ಕ್ರೀಡೆ

ಭಾರತ vs ಪಾಕಿಸ್ತಾನ ಸೆಮಿಫೈನಲ್: ಪ್ರಾಯೋಜಕತ್ವದಿಂದ ಹಿಂದೆ ಸರಿದ ಈಸ್‌ಮೈಟ್ರಿಪ್! WCL semi-final

WCL semi-final: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025 ರ ಭಾರತ-ಪಾಕಿಸ್ತಾನ ಸೆಮಿಫೈನಲ್ ಹಣಾಹಣಿಯಲ್ಲಿ ತಮ್ಮ ಪ್ರಾಯೋಜಕತ್ವದಿಂದ ಹಿಂದೆ ಸರಿಯುವುದಾಗಿ ಈಸ್‌ಮೈಟ್ರಿಪ್ ಘೋಷಿಸಿದೆ.

ಬುಧವಾರ (ಜುಲೈ30) ಬೆಳಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ EaseMyTrip ಸಂಸ್ಥಾಪಕ ನಿಶಾಂತ್ ಪಿಟ್ಟಿ, ಪಂದ್ಯಾವಳಿಯ ಸೆಮಿಫೈನಲ್ ತಲುಪಿದ್ದಕ್ಕಾಗಿ ಯುವರಾಜ್ ಸಿಂಗ್ ನೇತೃತ್ವದ ಭಾರತ ತಂಡವನ್ನು ಅಭಿನಂದನೆ ತಿಳಿಸಿದ್ದಾರೆ. ಆದರೆ, ಒಂದು ಸಂಸ್ಥೆಯಾಗಿ ಭಯೋತ್ಪಾದನೆ ಮತ್ತು ಕ್ರಿಕೆಟ್ ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎನ್ನುವ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ನಾವು ಭಾರತದೊಂದಿಗೆ ನಿಲ್ಲುತ್ತೇವೆ. ಆದರೆ, ಭಯೋತ್ಪಾದನೆಯನ್ನು ಉತ್ತೇಜಿಸುವ ದೇಶದೊಂದಿಗೆ ಸಂಬಂಧವನ್ನು ಬೆಳೆಸುವ ಯಾವುದೇ ಕಾರ್ಯಕ್ರಮವನ್ನು ನಾವು ಬೆಂಬಲಿಸಲು ಸಾಧ್ಯವಿಲ್ಲ. WCL ನಲ್ಲಿ ಭಾರತ vs ಪಾಕಿಸ್ತಾನ ಪಂದ್ಯದೊಂದಿಗೆ EaseMyTrip ಯಾವುದೇ ರೀತಿಯ ವ್ಯವಹಾರ ಸಂಬಂಧವನ್ನು ಹೊಂದಿರುವುದಿಲ್ಲ ಎಂದರು.

ಕೆಲವು ವಿಷಯಗಳು ಕ್ರೀಡೆಗಿಂತ ದೊಡ್ಡವು. ಮೊದಲು ರಾಷ್ಟ್ರ, ನಂತರ ವ್ಯವಹಾರ. ಜೈ ಹಿಂದ್ ಎಂದು EaseMyTrip ಸಂಸ್ಥಾಪಕ ನಿಶಾಂತ್ ಪಿಟ್ಟಿ ತಿಳಿಸಿದ್ದಾರೆ.

ಭಾರತವು ಪಾಕಿಸ್ತಾನ ವಿರುದ್ಧದ ಲೀಗ್​ ಪಂದ್ಯವನ್ನು ಶಿಖರ್ ಧವನ್ ಮತ್ತು ಹರ್ಭಜನ್ ಸಿಂಗ್ ಬಹಿಷ್ಕರಿಸಿದ್ದರು. ಉಭಯ ದೇಶಗಳ ನಡುವೆ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ ಎಂದು ಧವನ್, WCL ಅಧಿಕಾರಿಗಳಿಗೆ ಈ ಹಿಂದೆ ಬಂದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದರು. (ಏಜೆನ್ಸೀಸ್)