ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಭಾನುವಾರವಷ್ಟೇ ಇಂದೋರ್ನಲ್ಲಿ ವಶಪಡಿಸಿಕೊಂಡಿರುವ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡದ ಆಟಗಾರರು, ಕ್ಲೀನ್ಸ್ವೀಪ್ ಹಂಬಲದೊಂದಿಗೆ ಸೋಮವಾರ ಸಂಜೆ ಬೆಂಗಳೂರಿಗೆ ಆಗಮಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ 3ನೇ ಹಾಗೂ ಕೊನೇ ಟಿ20 ಪಂದ್ಯ ನಡೆಯಲಿದೆ. ಪಂದ್ಯದ ಕೌಂಟರ್ ಟಿಕೆಟ್ ಮಾರಾಟ ಪ್ರಕ್ರಿಯೆ ಮಂಗಳವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಕ್ರೀಡಾಂಗಣದ ಗೇಟ್ ನಂ. 19ರಲ್ಲಿ ನಡೆಯಲಿದೆ.