ಕ್ರೀಡೆ

ಆಸೀಸ್​ ವಿರುದ್ಧ ಟಿ20 ಸರಣಿಯಿಂದ ವಿಶ್ವಕಪ್​ ತಾರೆಯರಿಗೆ ರೆಸ್ಟ್​; ಸೂರ್ಯಕುಮಾರ್ ಹಂಗಾಮಿ ನಾಯಕ; ಅವಳಿ ಉಪನಾಯಕರು!

ಬೆಂಗಳೂರು: ಏಕದಿನ ವಿಶ್ವ ಚಾಂಪಿಯನ್​ ಆಸ್ಟ್ರೆಲಿಯಾ ವಿರುದ್ಧ ಗುರುವಾರ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ಆತಿಥೇಯ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವಿಶ್ವಕಪ್​ನಲ್ಲಿ ಆಡಿದ ಬಹುತೇಕ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ತಂಡವನ್ನು ಮುನ್ನಡೆಸಲಿದ್ದು, ಋತುರಾಜ್​ ಗಾಯಕ್ವಾಡ್​ ಮೊದಲ 3 ಪಂದ್ಯಗಳಿಗೆ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಕೊನೇ 2 ಪಂದ್ಯಗಳಿಗೆ ಉಪನಾಯಕರಾಗಿ ಶ್ರೇಯಸ್​ ಅಯ್ಯರ್​ ತಂಡ ಸೇರಲಿದ್ದಾರೆ. ಡಿಸೆಂಬರ್​ 3ರಂದು ಹೈದರಾಬಾದ್​ನಲ್ಲಿ ನಿಗದಿಯಾಗಿದ್ದ 5ನೇ ಹಾಗೂ ಅಂತಿಮ ಪಂದ್ಯವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನ ಗೆದ್ದಿದ್ದ ತಂಡದ ಬಹುತೇಕ ಆಟಗಾರರು ಸ್ಥಾನ ಪಡೆದಿದ್ದು, ವಿಶ್ವಕಪ್​ಗೆ ಮುನ್ನ ಗಾಯಗೊಂಡಿದ್ದ ಆಲ್ರೌಂಡರ್​ ಅಕ್ಷರ್​ ಪಟೇಲ್​ ಕಂಬ್ಯಾಕ್​ ಮಾಡಿದ್ದಾರೆ. ಸಂಜು ಸ್ಯಾಮ್ಸನ್​ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ತಂಡ: ಸೂರ್ಯಕುಮಾರ್​ (ನಾಯಕ), ಋತುರಾಜ್​ ಗಾಯಕ್ವಾಡ್​, ಇಶಾನ್​ ಕಿಶನ್​(ವಿ.ಕೀ), ಯಶಸ್ವಿ ಜೈಸ್ವಾಲ್​, ತಿಲಕ್​ ವರ್ಮ, ರಿಂಕು ಸಿಂಗ್​, ಜಿತೇಶ್​ ಶರ್ಮ (ವಿ.ಕೀ), ವಾಷಿಂಗ್ಟನ್​ ಸುಂದರ್​, ಅಕ್ಷರ್​ ಪಟೇಲ್​, ಶಿವಂ ದುಬೆ, ರವಿ ಬಿಷ್ಣೋಯಿ, ಅರ್ಷದೀಪ್​ ಸಿಂಗ್​, ಪ್ರಸಿದ್ಧ ಕೃಷ್ಣ, ಆವೇಶ್​ ಖಾನ್​, ಮುಕೇಶ್​ ಕುಮಾರ್​.