ಕೇಪ್ಟೌನ್: ಮುಂಬರುವ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಆರಿಸುವ ಮುನ್ನ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ಜೂನ್ನಲ್ಲಿ ಟಿ20 ವಿಶ್ವಕಪ್ನಲ್ಲಿ ಆಡುವ ಕುರಿತು ಹಿರಿಯ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಜತೆಗೆ ಚರ್ಚಿಸಲಿದ್ದಾರೆ.
2022ರ ಟಿ20 ವಿಶ್ವಕಪ್ ಸೆಮೀಸ್ ಸೋಲಿನ ಬಳಿಕ ರೋಹಿತ್, ಕೊಹ್ಲಿ ಭಾರತ ಪರ ಯಾವುದೇ ಚುಟುಕು ಕ್ರಿಕೆಟ್ ಪಂದ್ಯ ಆಡಿಲ್ಲ. ರೋಹಿತ್, ಕೊಹ್ಲಿ ಟಿ20 ಭವಿಷ್ಯದ ಬಗ್ಗೆ ಚರ್ಚಿಸಿದ ಬಳಿಕವೇ ಅಗರ್ಕರ್, ಆಫ್ಘನ್ ವಿರುದ್ಧ ಸರಣಿಗೆ ತಂಡವನ್ನು ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.
ಇನ್ನು ಟಿ20 ವಿಶ್ವಕಪ್ಗೆ ಸಂಭಾವ್ಯರೆನಿಸುವ 30 ಆಟಗಾರರ ಮೇಲೆ ಆಯ್ಕೆ ಸಮಿತಿ ಐಪಿಎಲ್ 17ನೇ ಆವೃತ್ತಿಯ ವೇಳೆ ಕಣ್ಣಿಡಲಿದೆ.