ಕ್ರೀಡೆ

ರಿಷಭ್​ ಪಂತ್​ಗೆ ಗದರಿದ ಸುನಿಲ್​ ಗವಾಸ್ಕರ್​! ಕಾರಣ ಹೀಗಿದೆ | Sunil Gavaskar

ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್​​ ಟ್ರೋಫಿಯ ಮುಂದಿನ ಎರಡು ಪಂದ್ಯಗಳಲ್ಲಿ(Test) ಆಕ್ರಮಣಕಾರಿ ಬ್ಯಾಟ್​ ಬೀಸದಂತೆ ವಿಕೇಟ್​ ಕೀಪರ್​ ಕಮ್​ ಬ್ಯಾಟರ್​ ರಿಷಭ್​ ಪಂತ್​ಗೆ ಮಾಜಿ ಆಟಗಾರ ಸುನಿಲ್​ ಗವಾಸ್ಕರ್(Sunil Gavaskar)​ ಸಲಹೆ ನೀಡಿದ್ದಾರೆ.

ಹೌದು, 2021ರಲ್ಲಿ ಗಬ್ಬಾದಲ್ಲಿ ನಡೆದ ಟೆಸ್ಟ್​ನ್ನು ವಿನ್ನಿಂಗ್​ ಮಾಡುವ ಮೂಲಕ ಅದ್ಭುತ ಪ್ರದರ್ಶನ ನೀಡಿದ ರಿಷಭ್ ಪಂತ್​​, ಇದೀಗ ನಡೆಯುತ್ತಿರುವ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡದೆ ಉತ್ತಮ ಬ್ಯಾಟ್ ಮಾಡಲು ಹೆಣಗಾಡುತ್ತಿದ್ದಾರೆ.

27ವರ್ಷದ ರಿಶಬ್​, ಪ್ರಸ್ತುತ ನಡೆಯುತ್ತಿರುವ ಮೂರು ಟೆಸ್ಟ್​ನ ಐದು ಇನ್ನಿಂಗ್ಸ್​ನಲ್ಲಿ ಕ್ರಮವಾಗಿ 37, 1, 21, 28 ಮತ್ತು 9 ರನ್​​ಗಳನ್ನು ಪೆರಿಸಲು ಶಕ್ತರಾಗಿದ್ದಾರೆ. ಆಕ್ರಮಣಕಾರಿ ಬ್ಯಾಟ್​ಗೆ ಹೆಸರುವಾಸಿಯಾದ ಪಂತ್​, ಪಂದ್ಯದ ಪರಿಸ್ಥಿತಿಯನ್ನು ಲೆಕ್ಕಿಸದೇ ಆಕ್ರಮಣಕಾರಿ ಹೊಡೆತಗಳಿಗೆ ಮುಂದಾಗುತ್ತಾರೆ ಎಂದು ಸುನಿಲ್​ ಗವಸ್ಕಾರ್​ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸ್ಟಾರ್​​ಸ್ಪೋರ್ಟ್​ ಸಂದರ್ಶನದಲ್ಲಿ ಮಾತನಾಡಿರುವ ಸುನಿಲ್​ ಗವಾಸ್ಕರ್​, ''ರಿಷಭ್​ ಪಂತ್​ಗೆ ಸುದೀರ್ಘಕಾಲ ಕ್ರಿಸ್​ನಲ್ಲಿಯೇ ಉಳಿಯಬೇಕು ಎಂದರೆ ಅವರು, ಮೊದಲು ಅರ್ಧಗಂಟೆ ನಿಧಾನವಾಗಿ ಬ್ಯಾಟ್​ ಬೀಸಬೇಕು. ಬಳಿಕ ಕ್ರಿಸ್​ಗೆ ಬೇರೆ ಆಟಗಾರರು ಬಂದರೆ ಅವರು ಹೆಚ್ಚು ಕಾಲ ಕ್ರಿಸ್​​ನಲ್ಲಿ ಉಳಿಯುವಂತೆ ಮಾಡಬೇಕು. ಆಕ್ರಮಕಾರಿ ಬ್ಯಾಟ್​ ಬೀಸಲು ಮುಂದಾಗಬಾರದು. ಎಂತಹ ಪರಿಸ್ಥಿತಿ ಬಂದರೂ ಕ್ರಿಸ್​ನಲ್ಲಿ ಗಟ್ಟಿಯಾಗಿ ನಿಲ್ಲುವುದು ಕಲಿಯ ಬೇಕು'' ಎಂದು ಹೇಳಿದ್ದಾರೆ.

ಪಂತ್​ಗೆ ಸಲಹೆ ನೀಡಿದ ಹೇಡನ್​​​

ಅಸ್ಟ್ರೇಲಿಯಾದ ದಂತಕತೆ ಹೇಡನ್​ ರಿಷಭ್​ ಪಂತ್​​ ಬಗ್ಗೆ ಮಾತನಾಡಿದ್ದು, ''ರಿಷಭ್​ ಒಳ್ಳೆಯ ಆಟಗಾರ, ನಾನು ಯಾವಾಗಲೀ ಅವರ ಅಭಿಮಾನಿ, ಅವರು ವಿಭಿನ್ನವಾಗಿ ಬ್ಯಾಟ್​ ಬೀಸುತ್ತಾರೆ ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಅವರು ಒತ್ತಡ ಪರಿಸ್ಥಿತಿಗಳಲ್ಲಿ ನಿರ್ಭೀತಿಯಿಂದಾಡುವ ವಿಧಾನಗಳನ್ನು ಆಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ,(ಏಜೆನ್ಸೀಸ್​).