Retirement:ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್(Steve Smith) ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ಬುಧವಾರ ವರದಿಯಾಗಿದೆ.
ಇದನ್ನೂ ಓದಿ:ಹಿಟ್ಮ್ಯಾನ್ ಅಂದ್ರೆ ಸುಮ್ನೇನಾ? ಒಂದೇ ಒಂದು ಸಿಕ್ಸರ್ನಿಂದ ಹೊಸ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮ! Rohit Sharma
ಇದೀಗ ನಡೆಯುತ್ತಿರುವ ಚಾಪಿಂಯನ್ಸ್ ಟ್ರೋಫಿ 2025ರ ನಾಕೌಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಸೋತ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದಾರೆ.
ಇನ್ನು ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಸ್ಟೀವ್ ಸ್ಮಿತ್, ಎರಡು ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡಗಳ ಭಾಗವಾಗಿದ್ದರು. ಅಲ್ಲದೆ, ಅವರು ಇದುರೆಗೂ 170 ಏಕದಿನ ಪಂದ್ಯಗಳನ್ನು ಆಡಿದ್ದು, 12 ಶತಕಗಳನ್ನು ಗಳಿಸಿದ್ದಾರೆ.
ಸ್ಟೀವ್ ಸ್ಮಿತ್ ಅವರ ಏಕದಿನ ವೃತ್ತಿಜೀವನ ಮುಗಿದಿದೆ ಎಂದು ನಂಬಲು ಕಷ್ಟ. ಅವರ ಸರಾಸರಿ ನಿಜವಾಗಿಯೂ ಉತ್ತಮವಾಗಿತ್ತು. 2015 ರ ವಿಶ್ವಕಪ್‌ನಲ್ಲಿ, ವಿಶೇಷವಾಗಿ ಪ್ರತಿ ನಾಕೌಟ್ ಗೆಲುವಿನಲ್ಲೂ ಅವರು ಅದ್ಭುತ ಪ್ರದರ್ಶನ ನೀಡಿದ್ದರು ಎಂದು ಸಾಮಾಜಿಕ ಬಳಕೆದಾರರು ಬೇಸರ ಹೊರ ಹಾಕಿದ್ದಾರೆ.(ಏಜೆನ್ಸೀಸ್).