂಡಿಯಾ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. 15 ಸದಸ್ಯರನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಿರುವ ಬಿಸಿಸಿಐ, ಭಾರತದ ಮಿಸ್ಟರ್​ 360 ಸೂರ್ಯಕುಮಾರ್​ ಯಾದವ್​ಗೆ ಕ್ಯಾಪ್ಟನ್ ಜವಾಬ್ದಾರಿಯನ್ನು ನೀಡಿದ್ದು, ಅಕ್ಸರ್​ ಪಟೇಲ್​ಗೆ ಉಪನಾಯಕನ ಸ್ಥಾನವನ್ನು ಕೊಟ್ಟಿದೆ.

ಯಾರೆಲ್ಲಾ ತಂಡದಲ್ಲಿ?

ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).

ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತ ತಂಡದ ಭಾಗವಾಗಿದ್ದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್​ ಸಿರಾಜ್​ರನ್ನು ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯಿಂದ ಸದ್ಯ ಕೈಬಿಡಲಾಗಿದೆ. ಈ ಇಬ್ಬರು ಸ್ಟಾರ್​ ವೇಗಿಗಳ ಜಾಗಕ್ಕೆ ಅರ್ಷದೀಪ್​ ಸಿಂಗ್ ಮತ್ತು ಮೊಹಮ್ಮದ್​ ಶಮಿ ಕಮ್​ಬ್ಯಾಕ್​ ಮಾಡಿದ್ದಾರೆ.