ಲಂಡನ್: 2019ರ ಏಕದಿನ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ ಜುಲೈ 8 ರಿಂದ ಆರಂಭಗೊಳ್ಳಲಿರುವ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಮುನ್ನಡೆಸಲಿದ್ದಾರೆ. 2ನೇ ಮಗುವಿನ ನಿರೀಕ್ಷೆಯಲ್ಲಿರುವ ನಾಯಕ ಜೋ ರೂಟ್ ದಂಪತಿ, ಪತ್ನಿ ಜತೆಗಿರುವ ಸಲುವಾಗಿ ರೂಟ್ ರಜೆ ಮೇಲೆ ತೆರಳಲಿದ್ದಾರೆ. ರೂಟ್ ಅನುಪಸ್ಥಿತಿಯಲ್ಲಿ ಬೆನ್ ಸ್ಟೋಕ್ಸ್ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ನಾಯಕತ್ವದ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಇದನ್ನೂ ಓದಿ: ಧವನ್ ಹೇರ್ಸ್ಟೈಲ್ಗೆ ಅಭಿಮಾನಿಗಳು ಫುಲ್ ಫಿದಾ..!
ಇದನ್ನೂ ಓದಿ: ನೊವಾಕ್ ಜೋಕೊವಿಕ್ ಬೆಂಬಲಕ್ಕೆ ನಿಂತ ಸೆರ್ಬಿಯಾ ಪ್ರಧಾನಿ
ಬೆನ್ ಸ್ಟೋಕ್ಸ್ ಇದುವರೆಗೂ ಪ್ರಥಮ ದರ್ಜೆ, ಲಿಸ್ಟ್ ಎ ಪಂದ್ಯಗಳಿಗೂ ತಂಡ ಮುನ್ನಡೆಸಲಿಲ್ಲ. ಯಾವುದೇ ನಾಯಕತ್ವ ಅನುಭವವಿಲ್ಲದೆ ರಾಷ್ಟ್ರೀಯ ತಂಡ ಮುನ್ನಡೆ ನಡೆಸುತ್ತಿದ್ದಾರೆ. 29 ವರ್ಷದ ಸ್ಟೋಕ್ಸ್, 2013 ರಿಂದ ಇದುವರೆಗೂ 63 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಕರೊನಾ ವೈರಸ್ ಲಾಕ್‌ಡೌನ್ ಬಳಿಕ ಮೊದಲ ಅಂತಾಷ್ಟ್ರೀಯ ಕ್ರಿಕೆಟ್ ಟೂರ್ನಿ ಇದಾಗಿದೆ.