ICC Warning To Suryakumar: ಪ್ರಸ್ತುತ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯಲ್ಲಿ ಅಜೇಯ ಓಟದ ಮೂಲಕ ಫೈನಲ್ ತಲುಪಿರುವ ಖುಷಿಯಲ್ಲಿದ್ದ ಭಾರತ ತಂಡದ ಖುಷಿಗೆ ಐಸಿಸಿ ತಣ್ಣಿರು ಎರೆಚಿದ್ದು, ಪಾಕಿಸ್ತಾನ ವಿರುದ್ಧದ ಗುಂಪು ಹಂತದ ಪಂದ್ಯದ ನಂತರ ನೀಡಿದ ಹೇಳಿಕೆಗಾಗಿ ನಾಯಕ ಸೂರ್ಯಕುಮಾರ್ ಯಾದವ್ಗೆ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎಚ್ಚರಿಕೆ ನೀಡಿದೆ ಎಂದು ರೆವ್‌ಸ್ಪೋರ್ಟ್ಸ್ ವರದಿ ಮಾಡಿದೆ.
ಸೆಪ್ಟೆಂಬರ್ 14 ರಂದು ಪಾಕ್ ವಿರುದ್ಧ ಜಯಗಳಿಸಿದ ನಂತರ ಮಾತನಾಡಿದ್ದ ಸೂರ್ಯಕುಮಾರ್ ಈ ಗೆಲುವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದರು ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು.
ಇದನ್ನೂ ಓದಿ:ಕ್ರೀಡೆಯಲ್ಲಿ ಸೋಲು-ಗೆಲುವು ಸಹಜವಾಗಿ ಸ್ವೀಕರಿಸಿ
ಈ ವಿಷಯವಾಗಿ ಬಿಸಿಸಿಐ ಸಿಒಒ ಹೇಮಾಂಗ್ ಅಮೀನ್ ಮತ್ತು ಕ್ರಿಕೆಟ್ ಕಾರ್ಯಾಚರಣೆ ವ್ಯವಸ್ಥಾಪಕ ಸಮ್ಮರ್ ಮಲ್ಲಾಪುರ್ಕರ್ ಅವರೊಂದಿಗೆ ಘಟನೆಯ ಕುರಿತಾಗಿ ವಿಚಾರಣೆಗೆ ಐಸಿಸಿ ಮುಂದೆ ಹಾಜರಾಗಿದ್ದರು ಎಂದು ವರದಿಯಾಗಿದೆ. ರಿಚಿ ರಿಚರ್ಡ್ಸನ್ ಅಧ್ಯಕ್ಷತೆಯಲ್ಲಿ ನಡೆದ ವಿಚಾರಣೆಯು ಸೂರ್ಯಕುಮಾರ್ ಯಾದವ್ ವಿರುದ್ಧ ಐಸಿಸಿಯಿಂದ ಅಧಿಕೃತ ದೂರಿನ ನಂತರ ಭಾರತ ನಾಯಕನಿಗೆ ದಂಡ ಅಥವಾ ಡಿಮೆರಿಟ್ ಪಾಯಿಂಟ್ ವಿಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪಹಲ್ಲಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳೊಂದಿಗೆ ನಾವು ನಿಲ್ಲುತ್ತೇವೆ. ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ಬಹಳಷ್ಟು ಧೈರ್ಯ, ಸಾಹಸ ತೋರಿಸಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಈ ಗೆಲುವನ್ನು ಅರ್ಪಿಸಲು ಬಯಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತಾರೆ ಎಂದು ಭಾವಿಸುತ್ತೇವೆ ಎಂದು ಪಂದ್ಯ ಮುಗಿದ ಬಳಿಕ ಹೇಳಿದರು.
ಇದನ್ನೂ ಓದಿ:ನಿವೃತ್ತ ಉದ್ಯೋಗಿಗೆ ಡಿಜಿಟಲ್ ಅರೆಸ್ಟ್, 19 ಲಕ್ಷ ರೂ. ವಂಚನೆದೂರು ನೀಡಿದ್ದು ಯಾರು..?
ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರ ಪಂದ್ಯದ ನಂತರದ ಹೇಳಿಕೆಗಳಿಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಅಧಿಕೃತ ದೂರು ದಾಖಲಿಸಿದೆ .(ಏಜೆನ್ಸೀಸ್)