ಹಾಂಗ್‌ರೆೌ: ಸ್ಕ್ವಾಷ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ದೀಪಿಕಾ ಪಲ್ಲಿಕಲ್-ಹರಿಂದರ್‌ಪಾಲ್ ಸಿಂಗ್ ಸಂಧು ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೌರವ್ ೋಷಾಲ್ ೈನಲ್‌ಗೇರುವುದರೊಂದಿಗೆ ಭಾರತಕ್ಕೆ ಸ್ಕ್ವಾಷ್‌ನಲ್ಲಿ ಅವಳಿ ಚಿನ್ನದ ಪದಕಗಳ ನಿರೀಕ್ಷೆ ಮೂಡಿದೆ. ಅಭಯ್ ಮತ್ತು ಅನಾಹತ್ ಸಿಂಗ್ ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.
ದೀಪಿಕಾ-ಹರಿಂದರ್ ಜೋಡಿ ಬುಧವಾರ ನಡೆದ ಸೆಮಿೈನಲ್ ಪಂದ್ಯದಲ್ಲಿ ಹಾಂಕಾಂಗ್‌ನ ಲೀ ಕಾ ಯಿ-ವಾಂಗ್ ಚಿ ಹಿಮ್ ವಿರುದ್ಧ 2-1ರಿಂದ ಗೆಲುವು ದಾಖಲಿಸಿತು. ಮತ್ತೊಂದೆಡೆ ಅಭಯ್-ಅನಾಹತ್ ಜೋಡಿ 1-2ರಿಂದ ಮಲೇಷ್ಯಾದ ಐಾ ಬಿಂಟಿ ಅಜ್ಮನ್-ಸೈಫಿಕ್ ಬಿನ್ ಮೊಹಮದ್ ಕಮಲ್ ಎದುರು ಸೋತಿದ್ದರಿಂದ ಮಿಶ್ರ ಡಬಲ್ಸ್‌ನಲ್ಲಿ ಆಲ್ ಇಂಡಿಯನ್ ೈನಲ್ ತಪ್ಪಿತು. ಅನುಭವಿ ಆಟಗಾರ ಸೌರವ್ ೋಷಾಲ್ ಹಾಂಕಾಂಗ್‌ನ ಲಿಯುಂಗ್ ಚಿ ವಿರುದ್ಧ 3-0ಯಿಂದ ಗೆದ್ದರು. 37 ವರ್ಷದ ಸೌರವ್ ಈ ಮುನ್ನ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.
ಹರ್ಮಿಲನ್‌ಗೆ 2ನೇ ರಜತ ಸಂಭ್ರಮ: ಪಂಜಾಬ್‌ನ ಓಟಗಾರ್ತಿ ಹರ್ಮಿಲನ್ ಬೈನ್ಸ್ ಮಹಿಳೆಯರ 800 ಮೀ. ಓಟದಲ್ಲಿ ರಜತ ಪದಕ ಗೆದ್ದುಕೊಂಡರು. ಈ ಮೂಲಕ ಕೂಟದಲ್ಲಿ ಅವಳಿ ರಜತ ಪದಕ ಸಾಧನೆ ಮಾಡಿದರು. ಈ ಮುನ್ನ 1,500 ಮೀ. ಓಟದಲ್ಲೂ ಬೆಳ್ಳಿ ಗೆದ್ದಿದ್ದರು. ಬುಧವಾರ ನಡೆದ ಸ್ಪರ್ಧೆಯಲ್ಲಿ 24 ವರ್ಷದ ಹರ್ಮಿಲನ್ 2 ನಿಮಿಷ, 3.75 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದರು. ಶ್ರೀಲಂಕಾದ ಎಂ. ತರುಷಿ (2ನಿ, 3.20ಸೆ) ಕೇವಲ 0.55 ಸೆಕೆಂಡ್ ಅಂತರದಲ್ಲಿ ಚಿನ್ನ ಒಲಿಸಿಕೊಂಡರು. 2002ರ ಬೂಸಾನ್ ಏಷ್ಯಾಡ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅಮ್ಮ ಮಾಧುರಿ ಸಿಂಗ್‌ರನ್ನು ಹರ್ಮಿಲನ್ ಮೀರಿಸಿದರು. ಮಾಧುರಿ ಏಷ್ಯಾಡ್‌ನಲ್ಲಿ 800 ಮೀ. ಓಟದಲ್ಲಿ ಬೆಳ್ಳಿ ಗೆದ್ದಿದ್ದರೆ, 1,500 ಮೀ. ಓಟದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೀಗ ಮಗಳು ಅವಳಿ ಪದಕದೊಂದಿಗೆ ಅಮ್ಮನ ಕನಸು ನನಸಾಗಿಸಿದ್ದಾಳೆ.