ಶಾರ್ಜಾ: ಉಪಾಂತ್ಯಕ್ಕೇರಲು ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಸಿಲುಕಿರುವ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಶನಿವಾರ ನಡೆಯಲಿರುವ ಮತ್ತೊಂದು ಹಣಾಹಣಿಯಲ್ಲಿ ಎದುರಾಗಲಿವೆ. ಉಭಯ ತಂಡಗಳು ಇದುವರೆಗೂ ಆಡಿರುವ 2 ಪಂದ್ಯಗಳಲ್ಲಿ ತಲಾ 1 ಸೋಲು, ಗೆಲುವು ಕಂಡಿವೆ. ಜನಾಂಗೀಯ ಭೇದ ವಿರುದ್ಧದ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ (ಬಿಎಲ್‌ಎಂ) ಅಭಿಯಾನಕ್ಕೆ ಬೆಂಬಲ ನೀಡದೆ ಕಳೆದ ಪಂದ್ಯದಿಂದ ಹೊರಗುಳಿದಿದ್ದ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಹನ್ನೊಂದರ ಬಳಗಕ್ಕೆ ವಾಪಸಾಗುವ ಸಾಧ್ಯತೆಗಳಿವೆ. ಡಿಕಾಕ್ ತಂಡಕ್ಕೆ ವಾಪಸಾದರೆ ಅಗ್ರಕ್ರಮಾಂಕದ ಬ್ಯಾಟಿಂಗ್‌ಗೆ ಮತ್ತಷ್ಟು ಬಲಬಂತಾಗುತ್ತದೆ.
ಮೊದಲ ಪಂದ್ಯದಲ್ಲಿ ಆಸೀಸ್ ಎದುರು ಸೋಲಿನಲ್ಲೂ ಪ್ರಬಲ ಪೈಪೋಟಿ ನೀಡಿದ್ದ ದ.ಆಫ್ರಿಕಾ, ಎರಡನೇ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಮಣಿಸಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾ ಎದುರು ಹೀನಾಯ ಸೋಲು ಕಂಡಿರುವ ಶ್ರೀಲಂಕಾ ತಂಡ ಗೆಲುವಿನ ಹಳಿಗೇರುವ ತವಕದಲ್ಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ಮುಖಾಮುಖಿ: 16, ದ.ಆಫ್ರಿಕಾ: 11, ಶ್ರೀಲಂಕಾ: 5
ಟಿ20 ವಿಶ್ವಕಪ್‌ನಲ್ಲಿ: 3, ದ.ಆಫ್ರಿಕಾ: 2, ಶ್ರೀಲಂಕಾ: 1