ಬೆಂಗಳೂರು: ಮುಂದಿನ ವರ್ಷಾರಂಭದ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಟೂರ್ನಿಯ ವೇಳಾಪಟ್ಟಿಯನ್ನು ಬಿಸಿಸಿಐ ಬುಧವಾರ ಬಿಡುಗಡೆಗೊಳಿಸಿದೆ. 2027ರ ಜನವರಿ 14ರಿಂದ ಫೆಬ್ರವರಿ 7ರವರೆಗೆ ವಡೋದರ&ಮುಂಬೈನಲ್ಲಿ ಟೂರ್ನಿ ನಡೆಯಲಿದೆ.
"ಮಹಿಳೆಯರ ಐಪಿಎಲ್' ಖ್ಯಾತಿಯ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಮತ್ತು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ ಆಗಲಿವೆ. ಇದು ಭಾರತ ಮಹಿಳಾ ತಂಡದ ಹೊಸ ನಾಯಕಿ ಸ್ಮೃತಿ ಮಂದನಾ ಮತ್ತು ಮಾಜಿ ನಾಯಕಿ ಹರ್ಮಾನ್ಪ್ರೀತ್ ಕೌರ್ ನಡುವಿನ ಮುಖಾಮುಖಿಯೂ ಆಗಿರಲಿದೆ.
ಜ.14ರಿಂದ 24ರವರೆಗೆ ವಡೋದರದ ಕೋಟಂಬಿ ಕ್ರೀಡಾಂಗಣದಲ್ಲಿ ಟೂರ್ನಿಯ ಮೊದಲ 11 ಲೀಗ್ ಪಂದ್ಯಗಳು ನಡೆಯಲಿದೆ. ಜ.26ರಿಂದ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಫೈನಲ್ ಸಹಿತ ಟೂರ್ನಿಯ ಉಳಿದ 11 ಪಂದ್ಯಗಳು ನಡೆಯಲಿವೆ. ಫೆ.5ರಂದು ಎಲಿಮಿನೇಟರ್ ಮತ್ತು ಫೆ.7ರ ಭಾನುವಾರ ಪ್ರಶಸ್ತಿ ಕದನ ನಡೆಯಲಿದೆ. ಎಲ್ಲ ಪಂದ್ಯಗಳು ರಾತ್ರಿ 7.30ರಿಂದ ನಡೆಯಲಿವೆ.
ಟೂರ್ನಿಯಲ್ಲಿ ಭಾಗವಹಿಸುವ 5 ತಂಡಗಳು ಸೇರಿ ಒಟ್ಟು 22 ಪಂದ್ಯಗಳನ್ನು ಆಡಲಿವೆ.
ಆರ್ಸಿಬಿ ಪಂದ್ಯಗಳು
ದಿನಾಂಕ ಎದುರಾಳಿ
ಜ.14 ಮುಂಬೈ
ಜ.16 ಡೆಲ್ಲಿ
ಜ.19 ಯುಪಿ
ಜ.22 ಗುಜರಾತ್
ಜ.26 ಮುಂಬೈ
ಜ.29 ಡೆಲ್ಲಿ
ಜ.31 ಯುಪಿ
ಫೆ.2 ಗುಜರಾತ್