ಕ್ರೀಡೆ

ಟಿ20 ವಿಶ್ವಕಪ್​ನಲ್ಲಿ ಇಂದು ದಕ್ಷಿಣ ಆಫ್ರಿಕಾ-ಶ್ರೀಲಂಕಾ ಮುಖಾಮುಖಿ

ನ್ಯೂಯಾರ್ಕ್​: ಸ್ಫೋಟಕ ಬ್ಯಾಟರ್​ಗಳನ್ನು ಒಳಗೊಂಡ ದಕ್ಷಿಣ ಆಫ್ರಿಕಾ ಮತ್ತು ವೈವಿಧ್ಯತೆಯಿಂದ ಕೂಡಿರುವ ಬೌಲಿಂಗ್​ ವಿಭಾಗವನ್ನು ಹೊಂದಿರುವ ಶ್ರೀಲಂಕಾ ತಂಡಗಳು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಸೋಮವಾರ ರಾತ್ರಿ (ಸ್ಥಳಿಯ ಕಾಲಮಾನ ಸೋಮವಾರ ಬೆಳಗ್ಗೆ) ಮುಖಾಮುಖಿ ಆಗಲಿವೆ. ಡಿ ಗುಂಪಿನ ಈ ಮೊದಲ ಕಾದಾಟದಲ್ಲಿ ಶುಭಾರಂಭ ಕಾಣಲು ಉಭಯ ತಂಡಗಳಿಂದ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ನಿರೀೆ ಇದೆ.

ನೆದರ್ಲೆಂಡ್​, ಬಾಂಗ್ಲಾದೇಶ ಮತ್ತು ನೇಪಾಳ ಡಿ ಗುಂಪಿನ ಇತರ ಮೂರು ತಂಡಗಳಾಗಿದ್ದು, ದ. ಆಫ್ರಿಕಾ-ಶ್ರೀಲಂಕಾ ತಂಡಗಳೇ ಸೂಪರ್​&8 ಹಂತಕ್ಕೇರುವ ನೆಚ್ಚಿನ ತಂಡಗಳಾಗಿವೆ. ಹೀಗಾಗಿ ಈ ಪಂದ್ಯ ಗುಂಪಿನ ಅಗ್ರಸ್ಥಾನಿಯನ್ನು ನಿರ್ಧರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಗಳಿವೆ. ಐಸಿಸಿ ವಿಶ್ವಕಪ್​ಗಳಲ್ಲಿ ಹರಿಣಗಳಿಗೆ ಇದುವರೆಗೆ ಪ್ರಶಸ್ತಿ ಕೈಗೆಟುಕಿಲ್ಲ. ಇದರ ನಡುವೆ ಟಿ20 ಆವೃತ್ತಿಯ ವಿಶ್ವಕಪ್​ನಲ್ಲಿ ದಣ ಆಫ್ರಿಕಾ ಸಾಧಾರಣ ಎನಿಸುವಂಥ ದಾಖಲೆ ಹೊಂದಿದೆ. 2 ಬಾರಿ ಸೆಮಿಫೈನಲ್​ಗೇರಿದ್ದೇ ಶ್ರೇಷ್ಠ ಸಾಧನೆಯಾಗಿದ್ದು, ಕಳೆದ 3 ಆವೃತ್ತಿಗಳಲ್ಲಿ ನಾಕೌಟ್​ ಹಂತಕ್ಕೂ ಪ್ರವೇಶ ಪಡೆದಿಲ್ಲ. ಮತ್ತೊಂದೆಡೆ ಶ್ರೀಲಂಕಾ ಮೊದಲ 5 ಆವೃತ್ತಿಗಳಲ್ಲಿ 3 ಬಾರಿ ಫೈನಲ್​ಗೇರಿತ್ತು. ಆದರೆ 2014ರಲ್ಲಿ ಪ್ರಶಸ್ತಿ ಗೆದ್ದ ನಂತರದಲ್ಲಿ ಲಂಕಾ ನಾಕೌಟ್​ ಹಂತಕ್ಕೇರುವಲ್ಲಿ ಯಶ ಕಂಡಿಲ್ಲ. ಹೀಗಾಗಿ ಉಭಯ ತಂಡಗಳು ಈ ಬಾರಿ ತಮ್ಮದೇ ಆದ ಛಾಪು ಮೂಡಿಸುವ ಹಂಬಲದಲ್ಲಿವೆ.

ಆಫ್ರಿಕಾ ಬ್ಯಾಟಿಂಗ್​-ಲಂಕಾ ಬೌಲಿಂಗ್​

ನಾಯಕ ಏಡನ್​ ಮಾರ್ಕ್ರಮ್​, ಕ್ವಿಂಟನ್​ ಡಿಕಾಕ್​, ಹೆನ್ರಿಕ್​ ಕ್ಲಾಸೆನ್​, ಡೇವಿಡ್​ ಮಿಲ್ಲರ್​, ಟ್ರಿಸ್ಟಾನ್​ ಸ್ಟಬ್ಸ್​ರಂಥ ಬ್ಯಾಟರ್​ಗಳು ದಣ ಆಫ್ರಿಕಾದ ಪ್ರಮುಖ ಬಲವಾಗಿದ್ದಾರೆ. ಐಪಿಎಲ್​ನಲ್ಲೂ ಬಿರುಸಿನ ಆಟದೊಂದಿಗೆ ಮಿಂಚಿರುವ ಈ ಬ್ಯಾಟರ್​ಗಳಿಗೆ ಲಂಕಾದ ಸ್ಪಿನ್ನರ್​ಗಳಾದ ವಾನಿಂದು ಹಸರಂಗ, ಮಹೀಶ್​ ತೀಕ್ಷಣ, ವೇಗಿಗಳಾದ ಮಥೀಶ ಪಥಿರಣ ಮತ್ತು ದಿಲ್ಶಾನ್​ ಮಧುಶಂಕ ಸವಾಲಾಗಲಿದ್ದಾರೆ. ನ್ಯೂಯಾರ್ಕ್​ನಲ್ಲಿ ನಡೆದ ಭಾರತ-ಬಾಂಗ್ಲಾ ಅಭ್ಯಾಸ ಪಂದ್ಯ ಗಮನಿಸಿದಾಗ, ನಾಸೌ ಕ್ರೀಡಾಂಗಣದ ಪಿಚ್​ ಬೌಲರ್​ಗಳಿಗೆ ಸಹಕರಿಸುವ ನಿರೀೆ ಇದೆ.

ಇಂದಿನ ಪಂದ್ಯಗಳು

ನಮೀಬಿಯಾ-ಓಮನ್​

ಗುಂಪು: ಬಿ

ಆರಂಭ: ಬೆಳಗ್ಗೆ 6

ಎಲ್ಲಿ: ಬಾರ್ಬಡೋಸ್​

ಶ್ರೀಲಂಕಾ-ದಕ್ಷಿಣ ಆಫ್ರಿಕಾ

ಗುಂಪು: ಡಿ

ಆರಂಭ: ರಾತ್ರಿ 8

ಎಲ್ಲಿ: ನ್ಯೂಯಾರ್ಕ್​

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​