ಕ್ರೀಡೆ

ದಯವಿಟ್ಟು ನಮ್ಮನ್ನು ಕ್ಷಮಿಸಿ Virat Kohli... ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ RCB

ಬೆಂಗಳೂರು: 2025ರಲ್ಲಿ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್​ (IPL) ಸಾಕಷ್ಟು ಹೈಪ್​ ಪಡೆದಿದ್ದು, ಕ್ರೀಡಾಭಿಮಾನಿಗಳು ವರ್ಷಾಂತ್ಯದಲ್ಲಿ ನಡೆಯಲಿರುವ ಮೆಹ ಹರಾಜು ಪ್ರಕ್ರಿಯೆ ಮೇಲೆ ಕಣ್ಣಿಟ್ಟಿದ್ದಾರೆ. ರಿಟೇನ್​ಗೆ (Retain) ಸಂಬಂಧಿಸಿದಂತೆ ಈಗಾಗಲೇ ತಂಡಗಳು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ವಿಚಾರವಾಗಿ ಆರ್​ಸಿಬಿ (RCB) ತಂಡ ಹೆಚ್ಚು ಸದ್ದು ಮಾಡುತ್ತಿದೆ. ಮೂವರು ದೇಶೀಯ ಆಟಗಾರರಿಗೆ ಮಣೆ ಹಾಕಿರುವ ಆರ್​ಸಿಬಿ (RCB) ಪ್ರಾಂಚೈಸಿಯು ವಿದೇಶಿ ಹಾಗೂ ಇತರ ಪ್ಲೇಯರ್ಸ್​ ಮೇಲೆ ಆರ್​ಟಿಎಮ್​ (RTM) ಬಳಸುವುದು ಪಕ್ಕಾ ಆಗಿದ್ದು, ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಏಕೆಂದರೆ 18ನೇ ಆವೃತ್ತಿಯಲ್ಲಿ ಆರ್ಸಿಬಿ (RCB) ತಂಡದ ನಾಯಕರಾಗಿ ವಿರಾಟ್​ ಕೊಹ್ಲಿ (Virat Kohli) ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಈ ವಿಚಾರ ಅಭಿಮಾನಿಗಳ ಖುಷಿಯನ್ನು ಡಬಲ್​ ಮಾಡಿದೆ. 2022 ರಲ್ಲಿ ಆರ್​ಸಿಬಿ ನಾಯಕತ್ವವನ್ನು ಫಾಫ್​ ಡು ಪ್ಲೆಸಿಸ್​ಗೆ ಹಸ್ತಾಂತರ ಮಾಡುವ ಮೂಲಕ ವಿರಾಟ್​ ಕ್ಯಾಪ್ಟನ್ಸಿಯನ್ನು ತೊರೆದಿದ್ದರು. ಇದೀಗ ಫಾಫ್​ ಡು ಪ್ಲೆಸಿಸ್​ರನ್ನು (Faf Du Plesis) ತಂಡದಿಂದ ಕೈ ಬಿಡಲಾಗಿದ್ದು, ವಿರಾಟ್​ (Virat Kohli) ಮತ್ತೊಮ್ಮೆ ನಾಯಕನ ತೊಡಲಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಈ ಬಗ್ಗೆ ಮಾತನಾಡಿರುವ ಆರ್​ಸಿಬಿ (RCB) ತಂಡದ ನಿರ್ದೇಶಕ ಮೊ ಬೊಬಾಟ್​ (Mo Bobat) ಅಭಿಮಾನಿಗಳ ಆಸೆಗೆ ತಣ್ಣೀರೆರಚುವ ಕೆಲಸ ಮಾಡಿದ್ದು, ಈ ಬಗ್ಗೆ ಕಾರಣವನ್ನೂ ಸಹ ನೀಡಿದ್ದಾರೆ.

ನಾಯಕತ್ವದ ವಿಚಾರವಾಗಿ ನಾವು ಇನ್ನೂ ಯಾವ ನಿರ್ಧಾರವನ್ನು ಕೈಗೊಂಡಿಲ್ಲ. ಈ ವಿಚಾರವಾಗಿ ನಾವು ಎಲ್ಲರ ಕ್ಷಮೆಯಾಚಿಸುತ್ತೇವೆ. ನಾಯಕತ್ವದ ವಿಚಾರದಲ್ಲಿ ನಾವು ಆಯ್ಕೆಗಳಿಗೆ ಮುಕ್ತರಾಗಿದ್ದು, ನಾವು ಮಾಡಿದ ಏಕೈಕ ಸ್ಪಷ್ಟ ನಿರ್ಧಾರವೆಂದರೆ ಫಾಫ್ ಅನ್ನು ಉಳಿಸಿಕೊಳ್ಳದಿರುವುದು. ಆತ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾನೆ ಮತ್ತು ಹರಾಜಿಗೆ ಹೋದರೆ ನಮಗೆ ಮತ್ತಷ್ಟು ಉತ್ತಮ ಆಯ್ಕೆಗಳು ಸಿಗುತ್ತವೆ ಎಂಬ ಕಾರಣಕ್ಕೆ ಆತನನ್ನು ರಿಟೇನ್​ ಮಾಡಲಿಲ್ಲ. 

ಯಶ್​ ದಯಾಳ್​ ಒಬ್ಬ ಅಸಾಧಾರಣ ಪ್ರತಿಭೆಯಾಗಿದ್ದು, ಆತನನ್ನು ರಿಟೇನ್​ ಮಾಡಿರುವುದು ನಮಗೆ ಖುಷಿಯಾಗಿದೆ. ಎರಡು ಆ್ಯಂಗಲ್​ಗಳಲ್ಲಿ ಆತ ಸ್ವಿಂಗ್​ ಮಾಡುವುದು ನಮ್ಮ ಬೌಲಿಂಗ್ ದಾಳಿಗೆ ಮೌಲ್ಯಯುತ ಆಯಾಮವನ್ನು ಸೇರಿಸುತ್ತದೆ. ರಜತ್ ಪಾಟಿದಾರ್ ನಮ್ಮ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಅವರ ಅಸಾಧಾರಣ ಪ್ರತಿಭೆ ಮತ್ತು ಸ್ಥಿತಿಸ್ಥಾಪಕತ್ವವು ಈಗಾಗಲೇ ನಮ್ಮ ತಂಡದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ ಮತ್ತು ಅವರು ನಿಜವಾಗಿಯೂ ಆರ್​ಸಿಬಿಯ ಆತ್ಮವನ್ನು ಸಾಕಾರಗೊಳಿಸಿದ್ದಾರೆ. ಮುಂಬರುವ ಋತುವಿನಲ್ಲಿ ಅವರು ತಂಡದ ಪರ ಉತ್ತಮ ಪ್ರದರ್ಶನ ನೀಡುವುದನ್ನು ನಾವು ಎದುರು ನೋಡುತ್ತಿದ್ಧೇವೆ ಎಂದು ಆರ್​ಸಿಬಿ (RCB) ತಂಡದ ನಿರ್ದೇಶಕ ಮೊ ಬೊಬಾಟ್ ಮಾಹಿತಿ ನೀಡಿದ್ದಾರೆ.