ಬೆಂಗಳೂರು: ಏಷ್ಯಾದ ಅತ್ಯಂತ ಹಳೆಯ ಫುಟ್ಬಾಲ್ ಟೂರ್ನಿಯಾಗಿರುವ ಡುರಾಂಡ್ ಕಪ್ನ 134ನೇ ಆವೃತ್ತಿಯಲ್ಲಿ ಬೆಂಗಳೂರಿನ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ (ಎಸ್ಯುಎಫ್ಸಿ) ಭಾಗವಹಿಸಲಿದೆ. ಸೌತ್ ಯುನೈಟೆಡ್ ಟೂನಿರ್ಯಲ್ಲಿ ಸ್ಪಧಿರ್ಸಲಿರುವ ಕರ್ನಾಟಕದ ಏಕೈಕ ಫುಟ್ಬಾಲ್ ಕ್ಲಬ್ ಎನಿಸಿದೆ.
ಜುಲೈ 23ರಿಂದ ಆಗಸ್ಟ್ 27ರವರೆಗೆ 5 ರಾಜ್ಯಗಳಲ್ಲಿ ಟೂನಿರ್ಯ ಪಂದ್ಯಗಳು ನಡೆಯಲಿವೆ. "ಡುರಾಂಡ್ ಕಪ್ ಒಂದು ಟೂರ್ನಿ ಮಾತ್ರವಲ್ಲ, ಒಂದು ಪರಂಪರೆ. ಈ ಬಾರಿ ಕರ್ನಾಟಕದ ಏಕೈಕ ಕ್ಲಬ್ ಆಗಿ ಟೂನಿರ್ಯಲ್ಲಿ ಪಾಲ್ಗೊಳ್ಳುತ್ತಿರುವುದು ನಮಗೆ ದೊಡ್ಡ ಗೌರವವೆನಿಸಿದೆ. ಯುವ ಭಾರತೀಯ ಪ್ರತಿಭೆಗಳನ್ನು ಬೆಳೆಸಲು ಮತ್ತು ರಾಜ್ಯದ ಫುಟ್ಬಾಲ್ ಕನಸುಗಳನ್ನು ಈಡೇರಿಸಲು ನಾವು ನಿರಂತರವಾಗಿ ಬದ್ಧರಾಗಿರುತ್ತೇವೆ' ಎಂದು ಎಸ್ಯುಎಫ್ಸಿ ಮಾಲೀಕ ಹಾಗೂ ನಿರ್ದೇಶಕ ಶರಣ್ ಪಾರಿಖ್ ತಿಳಿಸಿದ್ದಾರೆ.