ಕ್ರೀಡೆ

ಸೋಲಿನ ಕೊಂಡಿ ಕಳಚಿದ ತಲೈವಾಸ್‌ : ನರೇಂದರ್‌ ಸೂಪರ್‌ ಟೆನ್‌ ಸಾಹಸ

ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟಿದ್ದ ತಮಿಳ್‌ ತಲೈವಾಸ್‌ ರೈಡರ್‌ ನರೇಂದರ್‌ ಅವರ ಸೂಪರ್‌ ಟೆನ್‌ ಸಾಹಸದಿಂದಾಗಿ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ 65ನೇ ಪಂದ್ಯದಲ್ಲಿ ಯುಪಿ ಯೋಧಾಸ್‌ ತಂಡವನ್ನು ಮಣಿಸಿತು. ಇದರೊಂದಿಗೆ ಕೊನೆಗೂ ಸತತ ಐದು ಪಂದ್ಯಗಳ ಸೋಲಿನ ಕೊಂಡಿ ಕಳಚುವಲ್ಲಿ ತಲೈವಾಸ್‌ ಯಶಸ್ವಿಯಾಯಿತು.

ಎನ್‌ಎಸ್‌ಸಿಐ ಅಂಗಳದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ 46-27 ಅಂಕಗಳ ಅಂತರದಿಂದ ಯೋಧಾಸ್‌ ಸವಾಲನ್ನು ಮೆಟ್ಟಿನಿಂತಿತು. ಅತ್ಯುತ್ತಮ ಪ್ರದರ್ಶನ ನೀಡಿದ ನರೇಂದರ್‌ 14 ಅಂಕ ಕಲೆಹಾಕಿದರೆ, ಅಜಿಂಕ್ಯ ಪವಾರ್‌ (5 ಅಂಕ), ಸಾಗರ್‌ (6 ಅಂಕ), ಸಾಹಿಲ್‌ (5 ಅಂಕ) ತಂಡದ ಗೆಲುವಿಗೆ ನೆರವಾದರು.

ಯೋಧಾಸ್‌ ಪರ ಡುಮ್ಕಿ ಖ್ಯಾತಿ ಪರ್ದೀಪ್‌ ನರ್ವಾಲ್‌ 3 ಅಂಕ ಗಳಿಸಿ ನಿರಾಸೆ ಮೂಡಿಸಿದರೆ, ವಿಜಯ್‌ ಮಲಿಕ್‌ ಸೂಪರ್‌ 10 ಬಲದಿಂದ ತಂಡದ ಹೋರಾಟಕ್ಕೆ ಸಾಕ್ಷಿಯಾದರು. ಯೋಧಾಸ್‌ 8ನೇ ಸೋಲಿಗೆ ಗುರಿಯಾದರೆ, ತಲೈವಾಸ್‌ ಮೂರನೇ ಗೆಲುವಿಗೆ ಪಾತ್ರವಾಯಿತು.

ಮೊದಲ ಮುನ್ನಡೆಯಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ತಮಿಳ್‌ ತಲೈವಾಸ್‌ ಆಟಗಾರರು, ದ್ವಿತೀಯಾರ್ಧದಲ್ಲೂ ಅದೇ ಲಯ ಕಾಯ್ದುಕೊಂಡರು. ಸಂಘಟಿತ ಹೋರಾಟ ನೀಡಿದ ತಲೈವಾಸ್‌ 27ನೇ ನಿಮಿಷದಲ್ಲಿ 2ನೇ ಬಾರಿ ಯೋಧರನ್ನು ಕಟ್ಟಿಹಾಕಿದರು. ಇದರೊಂದಿಗೆ ಮುನ್ನಡೆಯನ್ನು 29-17ರಲ್ಲಿಹೆಚ್ಚಿಸಿಕೊಂಡ ತಲೈವಾಸ್‌, ಪಂದ್ಯ ಮುಗಿಯಲು ಇನ್ನೂ 10 ನಿಮಿಷಗಳಿರುವಾಗ 33-18ರಲ್ ಅಂತರ ಕಾಯ್ದುಕೊಂಡಿತು.

