Sunil Gavaskar: ಶನಿವಾರ (ಅ 25) ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಲಯಕ್ಕೆ ಮರಳಿರುವ ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಮುಂಬರುವ ಏಕದಿನ ವಿಶ್ವಕಪ್‌ಗೆ ಅವರನ್ನು ಆಯ್ಕೆ ಮಾಡುವುದು ತುಂಬಾ ಅಗತ್ಯವಾಗಿದೆ ಎಂದಿದ್ದಾರೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ಗವಾಸ್ಕರ್, ಮೂರು ಪಂದ್ಯಗಳ ಸರಣಿಗೆ ಇಬ್ಬರು ತಮ್ಮನ್ನು ತಾವು ಲಭ್ಯವಾಗುವಂತೆ ಮಾಡಿಕೊಂಡಿರುವುದು ಏಕದಿನ ಸ್ವರೂಪದಲ್ಲಿ ಮುಂದುವರೆಯುವ ಮೂಲಕ, ಮುಂದಿನ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟದತ್ತ ಕೊಂಡೊಯ್ಯುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದರು.
ಇದ್ನನೂ ಓದಿ:ಮಹಿಳೆಯರ ಏಕದಿನ ವಿಶ್ವಕಪ್: ಅಲನಾ ಕಿಂಗ್ ದಾಳಿಗೆ ಕಂಗೆಟ್ಟ ದಕ್ಷಿಣ ಆಫ್ರಿಕಾ; ಆಸೀಸ್ಗೆ ಅಗ್ರಸ್ಥಾನ ಭದ್ರ
ಅವರಿಬ್ಬರು ರನ್ ಗಳಿಸುತ್ತಾರೋ ಇಲ್ಲವೋ.. ಆದರೆ ತಮ್ಮ ಸಾಮರ್ಥ್ಯ ಮತ್ತು ಅನುಭವದೊಂದಿಗೆ ತಂಡಕ್ಕೆ ನೆರವಾಗಲಿದ್ದಾರೆ, ಅವರ ಪ್ರಸ್ತುತ ಫಾರ್ಮ್, ವಿಶ್ವಕಪ್ ಅಭಿಯಾನಕ್ಕೆ ಆಯ್ಕೆಯಾಗುವ ಹಕ್ಕನ್ನು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟ ಗವಾಸ್ಕರ್, ಈ ರೀತಿಯ ಅದ್ಭುತ ಪ್ರದರ್ಶನದಿಂದ ನೀವು ಅವರ ಹೆಸರುಗಳನ್ನು ನೇರವಾಗಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027 ರ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಬಹುದು ಎಂದು ಹೇಳಿದರು.
ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಬೇಗನೆ ವಿಕೆಟ್ ಒಪ್ಪಿಸಿದ್ದ ಹಿಟ್ ಮ್ಯಾನ್ ರೋಹಿತ್, ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಟೀಕೆ ಮಾಡುವವರಿಗೆ ಬ್ಯಾಟ್ ಮೂಲಕವೇ ತಿರುಗೇಟು ನೀಡಿದ್ದರು. ಮತ್ತೊಂದೆಡೆ, ವಿರಾಟ್ ಕೊಹ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಸತತ ಶೂನ್ಯ ಸಾಧನೆ ಮಾಡಿದ್ದರು, ಅಂತಿಮ ಪಂದ್ಯದಲ್ಲಿ ತಮ್ಮ ಖ್ಯಾತಿಗೆ ತಕ್ಕಂತೆ ಆಟವಾಡಿದ ಕಿಂಗ್ ಕೊಹ್ಲಿ, ಅರ್ಧಶತಕ ಗಳಿಸುವ ಮೂಲಕ ತಮ್ಮಲ್ಲಿ ಇನ್ನೂ ರನ್ ಹಸಿವಿದೆ ಎನ್ನುವುದನ್ನು ಸಾರಿ ಸಾರಿ ಹೇಳಿದರು.
ಇದನ್ನೂ ಓದಿ:3ನೇ ಏಕದಿನ, 33ನೇ ಶತಕ: ಐತಿಹಾಸಿಕ ದಾಖಲೆ ಬರೆದ ರೋಹಿತ್ ಶರ್ಮ, ಸೆಂಚುರಿ ಸ್ಟಾರ್ಗೆ ಫ್ಯಾನ್ಸ್ ಸಲಾಂ | Rohit Sharma
ಭಾರತ ತಂಡ 2-1 ಅಂತರದಲ್ಲಿ ಸರಣಿ ಸೋತರೂ, ಹಿರಿಯ ಆಟಗಾರರ ಪ್ರದರ್ಶನ ಅಭಿಮಾನಿಗಳ ಮುಖದಲ್ಲಿ ನಗು ತಂದಿದೆ.(ಏಜೆನ್ಸೀಸ್)