ಜೊಹಾನ್ಸ್ರ್ಬಗ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಗೆದ್ದು ನಾಲ್ಕು ದಿನಗಳ ಬಳಿಕ ತವರಿಗೆ ಮರಳಿದ ಟೆಂಬಾ ಬವುಮಾ ಸಾರಥ್ಯದ ದಣ ಆಫ್ರಿಕಾ ತಂಡಕ್ಕೆ ಬುಧವಾರ ಅದ್ದೂರಿ ಸ್ವಾಗತ ನೀಡಲಾಯಿತು. ಜೊಹಾನ್ಸ್ರ್ಬಗ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಹೂಗುಚ್ಛ ಮತ್ತು ರಾಷ್ಟ್ರೀಯ ಧ್ವಜದೊಂದಿಗೆ ಸೇರಿದ್ದರು.
27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಎತ್ತಿರುವ ದಕ್ಷಿಣ ಆಫ್ರಿಕಾ ಚೋಕರ್ಸ್ ಹಣೆಪಟ್ಟಿಯನ್ನು ಕಳಚಿದೆ. ಡಬ್ಲ್ಯುಟಿಸಿ ಟ್ರೋಫಿಯಾಗಿರುವ ಚಿನ್ನದ ಗದೆಯೊಂದಿಗೆ ಬವುಮಾ ಹೆಮ್ಮೆಯಿಂದ ವಿಮಾನ ನಿಲ್ದಾಣದಿಂದ ಹೊರಬಂದರು. ಅದರ ಬೆನ್ನಲ್ಲೇ ಜನರು ಉದ್ಘೋಷ, ಹಾಡಿನೊಂದಿಗೆ ಸಂಭ್ರಮಿಸಿದರು. ಎಲ್ಲ ಆಟಗಾರರು ಜತೆಯಾಗಿ ನಿಂತು ಪೋಸ್ ನೀಡಿದರು ಮತ್ತು ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ತಿಳಿಸಿದರು.