ಕ್ರೀಡೆ

ಪ್ರೊ ಕಬಡ್ಡಿ ಲೀಗ್: ಜೈಪುರ ಪಿಂಕ್ ಪ್ಯಾಂಥರ್ಸ್-ತಲೈವಾಸ್ ಪಂದ್ಯ ರೋಚಕ ಟೈ

ಹೈದರಾಬಾದ್: ಕೊನೆಯ ಕ್ಷ ಣದ ಒತ್ತಡವನ್ನು ನಿಭಾಯಿಸುವಲ್ಲಿ ಎಡವಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ 19ನೇ ಪಂದ್ಯದಲ್ಲಿತಮಿಳ್ ತಲೈವಾಸ್ ವಿರುದ್ಧ ರೋಚಕ ಡ್ರಾಗೆ ತೃಪ್ತಿಪಟ್ಟುಕೊಂಡು, 3 ಅಂಕಗಳನ್ನು ತಮ್ಮದಾಗಿಸಿಕೊಂಡಿತು. ದಿಟ್ಟ ಮರು ಹೋರಾಟ ಸಂಘಟಿಸಿದ ತಲೈವಾಸ್ 3 ಅಂಕ ಗಳಿಸಿ 2ನೇ ಸೋಲಿನಿಂದ ಪಾರಾಯಿತು.

ಗಚ್ಚಿಬೌಲಿ ಒಳಾಂಗಣ ಕ್ರಿಡಾಂಗಣದಲ್ಲಿಭಾನುವಾರ ನಡೆದ ಮೊದಲ ಪಂದ್ಯದಲ್ಲಿಉಭಯ ತಂಡಗಳು 30-30 ಅಂಕಗಳಿಂದ ಟೈ ಮಾಡಿಕೊಂಡವು. ಅರ್ಜುನ್ ದೇಶ್ವಾಲ್(7 ಅಂಕ) ಮತ್ತು ವಿಕಾಶ್ ಕಂಡೋಲಾ (6 ಅಂಕ )ಅವರ ಸ್ಥಿರ ಪ್ರದರ್ಶನದ ಜತೆಗೆ ಸಾಂಘಿಕ ಪ್ರದರ್ಶನ ನೀಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ಪಂದ್ಯ ಮುಕ್ತಾಯಕ್ಕೆ ಎರಡೂವರೆ ನಿಮಿಷಗಳು ಬಾಕಿ ಇರುವಾಗ 29-26ರಲ್ಲಿಮುನ್ನಡೆಯಲ್ಲಿತ್ತು. ಆದರೆ ಸ್ಟಾರ್ ರೇಡರ್ ಸಚಿನ್ (11 ಅಂಕ) ಸೇರಿದಂತೆ ಎದುರಾಳಿ ಆಟಗಾರರ ದಿಟ್ಟ ಪ್ರತಿರೋಧಕ್ಕೆ ಕಂಗಾಲಾಯಿತು. ಇದು ಹಾಲಿ ಟೂರ್ನಿಯಲ್ಲಿ ಟೈ ಆದ ಎರಡನೇ ಪಂದ್ಯ. ಶನಿವಾರ ಬೆಂಗಾಲ್ ಮತ್ತು ಮುಂಬಾ ನಡುವಿನ ಪಂದ್ಯ ಕೂಡ ಟೈ ಆಗಿತ್ತು.

ಮುನ್ನಡೆ ಕಾಯ್ದುಕೊಳ್ಳುವ ಇರಾದೆಯೊಂದಿಗೆ ಜೈಪುರ ಹಾಗೂ ಹಿನ್ನಡೆ ತಗ್ಗಿಸುವ ಒತ್ತಡದಲ್ಲಿತಮಿಳ್ ತಲೈವಾಸ್ ದ್ವಿತೀಯಾರ್ಧ ಆರಂಭಿಸಿದವು. ಆದರೆ ಎರಡೂ ತಂಡಗಳು ರಕ್ಷ ಣಾತ್ಮಕ ಆಟಕ್ಕೆ ಆದ್ಯತೆ ನೀಡಿದ ಕಾರಣ ಆಟ ನಿಧಾನವಾಗಿ ಸಾಗಿತು. 20-25 ನಿಮಿಷಗಳ ಅಂತರದಲ್ಲಿಎರಡೂ ತಂಡಗಳು ತಲಾ 3 ಅಂಕಗಳನ್ನು ಕಲೆಹಾಕಲಷ್ಟೆ ಶಕ್ತಗೊಂಡವು.

