ಕೊಲಂಬೊ: ಸ್ಪಿನ್ ಬೌಲರ್‌ಗಳ ಬಿಗಿ ಬೌಲಿಂಗ್ ದಾಳಿ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 78 ರನ್‌ಗಳಿಂದ ಮಣಿಸಿತು. ಈ ಮೂಲಕ 2-1ರಿಂದ ಸರಣಿ ವಶಪಡಿಸಿಕೊಂಡಿತು. ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ 14 ರನ್‌ಗಳಿಂದ ಜಯಿಸಿದ್ದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 67 ರನ್‌ಗಳಿಂದ ಗೆಲುವು ದಾಖಲಿಸಿತ್ತು.
ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 9 ವಿಕೆಟ್‌ಗೆ 203 ರನ್‌ಗಳಿಸಿತು. ಪ್ರತಿಯಾಗಿ ದ.ಆಫ್ರಿಕಾ ತಂಡ, ಮಹೀಶ್ ತೀಕ್ಷಣ (37ಕ್ಕೆ 4) ಮಾರಕ ದಾಳಿಗೆ ನಲುಗಿ 30 ಓವರ್‌ಗಳಲ್ಲಿ 125 ರನ್‌ಗಳಿಗೆ ಸರ್ವಪತನ ಕಂಡಿತು. ಶುಕ್ರವಾರದಿಂದ ಉಭಯ ತಂಡಗಳ ನಡುವೆ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ಶ್ರೀಲಂಕಾ: 9 ವಿಕೆಟ್‌ಗೆ 203 (ಅವಿಷ್ಕಾ 10, ಕಮಿಂದು 16, ಅಸಲಂಕಾ 47, ದುಶ್ಮಾಂತ 29, ಮಹಾರಾಜ್ 38ಕ್ಕೆ 3, ಜಾರ್ಜ್ ಲಿಂಡೆ 32ಕ್ಕೆ 2, ಶಮ್ಸಿ 31ಕ್ಕೆ 2), ದಕ್ಷಿಣ ಆಫ್ರಿಕಾ : 30 ಓವರ್‌ಗಳಲ್ಲಿ 125 (ಜನ್ನೆಮಾನ್ ಮಲಾನ್ 18, ಕ್ಲಾಸೆನ್ 22, ಪೆಹ್ಲುಕ್‌ವಾಯೊ 17, ಲಿಂಡೆ 18, ಮಹೀಶ್ ತೀಕ್ಷಣ 37ಕ್ಕೆ 4, ದುಶ್ಮಾಂತ 16ಕ್ಕೆ 2, ವಾನಿಂದು 32ಕ್ಕೆ 2).