ಕ್ರೀಡೆ

ಆಸೀಸ್​ ವಿರುದ್ಧ ಸೋತರೂ ಸ್ಮೃತಿ ರೆಕಾರ್ಡ್​ಗಳು ಹಲವು! ಹೀಗಿವೆ ಸ್ಟಾರ್​ ಆಟಗಾರ್ತಿಯ ವಿಶ್ವ ದಾಖಲೆಗಳು | Smriti Mandhana

ನವದೆಹಲಿ: ನಿನ್ನೆ (ಅ.12) ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್​ ಬ್ಯಾಟರ್​ ಸ್ಮೃತಿ ಮಂಧಾನ, ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಶ್ರೇಷ್ಠ ಮೈಲಿಗಲ್ಲು ಸಾಧಿಸಿದರು. ಆಸೀಸ್​ ವಿರುದ್ಧ ಪಂದ್ಯ ಸೋತರೂ ಅವರ ವಿಶ್ವ ದಾಖಲೆಗಳು ಮಾತ್ರ ಇದೀಗ ಕ್ರಿಕೆಟ್​ ಪ್ರಿಯರ ಹುಬ್ಬೇರಿಸುತ್ತಿವೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ, 66 ಎಸೆತಗಳಲ್ಲಿ 80 ರನ್ ಗಳಿಸಿದ ಸ್ಮೃತಿ, ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 1000ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರೊಟ್ಟಿಗೆ 5,000 ರನ್​ ಕಲೆಹಾಕಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ಪಟ್ಟವನ್ನು ಪಡೆದರು.

1. ಸ್ಮೃತಿ ಮಂಧಾನ (ಭಾರತ) - 1053 ರನ್ (2025)

2. ಬೆಲಿಂಡಾ ಕ್ಲಾರ್ಕ್ (ಆಸ್ಟ್ರೇಲಿಯಾ) - 970 ರನ್ (1997)

3. ಲಾರಾ ವೂಲ್ವರ್ಡ್ (ದಕ್ಷಿಣ ಆಫ್ರಿಕಾ) - 882 ರನ್ (2022)

5,000 ರನ್​ ದಾಖಲೆ

ಈ ಹಿಂದೆ ಟೀಮ್ ಇಂಡಿಯಾದ ಮಾಜಿ ನಾಯಕಿ ಮಿಥಾಲಿ ರಾಜ್​, ಏಕದಿನ ಪಂದ್ಯಗಳಲ್ಲಿ 5,000 ರನ್‌ಗಳ ಮೈಲಿಗಲ್ಲನ್ನು ತಲುಪಿದ್ದರು. ಇದೀಗ ಅವರ ದಾಖಲೆಯನ್ನು ಮುರಿದಿರುವ ಸ್ಮೃತಿ, ಅವರ ನಂತರದಲ್ಲಿ ಈ ದಾಖಲೆ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ವೆಸ್ಟ್ ಇಂಡೀಸ್ ಪ್ಲೇಯರ್​ ಸ್ಟೀಫನ್ ಟೇಲರ್ 129 ಪಂದ್ಯಗಳಲ್ಲಿ 5,000 ರನ್‌ಗಳನ್ನು ತಲುಪಿದರೆ, ಮಂಧಾನ 112 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಇದಲ್ಲದೆ, ಮಿಥಾಲಿ ರಾಜ್ ಬಳಿಕ 5,000 ರನ್‌ಗಳನ್ನು ಗಳಿಸಿದ ಎರಡನೇ ಭಾರತೀಯ ಮಹಿಳಾ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಸ್ಮೃತಿ ಪಾತ್ರರಾಗಿದ್ದಾರೆ.

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 5,000 ರನ್‌ಗಳನ್ನು ಗಳಿಸಿದ ಅತ್ಯಂತ ವೇಗದ ಆಟಗಾರ್ತಿಯರ ಪಟ್ಟಿ

1. ಸ್ಮೃತಿ ಮಂಧಾನ (ಭಾರತ) - 112 ಇನ್ನಿಂಗ್ಸ್‌

2. ಸ್ಟೀಫನ್ ಟೇಲರ್ (ವೆಸ್ಟ್ ಇಂಡೀಸ್) - 129 ಇನ್ನಿಂಗ್ಸ್‌

3. ಸುಜೀ ಬೇಟ್ಸ್ (ನ್ಯೂಜಿಲೆಂಡ್) - 136 ಇನ್ನಿಂಗ್ಸ್‌

4. ಮಿಥಾಲಿ ರಾಜ್ (ಭಾರತ) - 144 ಇನ್ನಿಂಗ್ಸ್‌

5. ಷಾರ್ಲೆಟ್ ಎಡ್ವರ್ಡ್ಸ್ (ಇಂಗ್ಲೆಂಡ್) - 146 ಇನ್ನಿಂಗ್ಸ್‌