ಮೆಲ್ಬೋರ್ನ್: ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಗೆ ಪೂರ್ವಭಾವಿಯಾಗಿ ಗುರುವಾರ ಸಿಂಗಲ್ಸ್ ವಿಭಾಗದ ಡ್ರಾ ಪ್ರಕಟಿಸಲಾಗಿದೆ. ಹಾಲಿ ಚಾಂಪಿಯನ್ ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್ ನಿರೀಕ್ಷೆಯಂತೆ ಪುರುಷರ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದು, ಮಹಿಳೆಯರ ವಿಭಾಗದಲ್ಲಿ ಇಗಾ ಸ್ವಿಯಾಟೆಕ್ ಪಡೆದುಕೊಂಡಿದ್ದಾರೆ. ಮೆಲ್ಬೋರ್ನ್ ಪಾರ್ಕ್‌ನಲ್ಲಿ ಭಾನುವಾರ ಟೂರ್ನಿಗೆ ಚಾಲನೆ ದೊರೆಯಲಿದೆ.
22 ಗ್ರಾಂಡ್ ಸ್ಲಾಂ ವಿಜೇತ ಸ್ಪೇನ್‌ನ ರಾೆಲ್ ನಡಾಲ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದಾರೆ. 24 ಗ್ರಾಂಡ್ ಸ್ಲಾಂ ಒಡೆಯ ಜೋಕೊವಿಕ್‌ಗೆ ಸವಾಲೊಡ್ಡಬಲ್ಲ ಮತ್ತೊರ್ವ ಸ್ಪೇನ್‌ನ ಯುವ ಆಟಗಾರ ಕಾರ್ಲೋಸ್ ಅಲ್ಕರಾಜ್ 2ನೇ ಶ್ರೇಯಾಂಕ ಪಡೆದಿದ್ದಾರೆ. ಆದರೆ ಇವರಿಬ್ಬರೂ ೈನಲ್‌ನಲ್ಲಷ್ಟೇ ಮುಖಾಮುಖಿಯಾಗುವಂಥ ಡ್ರಾವನ್ನೂ ಪಡೆದುಕೊಂಡಿದ್ದಾರೆ. ಮಹಿಳಾ ವಿಭಾಗದ ಸೆಣಸಾಟ ಎಲ್ಲರಿಗೂ ಮುಕ್ತ ಅವಕಾಶ ತೆರೆದಿಟ್ಟಿದೆ.
ದಾಖಲೆಯ 11ನೇ ಆಸ್ಟ್ರೇಲಿಯನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೋ ಮೊದಲ ಸುತ್ತಿನಲ್ಲಿ ಅರ್ಹತಾ ಸುತ್ತಿನ ಆಟಗಾರರನ್ನು ಎದುರಿಸಲಿದ್ದಾರೆ. ಕ್ವಾರ್ಟರ್‌ೈನಲ್‌ನಲ್ಲಿ ಗ್ರೀಸ್‌ನ 7ನೇ ಶ್ರೇಯಾಂಕಿತ ಸ್ಟಿಾನೋಸ್ ಸಿಸಿಪಾಸ್ ಮುಖಾಮುಖಿಯಾಗುವ ನಿರೀಕ್ಷೆ ಇದೆ. ಈ ಪಂದ್ಯ ಕಳೆದ ಬಾರಿಯ ೈನಲ್‌ನ ಮರುಪಂದ್ಯ ಎನಿಸಲಿದೆ. ಮತ್ತೊಂದು 16ರ ಘಟ್ಟದಲ್ಲಿ ಅಲ್ಕರಾಜ್‌ಗೆ 6ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್, ಇಟಲಿಯ ಜನ್ನಿಕ್ ಸಿನ್ನರ್-ಆಂಡ್ರೆ ರುಬ್ಲೆವ್, ರಷ್ಯಾದ ರಷ್ಯಾದ ಡೆನಿಲ್ ಮೆಡ್ವೆಡೇವ್- ಡೆನ್ಮಾರ್ಕ್‌ನ ಹೋಲ್ಗರ್ ರೂನ್ ಎದುರಾಗುವ ನಿರೀಕ್ಷೆ ಇದೆ. ಇವರಿಗೆ ನಾರ್ವೆಯ ಕ್ಯಾಸ್ಪರ್ ರುಡ್,ಅಮೆರಿಕದ ಟೇಲರ್ ಫ್ರಿಟ್ಜ್, ಬೆನ್ ಶೆಲ್ಟನ್‌ರಿಂದ ನಿಕಟ ಪೈಪೋಟಿ ಎದುರಾಗುವ ಸಾಧ್ಯತೆಗಳಿವೆ.
ರೈಬಕಿನಾಗೆ ಪೆಗುಲಾ ಸವಾಲು!: ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಬೆಲಾರಸ್‌ನ ಅರಿನಾ ಸಬಲೆಂಕಾ, ವಿಶ್ವ ನಂ. 1 ಇಗಾ ಸ್ವಿಯಾಟೆಕ್, ಟುನೀಷಿಯಾದ ಒನ್ಸ್ ಜಬೇರ್, ಅಮೆರಿಕದ ಜೆಸ್ಸಿಕಾ ಪೆಗುಲಾ,ಕೋಕೋ ಗ್ೌ ಪ್ರಮುಖ ಆಟಗಾರ್ತಿಯರಾಗಿದ್ದಾರೆ. ತಾಯ್ತನದ ಬಿಡುವಿನ ಬಳಿಕ ಎರಡು ಬಾರಿಯ ಚಾಂಪಿಯನ್ ಜಪಾನ್ ನವೋಮಿ ಒಸಾಕ ಕಣಕ್ಕಿಳಿಯಲಿದ್ದು, ಆರಂಭಿಕ ಸುತ್ತಿನಲ್ಲಿ ವಿಶ್ವ ನಂ.16 ್ರಾನ್ಸ್‌ನ ಕ್ಯಾರೊಲಿನ್ ಗಾರ್ಸಿಯಾ ಎದುರು ಸೆಣಸಲಿದ್ದಾರೆ. ಅಗ್ರ ಶ್ರೇಯಾಂಕಿತೆ ಸ್ವಿಯಾಟೆಕ್ 2020ರ ಚಾಂಪಿಯನ್ ಸೋಫಿಯಾ ಕೆನಿನ್ ವಿರುದ್ದ ಆಡಲಿದ್ದಾರೆ.
ಸ್ವಿಯಾಟೆಕ್‌ಗೆ ಕ್ವಾರ್ಟರ್‌ೈನಲ್‌ನಲ್ಲಿ 2023ರ ವಿಂಬಲ್ಡನ್ ಚಾಂಪಿಯನ್ ಮರ್ಕೆಟಾ ವೊಡ್ರೊಸೋವಾ ಎದುರಾಗುವ ಸಾಧ್ಯತೆ ಇದೆ. 3ನೇ ಶ್ರೇಯಾಂಕಿತೆ ಎಲೆನಾ ರೈಬಕಿನಾ-ಜೆಸ್ಸಿಕಾ ಪೆಗುಲಾ, ಅರಿನಾ ಸಬಲೆಂಕಾ-ಒನ್ಸ್ ಜಬೇರ್, ಕೋಕೋ ಗ್ೌ-ಮರಿಯ ಸಕ್ಕರಿ 16ರ ಘಟ್ಟದಲ್ಲಿ ಸೆಣಸಾಟ ನಡೆಸುವ ನಿರೀಕ್ಷೆ ಇದೆ.