ಕ್ರೀಡೆ

ಟಿ20 ವಿಶ್ವಕಪ್​: ಆತಿಥೇಯ ಅಮೆರಿಕ ತಂಡದಲ್ಲಿ ಭಾರತೀಯರ ಪ್ರಾಬಲ್ಯ

ಟೆಕ್ಸಾಸ್​: ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ ಜಂಟಿ ಆತಿಥೇಯ ಅಮೆರಿಕದ 15 ಆಟಗಾರರ ತಂಡ ಪ್ರಕಟಗೊಂಡಿದ್ದು, ಭಾರತ ಮೂಲದ 7 ಆಟಗಾರರು ಸ್ಥಾನ ಸಂಪಾದಿಸಿದ್ದಾರೆ. ಗುಜರಾತ್​ನ ವಿಕೆಟ್​ ಕೀಪರ್​&ಬ್ಯಾಟರ್​ ಮೊನಾಂಕ್​ ಪಟೇಲ್​ ತಂಡದ ನಾಯಕರಾಗಿ ನೇಮಕಗೊಂಡಿದ್ದರೆ, 2018-19ರ ರಣಜಿ ಟ್ರೋಫಿಯಲ್ಲಿ ಗರಿಷ್ಠ ರನ್​ಸ್ಕೊರರ್​ ಆಗಿದ್ದ ದೆಹಲಿಯ ಬ್ಯಾಟರ್​ ಮಿಲಿಂದ್​ ಕುಮಾರ್​, ಮುಂಬೈನ ಎಡಗೈ ಸ್ಪಿನ್ನರ್​ ಹಮೀರ್ತ್​ ಸಿಂಗ್​, ಮುಂಬೈ ವೇಗಿ ಸೌರಭ್​ ನೇತ್ರವಲ್ಕರ್​ ಸ್ಥಾನ ಪಡೆದಿದ್ದಾರೆ.

ಅಹಮದಾಬಾದ್​ ಮೂಲದ ನಿಸರ್ಗ್​ ಪಟೇಲ್​, ಪಂಜಾಬ್​ ಮೂಲದ ಜೆಸ್ಸಿ ಸಿಂಗ್​ ಮತ್ತು ಕರ್ನಾಟಕದ ಚಿಕ್ಕಮಗಳೂರು ಮೂಲದ ನೋಶ್ತುಷ್​ ಕೆಂಜಿಗೆ ಇತರ ಮೂವರು. ಅಮೆರಿಕ ಪರವಾಗಿ ಆಡುವ ಸಲುವಾಗಿಯೇ ಭಾರತದಿಂದ ವಲಸೆ ಹೋಗಿದ್ದ 2012ರ 19 ವಯೋಮಿತಿ ತಂಡದ ನಾಯಕ ಉನ್ಮುಕ್​ ಚಂದ್​ ಮತ್ತು ವಿಕೆಟ್​ ಕೀಪರ್​ ಸ್ಮಿತ್​ ಪಟೇಲ್​ ಸ್ಥಾನ ಸಂಪಾದಿಸುವಲ್ಲಿ ವಿಲರಾಗಿದ್ದಾರೆ. ನ್ಯೂಜಿಲೆಂಡ್​ ಮೂಲದ ಆಲ್ರೌಂಡರ್​ ಕೋರಿ ಆಂಡರ್​ಸನ್​ ಸ್ಥಾನ ಪಡೆದಿದ್ದಾರೆ. ಅವರು 2014, 2016ರ ಟಿ20 ವಿಶ್ವಕಪ್​ನಲ್ಲಿ ಕಿವೀಸ್​ ಪರ ಆಡಿದ್ದರು. ಪಾಕಿಸ್ತಾನ ಮೂಲದ ವೇಗಿ ಅಲಿ ಖಾನ್​ ಕೂಡ ತಂಡದಲ್ಲಿದ್ದಾರೆ.

ತಂಡ: ಮೊನಾಂಕ್​ ಪಟೇಲ್​ (ನಾಯಕ), ಆರನ್​ ಜೋನ್ಸ್​, ಆಂಡ್ರಿಸ್​ ಗೌಸ್​, ಕೋರಿ ಆಂಡರ್​ಸನ್​, ಅಲಿ ಖಾನ್​, ಹಮೀರ್ತ್​ ಸಿಂಗ್​, ಜೆಸ್ಸಿ ಸಿಂಗ್​, ಮಿಲಿಂದ್​ ಕುಮಾರ್​, ನಿಸರ್ಗ್​ ಪಟೇಲ್​, ನಿತೀಶ್​ ಕುಮಾರ್​, ನೊಶ್ತುಷ್​ ಕೆಂಜಿಗೆ, ಸೌರಭ್​ ನೇತ್ರವಲ್ಕರ್​, ಶೇಡ್ಲೆ ವಾನ್​, ಸ್ಟೀವನ್​ ಟೇಲರ್​, ಶಯನ್​ ಜಹಾಂಗೀರ್​.