ಕ್ರೀಡೆ

14ನೇ ವಯಸ್ಸಿನಲ್ಲಿ ಇಂಟರ್​ನ್ಯಾಷನಲ್​ ಟೇಕ್ವಾಂಡೋ ಚಾಂಪಿಯನ್‌ಷಿಪ್ ಗೆದ್ದ ಬೆಂಗಳೂರಿನ ಸುಜನ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಕ್ರೀಡೆಗಳ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ಮೂಡುತ್ತಿದೆ. ತಮ್ಮ ಮಕ್ಕಳು ಕೂಡ ಕ್ರೀಡಾಲೋಕದಲ್ಲಿ ಹೆಸರು ಮಾಡಬೇಕು ಕೀರ್ತಿ ಗಳಿಸಬೇಕು ಎನ್ನುವ ಆಸೆಯೂ ಹೆಚ್ಚಾಗುತ್ತಿದೆ. ಇದೇ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರಿನ ಯುವ ಪ್ರತಿಬೆ ಸುಜನ್ 14ನೇ ವಯಸ್ಸಿನಲ್ಲೇ ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ. ಟೇಕ್ವಾಂಡೋ ಕ್ರೀಡೆಯಲ್ಲಿ 4 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದು, ಈಗಾಗಲೇ 3 ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಎತ್ತಿ ಹಿಡಿದಿದ್ದಾರೆ.

ಜುಲೈ 20 ರಂದು ನಡೆದ 7ನೇ ಗೆವಿನ್ ಮಲೇಷ್ಯಾ ಓಪನ್ ಇಂಟರ್​ನ್ಯಾಷನಲ್ ಟೇಕ್ವಾಂಡೋ ಚಾಂಪಿಯನ್‌ಷಿಪ್​​ನಲ್ಲಿ

3 ಚಿನ್ನ ಮತ್ತು 1 ಬೆಳ್ಳಿ ಪದಕ, 2 ಚಾಂಪಿಯನ್ಸ್ ಬೆಲ್ಟ್ ಚಾಂಪಿಯನ್ ತನ್ನದಾಗಿಸಿಕೊಂಡಿದ್ದಾರೆ. ಸುಜನ್​ಗೆ ಎಸ್ಜಿ ಟೇಕ್ವಾಂಡೋ ಕೇಂದ್ರದಲ್ಲಿ ಸುರೇಶ್​ ಮಾಸ್ಟರ್​ ತರಬೇತಿ ನೀಡಿದ್ದಾರೆ.