15 ಅಂಕಗಳ ಮುನ್ನಡೆಯೊಂದಿಗೆ ಗೆಲುವಿನ ಸನಿಹಕ್ಕೇರಿದ ತಲೈವಾಸ್‌, ಮೂವರು ಸದಸ್ಯರಿಗೆ ತಗ್ಗಿದ ಯೋಧಾಸ್‌ ಮೇಲೆ ಮತಷ್ಟು ಒತ್ತಡ ಹೇರುವ ಪ್ರಯತ್ನ ನಡೆಸಿತು. ಆದರೆ ಸೂಪರ್‌ ಟ್ಯಾಕಲ್‌ನಲ್ಲಿ2 ಅಂಕ ಗಿಟ್ಟಿಸಿದ ಯೋಧರು 20-33ರಲ್ಲಿಮರು ಹೋರಾಟ ನೀಡಿದರು. ನಂತರವೂ ಟ್ಯಾಕಲ್‌ನಲ್ಲಿಮಿಂಚಿದ ಯೋಧಾಸ್‌ ಸತತವಾಗಿ 4 ಅಂಕ ಗಳಿಸಿ ತಂಡದ ಹಿನ್ನಡೆಯನ್ನು 23-34ಕ್ಕೆ ಇಳಿಸಿತು.

ರೇಡರ್‌ ನರೇಂದರ್‌ ಅವರ ಅದ್ಬುತ ಆಟದ ಬಲದಿಂದ ತಮಿಳ್‌ ತಲೈವಾಸ್‌ ತಂಡ ಪಂದ್ಯದ ಪ್ರಥಮಾರ್ದಕ್ಕೆ 19-11 ಅಂಕಗಳಿಂದ ಅಂತರ ಕಾಯ್ದುಕೊಂಡಿತು.ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ತಲೈವಾಸ್‌, ಹಿಂದಿನ ಸೋಲಿನಿಂದ ಹೊರಬರುವ ಮುನ್ಸೂಚನೆ ನೀಡಿತು. ನೇ ನಿಮಿಷದಲ್ಲಿತಂಡದ ಮುನ್ನಡೆಯನ್ನು 5-1ಕ್ಕೆ ವಿಸ್ತರಿಸಿದ ತಲೈವಾಸ್‌ ಆಟಗಾರರು, 7ನೇ ನಿಮಿಷಕ್ಕೆ ಮುನ್ನಡೆಯನ್ನು 2-11ಕ್ಕೆ ಹೆಚ್ಚಿಸಿದರು.

ನಿತಿನ್‌ ಪನ್ವರ್‌ ಅವರನ್ನು ಔಟ್‌ ಮಾಡುವ ಮೂಲಕ ತಲೈವಾಸ್‌ ಪಂದ್ಯದಲ್ಲಿಮೊದಲ ಬಾರಿ 2 ಆಲೌಟ್‌ ಪಾಯಿಂಟ್ಸ್‌ ಗಿಟ್ಟಿಸಿತು. ಆರಂಭದಲ್ಲೇ ಹಿನ್ನಡೆಗೆ ಗುರಿಯಾದ ಯೋಧಾಸ್‌ ಆಟಗಾರರು ಹೊಂದಾಣಿಕೆ ಆಟ ಪ್ರದರ್ಶಿಸಲು ತಿಣುಕಾಡಿದರು. ಆಲ್‌ರೌಂಡರ್‌ ವಿಜಯ್‌ ಮಲಿಕ್‌ ಅಲ್ಪ ಹೋರಾಟ ನಡೆಸಿದ್ದನ್ನು ಬಿಟ್ಟರೇ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ. ಮೊದಲ ಹತ್ತು ನಿಮಿಷಗಳ ಆಟ ಮುಕ್ತಾಯಕ್ಕೆ ತಲೈವಾಸ್‌ 16-6ರಲ್ಲಿಮೇಲುಗೈ ಸಾಧಿಸಿತು. ಸೂಧಿರ್ತಿದಾಯಕ ಪ್ರದರ್ಶನ ನೀಡಿದ ನರೇಂದರ್‌ಗೆ ಸಾಥ್‌ ನೀಡಿದ ಲೆಫ್ಟ್‌ ಕಾರ್ನರ್‌ ಡಿಫೆಂಡರ್‌ ಸಾಹಿಲ್‌ ಗುಲಿಯಾ, ರೇಡರ್‌ ಅಜಿಂಕ್ಯ ಪವಾರ್‌ ಉತ್ತಮ ಸಾಥ್‌ ನೀಡಿದರು.