ನಂತರದ ಅವಧಿಯಲ್ಲಿಎರಡೂ ತಂಡಗಳಿಂದ ಆಕ್ರಮಣಕಾರಿ ಆಟ ಹೊರಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದ್ಯಾವುದು ನಡೆಯಲಿಲ್ಲ. ಹೀಗಾಗಿ 30 ನಿಮಿಷಗಳ ಆಟ ಮುಕ್ತಾಯಕ್ಕೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ 25-21ರಲ್ಲಿತಲೈವಾಸ್ ವಿರುದ್ಧ ಹಿಡಿತ ಸಾಧಿಸಿರುವುದನ್ನು ಕಾಯ್ದುಕೊಂಡಿತು. ಅರ್ಜುನ್ ಮತ್ತು ದೇಶ್ವಾಲ್ ಅವರ ಸ್ಥಿರ ಪ್ರದರ್ಶನದಿಂದಾಗಿ 35ನೇ ನಿಮಿಷದ ವೇಳೆಗೆ 6(28-22) ಅಂಕಗಳ ಅಂತರ ಕಾಯ್ದುಕೊಂಡ ಜೈಪುರ, ಗೆಲುವಿಗೆ ವೇದಿಕೆ ನಿರ್ಮಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿತು. ಈ ಹಂತದಲ್ಲಿಹಿನ್ನಡೆ ತಗ್ಗಿಸಲು ಸ್ಟಾರ್ ರೇಡರ್ ಸಚಿನ್ ಸೇರಿದಂತೆ ತಲೈವಾಸ್ ಆಟಗಾರರು ಸಂಘಟಿತವಾಗಿ ಶ್ರಮಿಸಿದರು.

ಅರ್ಜುನ್ ದೇಸ್ವಾಲ್, ವಿಕಾಶ್ ಕಂಡೋಲಾ ಮತ್ತು ಅಂಕುಶ್ ರಾಠೀ ಅವರ ಸೂಧಿರ್ತಿದಾಯಕ ಪ್ರದರ್ಶನದ ನೆರವಿನಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪಂದ್ಯದ ಮೊದಲ ಅವಧಿಯ ಅಂತ್ಯಕ್ಕೆ 21-16 ಅಂಕಗಳಲ್ಲಿತಮಿಳ್ ತಲೈವಾಸ್ ವಿರುದ್ಧ ಅಂತರ ಕಾಯ್ದುಕೊಂಡಿತು. ಉಭಯ ತಂಡಗಳು ಪಂದ್ಯದ ಆರಂಭದಿಂದಲೂ ಸಮಬಲದ ಹೋರಾಟ ನೀಡಿದವು. 5 ನಿಮಿಷಕ್ಕೂ ಮುನ್ನ ಜೈಪುರ 6-4ರಲ್ಲಿಮೇಲುಗೈ ಸಾಧಿಸಿತು. ಆದರೆ ಈ ಹಂತದಲ್ಲಿಸೂಪರ್ ಟ್ಯಾಕಲ್ ಮಾಡಿದ ತಲೈವಾಸ್ ಆಗಾರರು ತಂಡದ ಹೋರಾಟವನ್ನು 6-6ರಲ್ಲಿನೋಡಿಕೊಂಡರು.

ಸಚಿನ್ ಒಳಗೊಂಡ ತಮಿಳ್ ತಲೈವಾಸ್ ತಂಡದ ಪ್ರಬಲ ಪ್ರತಿರೋಧ ನಡುವೆಯೂ ರೇಡಿಂಗ್ ಮತ್ತು ಟ್ಯಾಕಲ್ ಗಮನ ಸೆಳೆದ ಮಾಜಿ ಚಾಂಪಿಯನ್ಸ್ ಜೈಪುರ ತಂಡ, ಸುರ್ಜೀತ್ ಸಿಂಗ್ ಸಾಹಸದಿಂದ ವಿಶಾಲ್ ಚಾಹಲ್ ಅವರನ್ನು ಟ್ಯಾಕಲ್ ಮಾಡಿ 9ನೇ ನಿಮಿಷದಲ್ಲಿಎದುರಾಳಿ ತಂಡವನ್ನು ಮೊದಲ ಬಾರಿಗೆ ಖಾಲಿ ಮಾಡಿಸಿತು. ಇದರಿಂದ ಮುನ್ನಡೆಯ ಅಂತರವನ್ನು ಹೆಚ್ಚಿಸಿಕೊಂಡಿತು.

ಅಕ್ಟೊಬರ್ 28ರಂದು ಹರಿಯಾಣ ಸ್ಟಿಲರ್ಸ್ ಮತ್ತು ದಬಾಂಗ್ ದಿಲ್ಲಿಹಾಗೂ ತೆಲುಗು ಟೈಟನ್ಸ್ ಮತ್ತು ಪಟನಾ ಪೈರೇಟ್ಸ್ ತಂಡಗಳು ಮುಖಾಮುಖಿಯಾಗಲಿವೆ.