ಕ್ರೀಡೆ

74ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಭಾರತದ ಕ್ರೀಡಾಪಟುಗಳು...

ಬೆಂಗಳೂರು: ಭಾರತದ ಸ್ಟಾರ್ ಕ್ರೀಡಾಪಟುಗಳಾದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿಶ್ವ ಚಾಂಪಿಯನ್ ಪಿವಿ ಸಿಂಧು, ದಿಗ್ಗಜ ಸಚಿನ್ ತೆಂಡುಲ್ಕರ್, ಹಿರಿಯ ಅಥ್ಲೀಟ್ ಪಿಟಿ ಉಷಾ ಸೇರಿದಂತೆ ಹಲವು ಹಿರಿಯ-ಕಿರಿಯ ಅಥ್ಲೀಟ್‌ಗಳು 74ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭಾಶಯ ಕೋರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಜನತೆಗೆ ಶುಭಾಶಯ ಹೇಳಿದ್ದಾರೆ.

ಎಲ್ಲರಿಗೂ ಸ್ವಾತಂತ್ರ್ಯ ಸಂಭ್ರಮದ ಶುಭಾಶಯಗಳು, ಆ ದೇವರ ಆಶೀರ್ವಾದ ನಮ್ಮ ದೇಶದ ಮೇಲಿದೆ. ನಮ್ಮ ಸುರಕ್ಷತೆಗಾಗಿ ಕುಟುಂಬದವರಿಂದ ದೂರವಿದ್ದು, ದೇಶ ಕಾಯುತ್ತಿರುವ ಯೋಧರಿಗೆ ಹೆಚ್ಚಿನ ದೈವಾನುಗ್ರಹವಿರಲಿದೆ’ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್, ಎಲ್ಲರಿಗೂ 74ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು, ಮಕ್ಕಳೇ ಭಾರತದ ಭವಿಷ್ಯ, ದೇಶ ಮುನ್ನಡೆಗೆ ಅವರಿಂದ ಮಾತ್ರ ಸಾಧ್ಯ. ಅವರಿಗೆ ಉತ್ತಮ ವಾತಾವರಣ ನಿರ್ಮಿಸಿ, ಸಕರಾತ್ಮಕವಾಗಿ ತಿದ್ದಬೇಕಿದೆ ಎಂದು ಹೇಳಿದ್ದಾರೆ.

ಹಿರಿಯ ಅಥ್ಲೀಟ್, ಪಿಟಿ ಉಷಾ, ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ, ಶಿಖರ್ ಧವನ್, ಟೆನಿಸ್ ಪಟು ಸಾನಿಯಾ ಮಿರ್ಜಾ, ಭಾರತ ಮಹಿಳಾ ಹಾಕಿ ತಂಡದ ನಾಯಕ ರಾಣಿ ರಾಂಪಾಲ್ ಸೇರಿದಂತೆ ಅನೇಕ ಕ್ರೀಡಾಪಟುಗಳು ಶುಭಾಶಯ ಕೋರಿದ್ದಾರೆ.