ಗಾಲೆ: ಪದಾರ್ಪಣೆಯ ಪಂದ್ಯದಲ್ಲಿ ಮಿಂಚಿದ ನಿಶಾನ್ ಪೀರಿಸ್ (170ಕ್ಕೆ 6) ಮಾರಕ ಸ್ಪಿನ್ ದಾಳಿಯ ನೆರವಿನಿಂದ ಶ್ರೀಲಂಕಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ಎದುರು ಇನಿಂಗ್ಸ್ ಹಾಗೂ 154 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ಧನಂಜಯ ಡಿ ಸಿಲ್ವ ಪಡೆ 2-0ಯಿಂದ ಕ್ಲೀನ್‌ಸ್ವೀಪ್ ಸಾಧಿಸಿದೆ. ಜತೆಗೆ 15 ವರ್ಷಗಳ ಬಳಿಕ ಕಿವೀಸ್ ಎದುರು ಸರಣಿ ಗೆದ್ದ ಸಾಧನೆ ಮಾಡಿದೆ.
ಗಾಲೆ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 5 ವಿಕೆಟ್‌ಗೆ 199 ರನ್‌ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ನ್ಯೂಜಿಲೆಂಡ್, ಪೀರಿಸ್ ಹಾಗೂ ಪ್ರಭಾತ್ ಜಯಸೂರ್ಯ (139ಕ್ಕೆ 3) ದಾಳಿಗೆ ತತ್ತರಿಸಿ 81.4 ಓವರ್‌ಗಳಲ್ಲಿ 360 ರನ್‌ಗಳಿಗೆ ಆಲೌಟ್ ಆಯಿತು. ಗ್ಲೆನ್ ಫಿಲಿಪ್ಸ್ (78) ಹಾಗೂ ಮಿಚೆಲ್ ಸ್ಯಾಂಟ್ನರ್ ಪ್ರತಿರೋಧ ಸೋಲಿನ ಅಂತರತಗ್ಗಿಸಲಷ್ಟೇ ಶಕ್ತವಾಯಿತು.
ಮಾಜಿ ಆಟಗಾರ ಸನತ್ ಜಯಸೂರ್ಯ ಮುಖ್ಯ ಕೋಚ್ ಆಗಿ ಅಧಿಕಾರವಹಿಸಿಕೊಂಡ ಬಳಿಕ ಸತತ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಿರುವ ಶ್ರೀಲಂಕಾ, ಡಬ್ಲುೃಟಿಸಿ ೈನಲ್ ಆಸೆಗೆ ಬಲ ತುಂಬಿದೆ. 27 ವರ್ಷಗಳ ಬಳಿಕ ಭಾರತ ವಿರುದ್ಧ ಏಕದಿನ ಸರಣಿ, 10 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಗೆಲುವು ಬಳಿಕ 15 ವರ್ಷದ ನಂತರ ನ್ಯೂಜಿಲೆಂಡ್ ಎದುರು ಲಂಕಾ ಸರಣಿ ಗೆದ್ದಂತಾಗಿದೆ. ಈ ಯಶಸ್ಸಿನ ಬೆನ್ನಲ್ಲೇ ಲಂಕಾ ಕೋಚ್ ಆಗಿ ಜಯಸೂರ್ಯ ಅವರ ಕಾರ್ಯವಧಿಯು ಒಂದು ವರ್ಷ ವಿಸ್ತರಣೆ ಮಾಡಿರುವುದಾಗಿ ಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಶ್ರೀಲಂಕಾ: 5 ವಿಕೆಟ್‌ಗೆ 602 ಡಿಕ್ಲೇರ್. ನ್ಯೂಜಿಲೆಂಡ್: 88 ಹಾಗೂ 81.4 ಓವರ್‌ಗಳಲ್ಲಿ 360 (ಬ್ಲಂಡೆಲ್ 60, ಫಿಲಿಪ್ಸ್ 78, ಸ್ಯಾಂಟ್ನರ್ 67, ಟಿಮ್ ಸೌಥಿ 10, ಅಜಾಜ್ ಪಟೇಲ್ 22*, ಪೀರಿಸ್ 170ಕ್ಕೆ 6, ಪ್ರಭಾತ್ 139ಕ್ಕೆ3).
ಪಂದ್ಯಶ್ರೇಷ್ಠ: ಕಮಿಂದು ಮೆಂಡಿಸ್. ಸರಣಿಶ್ರೇಷ್ಠ: ಪ್ರಭಾತ್ ಜಯಸೂರ್ಯ.