ಕ್ರೀಡೆ

ಮೆಗಾ ಹರಾಜಿನಲ್ಲಿ ಈತ 25-30 ಕೋಟಿ ರೂ. ಪಡೆಯುವುದು ಪಕ್ಕಾ; ಯುವ ಸ್ಟಾರ್​ ಆಟಗಾರನ ಕುರಿತು ಭವಿಷ್ಯ ನುಡಿದ Suresh Raina

ನವದೆಹಲಿ: 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್​ಗೆ ಮುನ್ನುಡಿ ಎಂಬಂತೆ ನವೆಂಬರ್​ 24-25ರಂದು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಕ್ರೀಡಾಭಿಮಾನಿಗಳು ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ಧಾರೆ. ಸೌದಿ ಅರೇಬಿಯಾದ ಜೆದ್ದಾದಲ್ಲಿ ಜರುಗಲಿರುವ ಈ ಹರಾಜು ಪ್ರಕ್ರಿಯೆಯಲ್ಲಿ 574 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇದರಲ್ಲಿ ರಿಷಭ್​ ಪಂತ್​ (Rishabh Pant), ಕೆ.ಎಲ್. ರಾಹುಲ್ (KL Rahul),​ ಸೇರಿದಂತೆ ಅನೇಕ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಾರೀ ಬೆಲೆ ಪಡೆಯುವ ನಿರೀಕ್ಷೆ ಇದೆ.

ಇನ್ನೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕರಾಗಿದ್ದ ರಿಷಭ್​ ಪಂತ್​ (Rishabh Pant) ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಫ್ರಾಂಚೈಸಿಗಳು ರಿಷಭ್​ ಮೇಲೆ ಕಣ್ಣಿಟ್ಟಿವೆ.  2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿರುವ ಪಂತ್ ಎರಡಂಕಿ ಕೋಟಿಯೊಂದಿಗೆ ಹರಾಜಾಗುವುದು ಖಚಿತ ಎಂದು ಕ್ರೀಡಾ ಪಂಡಿತರು ಭವಿಷ್ಯ ನುಡಿಯುತ್ತಿದ್ದು, ಈ ಬಗ್ಗೆ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ (Suresh Raina) ಮಾತನಾಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸುರೇಶ್​ ರೈನಾ, ರಿಷಭ್​ ನಾಯಕತ್ವದ ಅನುಭವ, ಬ್ಯಾಟಿಂಗ್​ ಹಾಗೂ ಫೀಲ್ಡಿಂಗ್​ ಗುಣಗಳನ್ನು ನೋಡಿದರೆ ಫ್ರಾಂಚೈಸಿಗಳ ನಡುವೆ ಹರಾಜಿನಲ್ಲಿ ಪೈಪೋಠಿ ಏರ್ಪಡುವುದು ಸಹಜ. ನನ್ನ ಪ್ರಕಾರ ಆತ 25-30 ಕೋಟಿ ರೂ ಮೊತ್ತಕ್ಕೆ ಮಾರಾಟವಾಗಲಿದ್ದಾನೆ.

ನನ್ನ ಪ್ರಕಾರ ರಿಷಭ್ ಪಂತ್ ಅವರಿಗೆ 25 ರಿಂದ 30 ಕೋಟಿ ರೂ. ಸಿಗಬೇಕು. ಏಕೆಂದರೆ ಆಸ್ಟ್ರೇಲಿಯಾ ಆಟಗಾರರಿಗೆ ಬೃಹತ್ ಮೊತ್ತವನ್ನು ನೀಡಿ ಖರೀದಿಸಲಾಗುತ್ತದೆ. ಇದೀಗ ಎಲ್ಲಾ ವಿಭಾಗಗಳಲ್ಲೂ ಉತ್ತಮವಾಗಿರುವ ಪಂತ್ ಕೂಡ ದೊಡ್ಡ ಮೊತ್ತ ಪಡೆಯಲು ಅರ್ಹರು. ಹೀಗಾಗಿ ರಿಷಭ್ ಪಂತ್ 25-30 ಕೋಟಿ ರೂ.ಗೆ ಹರಾಜಾಗುವ ನಿರೀಕ್ಷೆಯಿದೆ ಎಂದು ಸುರೇಶ್ ರೈನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2 ಕೋಟಿ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ರಿಷಭ್​ ಪಂತ್​ (Rishabh Pant) ಮೊದಲ ಸುತ್ತಿನಲ್ಲೇ ಕಾಣಿಸಿಕೊಂಡಿದ್ದಾರೆ. ರಿಷಭ್​ ಪಂತ್​ ಮೇಲೆ ಎಲ್ಲಾ ತಂಡಗಳು ಕಣ್ಣಿಟ್ಟಿದ್ದು, ಹರಾಜಿನಲ್ಲಿ ಬೃಹತ್​ ಮೊತ್ತ ಪಡೆಯುವ ನಿರೀಕ್ಷೆ ಇದೆ. ಅಂತಿಮವಾಗಿ ರಿಷಭ್​ ಪಂತ್ (Rishabh Pant)​ ಯಾವ ತಂಡದ ಪಾಲಾಗಲಿದ್ದಾರೆ ಎಂದು ಕಾದುನೋಡಬೇಕಿದೆ.

https://www.vijayavani.net/major-bus-accident-in-jharkhands-hazaribagh-leaves-seven-dead

https://www.vijayavani.net/delhi-polls-aap-first-off-the-blocks-announces-candidates-list