ಹೈದರಾಬಾದ್: ನಾಯಕ ಪ್ಯಾಟ್ ಕಮ್ಮಿನ್ಸ್ (16ಕ್ಕೆ 3) ಸಹಿತ ಬೌಲರ್‌ಗಳ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಐಪಿಎಲ್ 18ನೇ ಆವೃತ್ತಿಯ ತನ್ನ 11ನೇ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಮೇಲುಗೈ ಸಾಧಿಸಿದ ಹಾಲಿ ರನ್ನರ್‌ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡ, ಗೆಲುವಿನೊಂದಿಗೆ ಪ್ಲೇಆ್ ಆಸೆ ಜೀವಂತವಿಡುವ ಆಸೆಗೆ ಮಳೆ ತಣ್ಣೀರು ಎರಚಿದೆ. ಡೆಲ್ಲಿ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ನಂತರ ಸನ್‌ರೈಸರ್ಸ್ ತಂಡ ಅದನ್ನು ಚೇಸಿಂಗ್
ಮಾಡಲು ಮಳೆ ಅಡ್ಡಿಪಡಿಸಿತು. ಇದರಿಂದ ಪಂದ್ಯ ರದ್ದುಗೊಂಡು ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು. ಇದು ಪ್ಯಾಟ್ ಕಮ್ಮಿನ್ಸ್ ಬಳಗವನ್ನು ಪ್ಲೇಆ್ ರೇಸ್‌ನಿಂದ ಅಧಿಕೃತವಾಗಿ ಹೊರದಬ್ಬಿದ್ದರೆ, ಅಕ್ಷರ್ ಪಟೇಲ್ ಪಡೆ ಸೋಲಿನ ಅಪಾಯದಿಂದ ಪಾರಾಗಿ ಒಂದು ಅಂಕದ ಸಮಾಧಾನದೊಂದಿಗೆ ಪ್ಲೇಆ್ ಅವಕಾಶವನ್ನು ಜೀವಂತ ಉಳಿಸಿಕೊಂಡಿತು.
ಆರ್‌ಜಿಐ ಕ್ರೀಡಾಂಗಣದಲ್ಲಿ ನಡೆದ ಡು ಆರ್ ಡೈ ಪಂದ್ಯದಲ್ಲಿ ಟಾಸ್ ಗೆದ್ದ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟರು. ಟ್ರಿಸ್ಟಾನ್ಸ್ ಸ್ಟಬ್ಸ್ (41*ರನ್, 36 ಎಸೆತ, 4 ಬೌಂಡರಿ) ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಆಶುತೋಷ್ ಶರ್ಮ (41 ರನ್, 26 ಎಸೆತ, 2 ಬೌಂಡರಿ, 3 ಸಿಕ್ಸರ್) ಜತೆಯಾಟದ ನೆರವಿನಿಂದ 7 ವಿಕೆಟ್‌ಗೆ 133 ರನ್‌ಗಳ ಪೈಪೋಟಿಯುತ ಮೊತ್ತ ಪೇರಿಸಿತು.
ಪ್ರತಿಯಾಗಿ ಸನ್‌ರೈಸರ್ಸ್ ಚೇಸಿಂಗ್‌ಗೆ ಮಳೆ ಅಡಚಣೆ ತಂದಿತು. ಭಾರಿ ಮಳೆಯಿಂದ ಪಂದ್ಯ ಸ್ಥಗಿತ ಕಂಡಿತು. ಲಿತಾಂಶ ನಿರ್ಧಾರಕ್ಕೆ ಸನ್‌ರೈಸರ್ಸ್ ಕನಿಷ್ಠ 5 ಓವರ್ ಆಡಬೇಕಿತ್ತು.
ಕಮ್ಮಿನ್ಸ್ ಆಘಾತ
ಕನ್ನಡಿಗ ಕರುಣ್ ನಾಯರ್ (0) ಪ್ಯಾಟ್ ಕಮ್ಮಿನ್ಸ್ ಎಸೆದ ಪಂದ್ಯದ ಮೊದಲ ಎಸೆತದಲ್ಲೇ ಗೋಲ್ಡನ್ ಡಕೌಟ್ ಆದರು. ನಂತರ ತಾನೆಸೆದ 2 ಓವರ್‌ಗಳ ಮೊದಲ ಎಸೆತದಲ್ಲಿ ್ಾ ಡು ಪ್ಲೆಸಿಸ್ (3) ಹಾಗೂ ಅಭಿಷೇಕ್ ಪೊರೆಲ್ (8) ವಿಕೆಟ್ ಪಡೆದ ಕಮ್ಮಿನ್ಸ್ ಡೆಲ್ಲಿ ಅಗ್ರ ಕ್ರಮಾಂಕಕ್ಕೆ ಆಘಾತ ನೀಡಿದರು. ನಂತರ ಕೆಎಲ್ ರಾಹುಲ್ (10) ಹಾಗೂ ನಾಯಕ ಅಕ್ಷರ್ ಪಟೇಲ್ (6) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 4ನೇ ವಿಕೆಟ್‌ಗೆ 10 ಎಸೆತಗಳಲ್ಲಿ 11 ರನ್‌ಗಳಿಸಿ ಬೇರ್ಪಟ್ಟರು 6ನೇ ಓವರ್‌ನಲ್ಲಿ ಹರ್ಷಲ್ ಪಟೇಲ್ ಈ ಜತೆಯಾಟ ಮುರಿದರು. 8ನೇ ಓವರ್‌ನಲ್ಲಿ ಜೈದೇವ್ ಉನಾದ್ಕತ್ ಎಸೆತದಲ್ಲಿ ಕೀಪರ್‌ಗೆ ಕ್ಯಾಚಿತ್ತ ರಾಹುಲ್ ನಿರಾಸೆ ಮೂಡಿಸಿದರು.