ನವದೆಹಲಿ: ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಟಿ-20 ವಿಶ್ವಕಪ್ 2024 ಕ್ರಿಕೆಟ್ ಪಂದ್ಯಾವಳಿಯು ಶನಿವಾರ (ಜೂನ್ 1) ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ. ಆದರೆ ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024 ಪಂದ್ಯಗಳ ಸಮಯ ಭಾರತದ ಸಮಯಕ್ಕಿಂತ ಭಿನ್ನವಾಗಿದೆ. ಜೂನ್ 1 ರಂದು, ಯುಎಸ್ಎ ಮತ್ತು ಕೆನಡಾ ನಡುವಿನ ಮೊದಲ ಪಂದ್ಯವು ರಾತ್ರಿ 7.30 ಕ್ಕೆ ನಡೆಯಲಿದ್ದು, ಈ ಪಂದ್ಯವು ಜೂನ್ 2 ರಂದು ಬೆಳಗ್ಗೆ 6 ಕ್ಕೆ ಭಾರತದಲ್ಲಿ ನೋಡಬೇಕಾಗುತ್ತದೆ. .
ಇದನ್ನೂ ಓದಿ: ಓಟಿಟಿ ಪ್ರೇಕ್ಷಕರಿಗೆ ಅಚ್ಚರಿ..ಆಸ್ಕರ್ ಪುರಸ್ಕೃತ ಗಾಡ್ಜಿಲ್ಲಾ ಮೈನಸ್ ಒನ್ ಸ್ಟ್ರೀಮಿಂಗ್! ಎಲ್ಲಿ?ಯಾವಾಗ? ವಿವರ ಇಲ್ಲಿದೆ..
ಈ ಪಂದ್ಯಾವಳಿಯು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ನೇರ ಪ್ರಸಾರವಾಗಲಿದೆ. ಈ ಪಂದ್ಯಗಳು ಭಾರತದಲ್ಲಿನ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವಾಗಲಿದೆ. ಇದನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ ಆಗಿ ವೀಕ್ಷಿಸಬಹುದು. ಟೀಮ್ ಇಂಡಿಯಾ ತನ್ನ ಟಿ 20 ವಿಶ್ವಕಪ್ ಪ್ರಯಾಣವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಮೊದಲು ಪ್ರಾರಂಭಿಸಲಿದೆ. ಪಂದ್ಯ ರಾತ್ರಿ 8 ಗಂಟೆಗೆ (ಐಎಸ್ಟಟಿ) ಕ್ಕೆ ಆರಂಭವಾಗಲಿದೆ.
ಭಾರತ ತಂಡದಲ್ಲಿ ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಮತ್ತು ಶುಭಂ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್ ಮೀಸಲು ಆಟಗಾರರಾಗಿದ್ದಾರೆ.