ಹಾಂಗ್‌ರೆೌ: ಏಷ್ಯಾಡ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಷಟ್ಲರ್‌ಗಳಾದ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು, ಎಚ್‌ಎಸ್ ಪ್ರಣಯ್, ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ ಕ್ವಾರ್ಟರ್‌ೈನಲ್‌ಗೇರಿದ್ದಾರೆ. ಕಿಡಂಬಿ ಶ್ರೀಕಾಂತ್, ಅಶ್ವಿನಿ ಪೊನ್ನಪ್ಪ-ತನೀಷಾ ಕ್ರಾಸ್ಟೋ ಜೋಡಿ ಸೋಲಿನೊಂದಿಗೆ ಅಭಿಯಾನ ಮುಗಿಸಿದ್ದಾರೆ.
ಪ್ರಿ ಕ್ವಾರ್ಟರ್‌ೈನಲ್‌ನಲ್ಲಿ ಪಿವಿ ಸಿಂಧು 21-16, 21-16 ಇಂಡೊನೇಷ್ಯಾದ ಪುತ್ರಿ ಕುಸುಮಾ ವಾರ್ಧಿನಿ ಎದುರು ಸುಲಭ ಗೆಲುವು ದಾಖಲಿಸಿದರು. ಮುಂದಿನ ಸುತ್ತಿನಲ್ಲಿ ಚೀನಾದ ಹಿ ಬಿಂಗ್‌ಜಿಯೊ ಸವಾಲು ಎದುರಿಸಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಸೋಲಿಗೆ ಮುಯ್ಯಿ ತೀರಿಸುವ ತವಕದಲ್ಲಿ ಸಿಂಧು ಕಣಕ್ಕಿಳಿಯಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಎಚ್‌ಎಸ್ ಪ್ರಣಯ್ 21-12,21-13 ರಿಂದ ಕಜಾಕ್‌ಸ್ತಾನದ ಡಿಮಿಟ್ರಿ ಪನಾರಿನ್ ಎದುರು ಸುಲಭ ಜಯ ಕಂಡರು. ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ 24-22, 16-21, 21-12 ರಿಂದ ಇಂಡೋನೇಷ್ಯಾದ ಲಿಯೋ ರೋಲಿ ಕಾರ್ನಾಡೊ- ಡೇನಿಯಲ್ ಮಾರ್ಟಿನ್ ಅವರನ್ನು ಮಣಿಸಿದರು.
ಅನುಭವಿ ಶ್ರೀಕಾಂತ್ 16-21, 17-21 ರಿಂದ ವಿಶ್ವ ಚಾಂಪಿಯನ್‌ಷಿಪ್ ರಜತ ಪದಕ ವಿಜೇತ ಜಪಾನ್‌ನ ಕೊಡೈ ನರೋಕಾ ಎದುರು ಮುಗ್ಗರಿಸಿದರು.
ಮಿಶ್ರ ಡಬಲ್ಸ್‌ನಲ್ಲಿ ಕನ್ನಡಿಗ ಸಾಯಿ ಪ್ರತೀಕ್-ತನೀಷ ಕ್ರಾಸ್ಟೋ, ಅಶ್ವಿನಿ ಪೊನ್ನಪ್ಪ-ತನೀಷಾ ಜೋಡಿ 16ರ ಘಟ್ಟದಲ್ಲಿ ಸವಾಲು ಅಂತ್ಯಗೊಳಿಸಿದರು.